ಸರ್ಕಾರಿ ಬಸ್ ಗಳನ್ನು ನಿಲ್ಲಿಸಲು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ

ನಾಯಕನಹಟ್ಟಿ : ತಳುಕು, ಬಿಜಿಕೆರೆ,ಹಿರೇಹಳ್ಳಿ, ಹಾನಗಲ್ ಗ್ರಾಮಗಳ  ಬಸ್ ನಿಲ್ದಾಣಗಳಿಗೆ ksrtc  ಬಸ್ ಗಳು  ಬಂದು ಹೋಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಚಳ್ಳಕೆರೆ ವಿಕಲಚೇತನರ ಒಕ್ಕೂಟ ಹಾಗೂ  ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ  ನಾಯಕನಹಟ್ಟಿ ಸಮೀಪದ ತಳಕು  ಹೋಬಳಿಯ ಗರಣಿ ಕ್ರಾಸ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ  ನಡೆಸಲಾದ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ  ಮಾತನಾಡಿ, ತಳುಕು, ಬಿಜಿಕೆರೆ, ಹಿರೇಹಳ್ಳಿ, ಹಾನಗಲ್ ಗ್ರಾಮಗಳ  ಬಸ್ ನಿಲ್ದಾಣಗಳಿಗೆ ksrtc  ಬಸ್ ಗಳು  ಬಂದು ಹೋಗಬೇಕು. ಅಲ್ಲದೆ ksrtc ಬಸ್ ಗಳು ರಾತ್ರಿ ವೇಳೆ ಗ್ರಾಮಗಳಿಗೆ ಬಾರದೆ  ಹೆದ್ದಾರಿಯ ಕ್ರಾಸ್ ಗಳ ಬಳಿ ಪ್ರಯಾಣಿಕರ ಕುಟುಂಬಗಳನ್ನು ಇಳಿಸಿ ಹೋಗುತ್ತಾರೆ. ಇದರಿಂದ  ಪ್ರಯಾಣಿಕರ  ಕುಟುಂಬಗಳಿಗೆ ಏನಾದರೂ ತೊಂದರೆ  ಆದರೆ ಸಂಬಂಧಪಟ್ಟ ಬಸ್ ಕಂಡಕ್ಟರ್ ಹಾಗೂ ಡ್ರೈವರ್ ಗಳು ಹೊಣೆ ಹೋರುತ್ತಾರೆಯೇ ಎಂದು ಪ್ರಶ್ನಿಸಿದರು..

ಅಲ್ಲದೇ ತಳುಕು, ಬಿಜಿಕೆರೆ, ಹಿರೇಹಳ್ಳಿ, ಹಾನಗಲ್, ಗ್ರಾಮಗಳ ಬಸ್ ನಿಲ್ದಾಣಗಳಿಗೆ ksrtc ಬಸ್ ಗಳು  ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುತ್ತಿರುವುದರಿಂದ ಈ ಗ್ರಾಮಗಳ  ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.  ಹಾಗೂ ರಾತ್ರಿ ವೇಳೆ ಗ್ರಾಮಗಳ ಬಸ್ ನಿಲ್ದಾಣಗಳಿಗೆ ಬಸ್ ಗಳು  ಬಾರದೇ ಗ್ರಾಮಕ್ಕೆ  2 km ದೂರದಲ್ಲಿರುವ ಹೆದ್ದಾರಿಯಲ್ಲಿಯೇ  ಇಳಿಸಿ ಹೋಗುತ್ತಿರುವುದನ್ನು ತಪ್ಪಿಸಬೇಕು ಈ ಸಂಬಂಧ ಕಟ್ಟು ನಿಟ್ಟಿನ ಆದೇಶ ನೀಡಬೇಕೆಂದು ಮಾನವಿ ಮಾಡಿದರು…

 

 ಈ ಸಂದರ್ಭದಲ್ಲಿ ಬಿಟಿ ನಾಗಭೂಷಣ ರಾಜ್ಯ ಸಂಚಾಲಕರು ಬಿಜಿಕೆರೆ, ಕುಮಾರಣ್ಣ , ತಳುಕು ಪಿಎಸ್ಐ  ಲೋಕೇಶ್, ಪ್ರಭು ಕುಮಾರ್, ಚಳ್ಳಕೆರೆ ಡಿಪೋ ವ್ಯವಸ್ಥಾಪಕ ನಿರಂಜನ್, ಸಂಚಾರಿ ಅಧಿಕಾರಿ ಚಿತ್ರದುರ್ಗ ಮಂಜುನಾಥ್, ಚಂದ್ರಶೇಖರ್ ನಿಂಗಣ್ಣ, ವೀರಣ್ಣ ವಲಸೆ, ತಿಪ್ಪೆ ಸ್ವಾಮಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top