ಇತರೆ

ಹೊಸಪೇಟೆಯ ಉತ್ತರಾಧಿ ಮಠಕ್ಕೆ ದಲಿತರ ಪ್ರವೇಶ : ಸ್ವಾಗತ ಮಾಡಿದ ಅರ್ಚಕರು

ಹೊಸಪೇಟೆ: ಅಂಬೇಡ್ಕರ್ ಜಯಂತಿ ನಿಮಿತ್ತ ಉತ್ತರಾಧಿ ಮಠಕ್ಕೆ ದಲಿತ ಹಕ್ಕುಗಳ ಹೋರಾಟ ಸಮಿತಿಯಿಂದ ಪ್ರವೇಶ
ಎಲ್ಲರಿಗೂ ಸಮಾನ ಅವಕಾಶ ನೀಡಲಿ, ಎಲ್ಲರೂ ಮಠಕ್ಕೆ ಹೋಗಲಿ .ಉತ್ತರಾಧಿ ಮಠಕ್ಕೆ ಪ್ರವೇಶ ಮಾಡಿದ ದಲಿತರನ್ನು ಅರ್ಚಕರು, ಮಠದವರು ಸ್ವಾಗತಿಸಿದರು.

ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ ಕೀರಿಟ ಧರಿಸಿದ ಪ್ರತೀಕ್ ಜಂಗಡ

ಬೆಂಗಳೂರು: ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆದ ಬೆರಗುಗೊಳಿಸುವ ಸೌಂದರ್ಯ ಸ್ಪರ್ಧೆಯಲ್ಲಿ ಪ್ರತೀಕ್ ಜಂಗಡ ಅವರು ಮಿಸ್ಟರ್ ಗೇ ವರ್ಲ್ಡ್ ಇಂಡಿಯಾ 2024 ಕಿರೀಟವನ್ನು ಅಲಂಕರಿಸಿದರು. ಗೇ ಸಮುದಾಯಕ್ಕಾಗಿಯೇ ಆಯೋಜಿಸಲಾದ ಅತ್ಯಂತ ಗಮನ ಸೆಳೆಯುವ, ವರ್ಣರಂಜಿತ ಸ್ಪರ್ಧೆಯಲ್ಲಿ ಪ್ರತೀಕ್ ಜಂಗಡ ಇತಿಹಾಸ ಬರೆದಿದ್ದಾರೆ.
ಈ ಪ್ರತಿಷ್ಠಿತ ಪ್ರಶಸ್ತಿಯು ಜಂಗಡ ಅವರ ವೈಯಕ್ತಿಕ ಸಾಧನೆ ಮಾತ್ರವಲ್ಲದೇ ಗೇ ಸಮುದಾಯದಲ್ಲಿ ಮಹತ್ವದ ಹೆಜ್ಜೆಯನ್ನೂ ಸೂಚಿಸುತ್ತದೆ. ಭಾರತೀಯ ಸಮಾಜದಲ್ಲಿ ಸ್ವೀಕಾರ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವಲ್ಲಿ ಈ ಸ್ಪರ್ಧೆ ಮಹತ್ವ ಪಡೆದುಕೊಂಡಿದೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಬಳ್ಳಾರಿ,ಏ.14: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಅಡಿಯಲ್ಲಿ ಸಂವಿಧಾನದ ಹರಿಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.

ಗುಂಪುಗಳ ಮಧ್ಯೆ ಮಾರಾ ಮಾರಿ ನಾಲ್ವರಿಗೆ ಗಂಭೀರ ಗಾಯ

ರಾಯಚೂರು : ನ್ಯಾಯ ಪಂಚಾಯತಿ ವಿಚಾರಕ್ಕೆ ಎರಡು ಗುಂಪುಗಳ ಮಧ್ಯ ಘರ್ಷಣೆ ಉಂಟಾಗಿ ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಗಳಿಂದ ಹೊಡೆದಾಡಿಕೊಂಡಿದ್ದು, ಮಾರಣಾಂತಿಕ ಹಲ್ಲೆಯಿಂದಾಗಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಹೊರ ವಲಯದ ಅಸ್ಕಿಹಾಳ ಗ್ರಾಮದಲ್ಲಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್: ಆರೋಪಿ ವಿದೇಶಕ್ಕೆ ಪರಾರಿ

ಬೆಂಗಳೂರು: ಕಾಲ್ ಗರ್ಲ್ ಗಾಗಿ ಕರೆ ಮಾಡಿ ಎಂದು ಪತ್ನಿಯ ಫೋಟೊ ಮತ್ತು ಮೊಬೈಲ್ ನಂಬರನ್ನು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿರುವ ಆರೋಪಿ ವಿದೇಶಕ್ಕೆ ಪರಾರಿಯಾಗಿರುವುದು ನಂದಿನಿ ಲೇಔಟ್ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. 40 ವರ್ಷದ ವ್ಯಕ್ತಿ ಹಾಗೂ 37 ವರ್ಷದ ಮಹಿಳೆ 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ತದನಂತರ ಇವರಿಬ್ಬರ ನಡುವೆ ಮನಸ್ತಾಪವುಂಟಾಗಿ, ಜಗಳವಾಗಿದ್ದು, ಪತಿಯಿಂದ ಮಹಿಳೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

27,067 ಹೊಸ ಉದ್ಯೋಗ ಸೃಷ್ಟಿ : ಸಿಎಂ

ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆ, ರಾಜ್ಯದಲ್ಲಿ ₹ 17,836 ಕೋಟಿ ಮೊತ್ತದ ಬಂಡವಾಳ ಹೂಡಿಕೆ: 27,067 ಹೊಸ ಉದ್ಯೋಗ ಸೃಷ್ಟಿ : ಸಿಎಂ

ಸಕಾಲ ಅರ್ಜಿ ಸ್ವೀಕೃತಿಯಿಂದ-ಸೇವೆಯವರೆಗೆ ಎಲ್ಲವನ್ನೂ ಡಿಜಿಟಲೀಕರಣಗೊಳಿಸಿ : ಕೃಷ್ಣ ಬೈರೇಗೌಡ

“ಸಕಾಲ”ವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ 1202 ಸೇವೆಗಳನ್ನು ಮುಂದಿನ 8 ತಿಂಗಳಲ್ಲಿ ಜನಸಾಮಾನ್ಯರಿಗೆ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಿರುಪತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ಪ್ರಗತಿ ಪರಿಶೀಲನೆ.

ರಾಜ್ಯದ ಭಕ್ತಾದಿಗಳಿಗೆ ತಿರುಪತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ ವಸತಿಗೃಹ ಕಾಮಗಾರಿಯನ್ನ ಮುಜರಾಯಿ ಸಚಿವ ರಾಮಲಿಂಗಾರೆರೆಡ್ಡಿ ಅವರು ಪ್ರಗತಿ ಪರಿಶೀಲನೆ ಮಾಡಿದರು.

ಸಹಕಾರಿ ಆಂದೋಲನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಲು ಪ್ರಯತ್ನ

ಸಹಕಾರಿ ಆಂದೋಲನವನ್ನು ಜನಾಂದೋಲನವನ್ನಾಗಿ ಪರಿವರ್ತಿಸಲು ಪ್ರಯತ್ನ ಮಾಡುತ್ತಿರುವ ಮೋದಿ ಸರಕಾರ, “ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ” ಎಂಬ ಮನೋಭಾವವು ಸಹಕಾರ ಚಳುವಳಿಯನ್ನು ಬಲಪಡಿಸುತ್ತದೆ.

Translate »
Scroll to Top