ವಿಜಯನಗರ

ಸೂರ್ಯೋದಯವನ್ನು ಕಣ್ತುಂಬಿಕೊಂಡ ಪ್ರವಾಸಿಗರು

ವಿಜಯನಗರ : ಹಂಪಿಯಲ್ಲಿ ಸೂರ್ಯೋದಯವನ್ನು ಕಣ್ತುಂಬಿಕೊಂಡ ಪ್ರವಾಸಿಗರು. ಹಂಪಿಯ ಮಾತಂಗ ಪರ್ವತದ ಮೇಲೆ ಕುಳಿತು ಸೂರ್ಯೋದಯ ವೀಕ್ಷಣೆ ಮಾಡಿದ ಪ್ರವಾಸಿಗರು. ವಿಕೇಂಡ್ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸೂರ್ಯೋದ ನೋಡಿ ಖುಷಿ ಪಟ್ಟ, ಹಂಪಿಯ ಸ್ಮಾರಕಗಳನ್ನು ವೀಕ್ಷಣೆಗೆ ಆಗಮಿಸಿರೋ ಜನ.

ಜಿಂದಾಲ್ ಕಂಪನಿಯು ಲಾರಿ ಮಾಲಿಕರನ್ನು ನಷ್ಟ ಅನುಭವಿಸುವಂತೆ ಮಾಡುತ್ತಿದೆ

ಮರಿಯಮ್ಮನಹಳ್ಳಿ: ಜಿಂದಾಲ್‌ ಕಂಪನಿಯು ಸ್ಥಳೀಯ ಲಾರಿಗಳಿಗೆ ಕಡೆಗಣಿಸಿ, ಕನ್ವರ್ ಮೂಲಕ ಅದಿರು ಸಾಗಿಸುತ್ತದೆ ಎಂದು ಸಂಡೂರು ಲಾರಿಮಾಲಿಕರ ಸಂಘದ ಅಧ್ಯಕ್ಷ ಬಾಬುನಾಯ್ಕ ದೂರಿದರು. ಅವರು ಭಾನುವಾರ ಪಟ್ಟಣ ಸಮೀಪದ ಗಾಳೆಮ್ಮನಗುಡಿ ಗ್ರಾಮದ ಬಳಿ,ಮರಿಯಮ್ಮನಹಳ್ಳಿ ಹೋಬಳಿ‌ ಲಾರಿಮಾಲಿಕರ ಸಂಘದ ಸಭೆಯಲ್ಲಿ ಮಾತನಾಡಿದರು. ಇದೆ ಮಂಗಳವಾರ ವಿಜಯನಗರ,ಬಳ್ಳಾರಿ ಹಾಗೂ ಕೊಪ್ಪಳ ಈ 3 ಜಿಲ್ಲೆಗಳ ಸುಮಾರು ಏಳು ಸಾವಿರ ಲಾರಿಮಾಲಿಕರ ನೇತೃತ್ವದಲ್ಲಿ, ಬಳ್ಳಾರಿಯಲ್ಲಿ ಜಿಂದಾಲ್ ಕಾರ್ಖಾನೆಯ ವಿರುದ್ಧ ಬೃಹತ್ ಪ್ರತಿಭಟನಾ ಹಮ್ಮಿಕೊಳ್ಳಲಾಗಿದೆ ಎಂದರು.  ಜಿಂದಾಲ್ ಕಂಪನಿಯು ಲಾರಿ ಮಾಲಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಅಲ್ಲದೆ ಲಾರಿಗಳ ಸಾಗಾಣಿಕೆ …

ಜಿಂದಾಲ್ ಕಂಪನಿಯು ಲಾರಿ ಮಾಲಿಕರನ್ನು ನಷ್ಟ ಅನುಭವಿಸುವಂತೆ ಮಾಡುತ್ತಿದೆ Read More »

ನವರಾತ್ರಿ ಹಬ್ಬ ಆರಂಭವಾದ ಹಿನ್ನೆಲೆ

ಮರಿಯಮ್ಮನಹಳ್ಳಿ : ಪಟ್ಟಣದಲ್ಲಿ ನವರಾತ್ರಿ ಹಬ್ಬ ಆರಂಭವಾದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಬನ್ನಿ ಮಹಾಕಾಳಿ ದೇವಸ್ಥಾನಗಳು ಹಸಿರು ತೋರಣಗಳಿಂದ ಹಾಗೂ ಕಲರ್ ಕಲರ್ ಲೈಟ್‌ ಗಳಿಂದ ಕಳೆಕಟ್ಟಿದ್ದವು. ಪಟ್ಟಣದ ಪೊಲೀಸ್ ಠಾಣೆಯ ಎದುರುಗಡೆ ಇರುವ 10 ನೇ ವಾರ್ಡಿನ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಗುರುವಾರ ಬನ್ನಿ ಮಹಾಕಾಳಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ವಿಶೇಷ ಪೂಜೆ, ವಿವಿಧ ದಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ನಡೆದವು. ಇಲ್ಲಿನ ಬನ್ನಿ ಮಹಾಕಾಳಿ ದೇವಿಗೆ ಕೃಷಿ ಅಧಿಕಾರಿ ಚಿದ್ರಿ ಸತೀಶ್ ರವರು …

ನವರಾತ್ರಿ ಹಬ್ಬ ಆರಂಭವಾದ ಹಿನ್ನೆಲೆ Read More »

ಹಂಪಿಗೆ ಸಾರಿಗೆ ಸಚಿವ ಶ್ರೀರಾಮುಲು ಕುಟುಂಬ ಸಮೇತ ಭೇಟಿ

ವಿಜಯನಗರ : ಹಂಪಿಗೆ ಸಾರಿಗೆ ಸಚಿವ ಶ್ರೀರಾಮುಲು ಕುಟುಂಬ ಸಮೇತ ಭೇಟಿ .ನದಿದಡದಲ್ಲಿರೋ ಶ್ರೀ ರಾಮ ಲಕ್ಷ್ಮಣ, ಯಂತ್ರೋದ್ಧಾರಕ ಪ್ರಾಣದೇವರ ದರ್ಶನ ಪಡೆದ ಕುಟುಂಬ ಹಂಪಿಯಲ್ಲಿ ಐದು ದೇಗುಲಗಳ ಜೀರ್ಣೋದ್ಧಾರ ನಡೆಯುತ್ತಿದೆ. ಜೀರ್ಣೋದ್ಧಾರಕ್ಕೆ ಕೈ ಜೋಡಿಸಿರೋ ಸಚಿವ ಶ್ರೀರಾಮುಲು ಹೀಗಾಗಿ ಕುಟುಂಬ ಸಮೇತ ದರ್ಶನ ಪಡೆದ ಸಚಿವ ಶ್ರೀರಾಮುಲು ಯಂತ್ರೋದ್ಧಾರಕ ಮತ್ತು ರಾಮ ಲಕ್ಷ್ಮಣ ದೇವಸ್ಥಾನದ ಮುಂಭಾಗದಲ್ಲಿ ಸೋಲಾರ್ ಲೈಟ್ಸ್ ಅಳವಡಿಸಲು ಸೂಚಿಸಿದ್ದಾರೆ.

ರಾಘವೇಂದ್ರಶೆಟ್ಟಿರವರಿಗೆ ಗಾಂಧಿಪ್ರಿಯ ಪ್ರಶಸ್ತಿ

ಮರಿಯಮ್ಮನಹಳ್ಳಿ: ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ,ಹಲವು ಕ್ಷೇತ್ರಗಳ ಸಾಧಕರಿಗೆ ಕೊಡಮಾಡುವ ಗಾಂಧಿಪ್ರಿಯ ಪ್ರಶಸ್ತಿಗೆ ಪಟ್ಟಣದ ಆರ್ಯವೈಶ್ಯ ಸಂಘದ ಕಾರ್ಯದರ್ಶಿ, ಚಿಂತಕ ಡಿ.ರಾಘವೇಂದ್ರಶೆಟ್ಟಿರವರು ಭಾಜನರಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮ  ಜಯಂತಿ ನಿಮಿತ್ತ, ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿಪ್ರಿಯ ಪ್ರಶಸ್ತಿ ನೀಡಿ ಗೌರವಿಸಿದೆ.ಆಧ್ಯಾತ್ಮ ಹಾಗೂ ಸಾಧಕರಾದ ನಾಗರಾಜಾಚಾರ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.ಪ್ರತಿಷ್ಠಾನದ ಅಧ್ಯಕ್ಷ ಆರ್.ವಿಜಯಸಮರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಪ್ರಶಸ್ತಿ ಪುರಸ್ಕೃತರು ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.ಪ್ರಶಸ್ತಿ ಪುರಸ್ಕೃತರಿಗೆ ಪಟ್ಟಣದ ಆರ್ಯವೈಶ್ಯಸಮಾಜದ ಅಧ್ಯಕ್ಷರಾದ ಎಂ.ವಿಶ್ವನಾಥಶೆಟ್ಟಿ,ವಾಸವಿಮಹಿಳಾಸಮಾಜ,ವಾಸವಿಯುವಜನಸಂಘ,ಬಿಜೆಪಿ ಮುಖಂಡರು ಹಾಗೂ ಊರಿನ …

ರಾಘವೇಂದ್ರಶೆಟ್ಟಿರವರಿಗೆ ಗಾಂಧಿಪ್ರಿಯ ಪ್ರಶಸ್ತಿ Read More »

ಪ್ರಥಮ ಬಹುಮಾನ ಪಡೆದ ಯಂಕಪ್ಪರ ಜೋಡೆತ್ತು

ರಾಜಬೀದಿಯಲ್ಲಿ 101 ಎತ್ತಿನ ಜೋಡಿಗಳ ಭವ್ಯ ಮೆರವಣಿಗೆ ವಿಜಯನಗರ(ಹೊಸಪೇಟೆ): ಜಾನಪದ ಕಲೆಗಳಾದ ಡೊಳ್ಳು ಕುಣಿತ, ಪೂಜೆ ಕುಣಿತ, ಪಟ ಕುಣಿತ, ಕಂಸಾಳೆ, ಹಗಲುವೇಶದಾರಿಗಳ ವಿಭಿನ್ನ ವೇಷಗಳು ಹಾಗೂ ಕಹಳೆ ನಾದಗಳ ಸಾಕ್ಷಿಯಾಗಿ 101 ಜೋಡಿಗಳ ಎತ್ತಿನ ಬಂಡಿಯ ಮೆರವಣಿಗೆ ಹೊಸಪೇಟೆ ನಗರದ ರಾಜಬೀದಿಯಲ್ಲಿ ಸಂಭ್ರಮ ಸಡಗರದಿಂದ ಉತ್ಸವದಂತೆ ನೆರವೇರಿತು. ವಿಜಯನಗರ ಉತ್ಸವ ಹಾಗೂ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹೊಸಪೇಟೆ ನಗರದಲ್ಲಿ ಏರ್ಪಡಿಸಿದ್ದ ಎತ್ತಿನ ಬಂಡಿಯ ಮೆರವಣಿಗೆ ನೋಡುಗರ ಕಣ್ಮನ ತಣಿಸಿತು. ಬಾಳೆ ದಿಂಡುಗಳು, ಕಣ್ಣು ಕುಕ್ಕುವ ಲೈಟಿಂಗ್‍ನಿಂದ …

ಪ್ರಥಮ ಬಹುಮಾನ ಪಡೆದ ಯಂಕಪ್ಪರ ಜೋಡೆತ್ತು Read More »

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ

ವಿಜಯನಗರ(ಹೊಸಪೇಟೆ):  ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ವಿಜಯನಗರ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಬಿದ್ದಿತು. ಐತಿಹಾಸಿಕ ನಗರಿಯ ಗತ ವೈಭವದ ಸ್ಮರಣೆಯೊಂದಿಗೆ ಸಮಾರೋಪ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ,ಪರಿಸರ,ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಮಾತನಾಡಿ ರಾಜಕೀಯ ಅಧಿಕಾರ,ಸಂಪತ್ತು ಶಾಶ್ವತವಲ್ಲ.ಇದೇ ಮೈದಾನದಲ್ಲಿ ಇಂತಹದ್ದೇ ಕಾರ್ಯಕ್ರಮವೊಂದರಲ್ಲಿ ಜನರಿಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಜಿಲ್ಲಾ ರಚನೆಯನ್ನು ಇಂದು ಸಾಕಾರಗೊಳಿಸಿದ್ದೇನೆ.ಜನರು ನೀಡಿದ ಬಲವೇ …

ವಿಜಯನಗರ ಜಿಲ್ಲಾ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಭ್ರಮದ ತೆರೆ Read More »

31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ

ವಿಜಯನಗರ :ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ ಬರುವ ಮೂಲಕ ವಿಜಯನಗರ ಗತವೈಭವ ಪುನಃಸ್ಥಾಪನೆಯಾದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನುಡಿದರು. ನಗರದ ಜಿಲ್ಲಾಕ್ರೀಡಾಂಗಣದಲ್ಲಿ óಶನಿವಾರ ಸಂಜೆ ವಿದ್ಯಾರಣ್ಯ ವೇದಿಕೆಯಲ್ಲಿ ಏರ್ಪಡಿಸಿದ್ದ ವಿಜಯನಗರ ಜಿಲ್ಲೆ ಉದ್ಘಾಟನೆ ಮತ್ತು ವಿಜಯನಗರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಜಯನಗರ ಜಿಲ್ಲೆಯು ಅತ್ಯಂತ ಶ್ರೀಮಂತ ಜಿಲ್ಲೆ;ಈ ಜಿಲ್ಲೆಗಿರುವ ಪರಂಪರೆ ರಾಜ್ಯದ ಇತರೇ ಜಿಲ್ಲೆಗಳಿಗಿಲ್ಲ. ಹಂಪಿಯ ಪ್ರತಿ ಶಿಲೆ ಒಂದು ಕಥೆಯನ್ನು ಹೇಳುತ್ತಿವೆ.ಪ್ರತಿ ಕಲ್ಲು ಸಂಸ್ಕøತಿ ಸಾರುತ್ತಿವೆ, ಸಂಗೀತ ಮೂಡಿಸುತ್ತಿವೆ ಎಂದು …

31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ವಿಜಯನಗರ Read More »

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜ್ಯ ಸರಕಾರ

ವಿಜಯನಗರ :ನೂತನವಾಗಿ ಆಸ್ತಿತ್ವಕ್ಕೆ ಬಂದಿರುವ ರಾಜ್ಯದ 31ನೇ ಜಿಲ್ಲೆ ವಿಜಯನಗರದಲ್ಲಿ ರೂ.464 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದರ ಮೂಲಕ ರಾಜ್ಯ ಸರಕಾರ ಮುನ್ನುಡಿ ಬರೆದಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವಿದ್ಯಾರಣ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಗೆ ಅಧಿಕೃತವಾಗಿ ಉದ್ಘಾಟಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಈ ಪ್ರದೇಶಗಳ ಮೇಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನ ಬದ್ಧತೆಯನ್ನು …

ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜ್ಯ ಸರಕಾರ Read More »

ಮರುಕಳಿಸಿದ ವಿಜಯನಗರ ವೈಭವ

ವಿಜಯನಗರ : ವಿಜಯನಗರ ಸಾಮ್ರಾಜ್ಯವಾಳಿದ ನೆಲದಲ್ಲಿ ಮತ್ತೆ ವಿಜಯನಗರ ವೈಭವ ಮರುಕಳಿಸಿತು!. ಹೌದು ವಿಜಯನಗರ ಜಿಲ್ಲಾ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ನಡೆದ ವಿಜಯನಗರ ವೈಭವ ಮೆರವಣಿಗೆಯು ನಾಡಿನ ವೈವಿಧ್ಯಮಯ ಕಲೆಯನ್ನು ಅನಾವರಣಗೊಳಿಸಿತು;ಇದರ ಜೊತೆಗೆ ವಿಜಯನಗರ ಅರಸರ ದರ್ಬಾರ್ ಕೂಡ ನೆನಪಿಸಿತು. ನಗರದ ವಡಕರಾಯ ದೇವಸ್ಥಾನದಿಂದ ಮಧ್ಯಾಹ್ನ 3.45ಕ್ಕೆ ಆರಂಭವಾದ ವಿಜಯನಗರ ವೈಭವದ ಮೆರವಣಿಗೆಗೆ ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಹಾಗೂ ಅವಳಿ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ …

ಮರುಕಳಿಸಿದ ವಿಜಯನಗರ ವೈಭವ Read More »

Translate »
Scroll to Top