3.5 ಕೋಟಿ ಪಡೆದು ವಂಚನೆ ಮಾಡಿದ ಕಾಂಗ್ರೆಸ್ ಮುಖಂಡ
ಬಳ್ಳಾರಿ : ಕಾಂಗ್ರೆಸ್ ಮುಖಂಡ ಟಿ.ಜಿ.ಎರಿಸ್ವಾಮಿ ಎಂಬುವವರು ನನಗೆ ಮೇಯರ್ ಸ್ಥಾನ ಕೊಡಿಸುವುದಾಗಿ ಭರವಸೆ ನೀಡಿ ನನ್ನಿಂದ ೩.೫ ಕೋಟಿ ರೂಗಳನ್ನು ಪಡೆದು, ಇದೀಗ ಹಣ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಪಾಲಿಕೆಯ ೩೦ನೇ ವಾರ್ಡ್ ಸದಸ್ಯ ಕಾಂಗ್ರೆಸ್ ಪಕ್ಷದ ಎನ್.ಎಂ.ಡಿ ಆಸೀಫ್ ಅವರು ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ನಮೂದು ಮಾಡಿರುವುದನ್ನು ನೋಡುವುದಾದರೆ, ಕಾಂಗ್ರೆಸ್ ಮುಖಂಡ ಟಿ.ಜಿ.ಎರಿಸ್ವಾಮಿ ಯವರು ತನ್ನ ಕಡೆಯಿಂದ ೩.೫ (ಮೂರುವರೆ) …