ಲೋಕಸಭೆ ಚುನಾವಣೆಯ ಕೊನೆಯ ಹಂತದ ಮೊದಲು, ಗೃಹ ಸಚಿವ ಅಮಿತ್ ಶಾ ಅವರು ಖಾಸಗಿ ಮಾಧ್ಯಮಕ್ಕೆ ವಿಶೇಷ ಸಂದರ್ಶನ ನೀಡಿದ್ದು, ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಪಕ್ಷದ ನೀತಿ ಮತ್ತು ಚುನಾವಣಾ ಕರ‍್ಯತಂತ್ರದ ಬಗ್ಗೆ ಮಾತನಾಡುವ ಅವರು ಪ್ರತಿಪಕ್ಷಗಳ ಆರೋಪಗಳ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಯ ‘ಅಬ್ಕಿ ಬಾರ್, ಚಾರ್ ಸೌ ಪಾರ್ ಘೋಷಣೆಯ ಒಳಾರ್ಥವನ್ನು ತಿಳಿಸಿದ್ದಾರೆ.
ಇದು ಘೋಷಣೆಯಲ್ಲ. ೩೦ ವರ್ಷಗಳ ಅಸ್ಥಿರ ಸರ್ಕಾರಗಳಿಂದ ದೇಶ ಸಾಕಷ್ಟು ನಷ್ಟ ಅನುಭವಿಸಿದೆ. ಇದು ಅತ್ಯಂತ ಕೆಟ್ಟ ಸಮಯವಾಗಿತ್ತು. ಕಾಂಗ್ರೆಸ್‌ನಂತೆಯೇ ನಮ್ಮಿಂದಲೂ ರ‍್ಕಾರ ರಚನೆಯಾಗಿದೆ. ಅಟಲ್ ಜೀ ರ‍್ಕಾರವನ್ನು ಚೆನ್ನಾಗಿ ನಡೆಸಿದ್ದರು. ಭಾರತ ಪರಮಾಣು ಶಕ್ತಿಯಾಯಿತು. ಆದರೆ, ಯುಪಿಎ ರ‍್ಕಾರ ಬಂದಾಗ ಭಾರತ ಜಗತ್ತಿನ ಓಟದಲ್ಲಿ ತೀರಾ ಹಿಂದುಳಿಯಿತು.
ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರು ಸ್ಥಿರತೆಯನ್ನು ಕಂಡಿದ್ದಾರೆ ಕಳೆದ ಹತ್ತು ರ‍್ಷಗಳಲ್ಲಿ ದೇಶದ ಜನತೆ ಸ್ಥಿರತೆಯನ್ನು ಕಂಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. ಆದ್ದರಿಂದ, ದೇಶದ ಜನತೆಯೂ ಬಲಿಷ್ಠ ಮತ್ತು ನರ‍್ಣಾಯಕ ನಾಯಕತ್ವವನ್ನು ಬಯಸುತ್ತಾರೆ. ಹೀಗಾಗಿ ಸರ‍್ವಜನಿಕರು ೪೦೦ ಸೀಟು ಕೊಡುತ್ತಾರೆ ಎಂಬ ವಿಶ್ವಾಸ ನಮಗಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಇಂಡಿಯಾ ಒಕ್ಕೂಟ ೧೦೦ ಸೀಟನ್ನು ಗೆಲ್ಲುವುದೂ ಕಷ್ಟ ಎಂದು ಹೇಳಿದರು.
ಎಲ್ಲರೂ ಬೆಳೆಯಬೇಕು ಎಂಬುದು ನಮ್ಮ ಆಶಯ ನಾವು ಬೆಳೆಯಬೇಕು ಎಂದರೆ ಮತ್ತೊಬ್ಬರಿಗೆ ಹಾನಿ ಮಾಡಬೇಕು ಎಂರ‍್ಥವಲ್ಲ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮೂಲಕ ಕೇಜ್ರಿವಾಲ್ ರ‍್ಕಾರವನ್ನು ರಚಿಸಿದ್ದಾರೆ. ಅದೇ ಕಾಂಗ್ರೆಸ್‌ನೊಂದಿಗೆ ಚುನಾವಣೆಗೆ ಸ್ರ‍್ಧಿಸುತ್ತಿದ್ದಾರೆ,ನೀವು ನಿಮ್ಮ ಭರವಸೆಯನ್ನು ಉಲ್ಲಂಘಿಸಿದಾಗ ಅಧಿಕಾರ ಕೊನೆಗೊಳ್ಳುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ದೆಹಲಿಯ ಎಲ್ಲಾ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ದೆಹಲಿಯ ಎಲ್ಲಾ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ರ‍್ಧಿಸುತ್ತಿವೆ. ದೆಹಲಿಯಲ್ಲಿ ಒಗ್ಗೂಡಿ ಈ ಮೈತ್ರಿಯನ್ನು ಸ್ವಹಿತಾಸಕ್ತಿಯ ಆಧಾರದ ಮೇಲೆ ರಚಿಸಲಾಗಿದೆ. ಇದು ತತ್ವವನ್ನು ಆಧರಿಸಿದ್ದರೆ, ಅದು ಇಡೀ ದೇಶದಲ್ಲಿ ಇರುತ್ತಿತ್ತು. ಇದು ಯಾವ ರೀತಿಯ ಮೈತ್ರಿ ಎಂದು ನನಗೆ ರ‍್ಥವಾಗುತ್ತಿಲ್ಲ. ಕೆಲವೆಡೆ ಒಟ್ಟಿಗೇ ಹೊಡೆದಾಡಿದರೆ ಮತ್ತೆ ಕೆಲವೆಡೆ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ.
ಹತ್ತು ವರ್ಷಗಳಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಪಂಜಾಬ್‌ನಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ರ‍್ಧಿಸುವ ಪ್ರಶ್ನೆಗೆ ಉತ್ತರಿಸಿದ ಶಾ, ನಾವು ಚುನಾವಣೆಯಲ್ಲಿ ಉತ್ತಮವಾಗಿ ಸ್ರ‍್ಧಿಸುತ್ತಿದ್ದೇವೆ ಎಂದು ಹೇಳಿದರು. ಪಂಜಾಬ್ ಹೇಗೆ ಡ್ರಗ್ ಮುಕ್ತವಾಗಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಂಜಾಬ್ ಸೇರಿದಂತೆ ಇಡೀ ದೇಶದಲ್ಲಿ ಡ್ರಗ್ಸ್ ದಂಧೆಗೆ ಮೋದಿ ರ‍್ಕಾರ ಕಡಿವಾಣ ಹಾಕುತ್ತಿದೆ. ನಾವು ಮಾದಕ ವಸ್ತುಗಳ ವಿರುದ್ಧ ಹೋರಾಡುತ್ತಿದ್ದೇವೆ. ಕಳೆದ ಹತ್ತು ರ‍್ಷಗಳಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲಾಗಿದೆ ಎಂದು ವರದಿಯಾಗಿದೆ.