ಬಳ್ಳಾರಿ. : ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು KSRTC ಎದುರು ಪ್ರತಿಭಟನೆ ಮಾಡಿ ಬಳ್ಳಾರಿ ಘಟಕದ 3ನೇ ವಿಭಾಗದ ಮ್ಯಾನೇಜರ್ ಈರಮ್ಮ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ AIDSO ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ. ಈರಣ್ಣ ಅವರು ಮಾತನಾಡುತ್ತಾ ಬಳ್ಳಾರಿ ತಾಲೂಕಿನ ಅಲ್ಲೀಪುರ ಗ್ರಾಮದಿಂದ ಬಳ್ಳಾರಿಗೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೇ, ಪರದಾಡುವಂತಾಗಿದೆ. ಪ್ರತಿದಿನ ವಿದ್ಯಾರ್ಥಿಗಳು ರೂ. 50 ರಿಂದ 70 ರೂ. ವರೆಗೆ ಖರ್ಚು ಮಾಡಿ ಬರುವಂತಾಗಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ 2-3 ತರಗತಿಗಳು ಹಾಜರಾಗಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಶಿಕ್ಷಣದ ಹಿತಾದೃಷ್ಟಿಯಿಂದ ಬೆಳಿಗ್ಗೆ 8.45 ನಿಮಿಷಕ್ಕೆ ಅಲ್ಲಿಪುರದಿಂದ ಸುಧಾ ಕ್ರಾಸ್, 2ನೇ ರೈಲ್ವೇ ಗೇಟ್, 1ನೇ ರೈಲ್ವೇ ಗೇಟ್, ಮೋತಿ, ರಾಯಲ್ ಸರ್ಕಲ್ ಮುಖಂತರ ದುರ್ಗಮ್ಮ ಗುಡಿ ವರೆಗೂ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಶಂಕರ್, ಉದಯ್ ಕಿರಣ್, ರಾಜೇಶ್, ಉಪೇಂದ್ರ, ಇತರರು ಭಾಗವಹಿಸಿದ್ದರು.