ಚಳ್ಳಕೆರೆ,ಡಿ.೭: ನಗರದ ಹೊರವಲಯದ ಸೋಮುಗುದ್ದು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗುಂಪುಕಟ್ಟಿಕೊಂಡು ಇಸ್ಪೀಟು ದಂದೆಯಲ್ಲಿ ತೊಡಗಿದ್ದಾಗ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ಪಿ ಜಿ.ರಾಧಿಕಾ ಹಾಗೂ ಚಳ್ಳಕೆರೆ ಡಿವೈಎಸ್ಪಿ ಕೆ.ವಿ.ಶ್ರೀಧರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹೇಶಗೌಡ ನೇತೃತ್ವದಲ್ಲಿ ದಾಳಿಮಾಡಿ, ಚಳ್ಳಕೆರೆ ನಗರದ ಸುನಿಲ್ ಹಾಗೂ ಇತರೆ ನಾಲ್ಕು ಜನರನ್ನು ಬಂಧಿಸಿ ಅವರಿಂದ ಆರು ಸಾವಿರ ಹಣ ವಶಕ್ಕೆ ಪಡೆದಿದ್ದು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ದಾಳಿ ವೇಳೆ ಪೊಲೀಸ್ ಪೇದೆಗಳಾದ ಏಕಾಂತರೆಡ್ಡಿ, ವೆಂಕಟೇಶ, ಮಹತೇಂಶ ಉಪಸ್ಥಿತರಿದ್ದರು.