ಚಿತ್ರದುರ್ಗ

ನೂತನ ಪೌರಾಯುಕ್ತರಾಗಿ ಕೆ.ಲೀಲಾವತಿ ಅಧಿಕಾರ ಸ್ವೀಕಾರ

ಚಳ್ಳಕೆರೆ,ಜ, 6 : ಚಳ್ಳಕೆರೆ ನಗರದ ಪೌರಾಯುಕ್ತರಾಗಿ ಕೆ.ಲೀಲಾವತಿ ಗುರುವಾರ ಅಧಿಕಾರ ವಹಿಸಿಕೊಂಡರು. ಚಳ್ಳಕೆರೆ ನಗರದ ಇತಿಹಾಸದಲ್ಲಿ ಇದೇ ಪ್ರಥಮ ಭಾರಿಗೆ ಮಹಿಳಾ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶಾಸಕ ಟಿ.ರಘುಮೂರ್ತಿ ಪುಪ್ಪಗುಚ್ಚ ನೀಡಿ ಕೃತಜ್ಞತೆ ಸಲ್ಲಿಸಿದರು. ನಗರದ ಪುರಸಭೆ 1958ರಿಂದ ಇಲ್ಲಿಯ ವರೆಗೂ ಯಾವುದೇ ಮಹಿಳಾ ಅಧಿಕಾರಿ ಪೌರಾಯುಕ್ತರಾಗಿ ಬಂದಿರಲಿಲ್ಲ. 53 ವರ್ಷಗಳ ಇತಿಹಾಸದಲ್ಲಿ‌ ಬರಿ ಪುರುಷ ಅಧಿಕಾರಿಗಳೇ ಅಧಿಕಾರ ನಡೆಸಿದ್ದಾರೆ. 2022 ಅವಧಿಯಲ್ಲಿ ಮಹಿಳಾ ಅಧಿಕಾರಿಯಾಗಿ ಪ್ರಥಮ ಭಾರಿಗೆ ಅಧಿಕಾರ ಸ್ವೀಕರಿಸಿದರು.

ಇಸ್ಪಿ ಟ್ ಅಡೆ ಮೇಲೆ ದಾಳಿ: ಐದು ಜನರ ಬಂಧನ

ಚಳ್ಳಕೆರೆ,ಡಿ.೭: ನಗರದ ಹೊರವಲಯದ ಸೋಮುಗುದ್ದು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗುಂಪುಕಟ್ಟಿಕೊಂಡು ಇಸ್ಪೀಟು ದಂದೆಯಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ಪಿ ಜಿ.ರಾಧಿಕಾ ಹಾಗೂ ಚಳ್ಳಕೆರೆ ಡಿವೈಎಸ್ಪಿ ಕೆ.ವಿ.ಶ್ರೀಧರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹೇಶಗೌಡ ನೇತೃತ್ವದಲ್ಲಿ ದಾಳಿಮಾಡಿ, ಚಳ್ಳಕೆರೆ ನಗರದ ಸುನಿಲ್ ಹಾಗೂ ಇತರೆ ನಾಲ್ಕು ಜನರನ್ನು ಬಂಧಿಸಿ ಅವರಿಂದ ಆರು ಸಾವಿರ ಹಣ ವಶಕ್ಕೆ ಪಡೆದಿದ್ದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ದಾಳಿ ವೇಳೆ ಪೊಲೀಸ್ ಪೇದೆಗಳಾದ ಏಕಾಂತರೆಡ್ಡಿ, ವೆಂಕಟೇಶ, ಮಹತೇಂಶ ಉಪಸ್ಥಿತರಿದ್ದರು.

ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ

ಚಿತ್ರದುರ್ಗ,ಡಿ.7-ನೀಡಿದ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.ಮಹಮದ್ ಅಜರ್(28) ಕೊಲೆಯಾದ ವ್ಯಕ್ತಿ. ನಗರದ ಹೊರಪೇಟೆ ನಿವಾಸಿಯಾದ ಮಹಮ್ಮದ್ ಅಜರ್ ಮುಬಾರಕ್, ಪ್ರದೀಪ್ ಹಾಗೂ ಬಾಬು ಅವರ ಮಧ್ಯ ಹಣದ ವ್ಯವಹಾರ ನಡೆದಿತ್ತು ಎನ್ನಲಾಗಿದೆ. ನಿನ್ನೆಕೊಟ್ಟ ಸಾಲದ ಹಣ ವಾಪಸ್ ಕೊಡುವಂತೆ ಕೇಳಿದದ್ದಕ್ಕೆ , ಹಣ ವಾಪಸ್ ಕೊಡುವುದಾಗಿ ಹೇಳಿ ಕರೆಸಿಕೊಂಡ ಆರೋಪಿಗಳು ಕಲ್ಲು, ಮಚ್ಚಿನಿಂದ ಮಹಮ್ಮದ್ ಅಜರ್‍ನನ್ನು ಕೊಚ್ಚಿ ಕೊಲೆ ಮಾಡಿ, ನಗರದ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜ್ …

ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ Read More »

Translate »
Scroll to Top