ಭೋಗ ನಂದೀಶ್ವರ ಸೇರಿ ವಿವಿಧ ಶಿವನ ದೇವಾಯಗಳಿಗೆ ಭೇಟಿ ನೀಡಿದ ಎಂ.ಎಸ್. ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ : ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಅವರು ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೆಂಗಳೂರಿನ ಮತ್ತೀಕೆರೆ ಈಶ್ವರ ದೇವಾಲಯದಲ್ಲಿ ದರ್ಶನ ಪಡೆದ ಅವರು, ನಂತರ ಚಿಕ್ಕಬಳ್ಳಾಪುರದ ಖ್ಯಾತ ಭೋಗ ನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

 

ದೇವನಹಳ್ಳಿಯ ಬೊಮ್ಮವಾರದ ನಂಜುಂಡೇಶ್ವರ ದೇವಾಲಯ, ಗೌರಿ ಬಿದನೂರಿನ ಈಶ್ವರ ದೇವಾಲಯ, ನೆಲಮಂಗಲ ತಾಲ್ಲೂಕಿನ ಮದುರೆ ಹೊಬಳಿಯ ಈಶ್ವರ ದೇವಾಲಯಗಳಲ್ಲಿ ದರ್ಶನ ಪಡೆದರು.

 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೂ ಸಂಪ್ರದಾಯದಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ಬಾರಿ ಮಹಿಳಾ ದಿನಾಚರಣೆ, ಶಿವರಾತ್ರಿ ಒಟ್ಟಿಗೆ ಬಂದಿರುವುದು ಅತ್ಯಂತ ವಿಶೇಷ. ಈಶ್ವರ ಅರ್ಧನಾರೀಶ್ವರನಾಗಿಯೂ ನಮ್ಮೆಲ್ಲರ ಮನಸ್ಸಿನಲ್ಲಿ ನೆಲೆಸಿದ್ದು, ಸಮಸ್ತ ಮಹಿಳಾ ಸಮುದಾಯಕ್ಕೆ ಶಿವ ಒಳ್ಳೆಯದು ಮಾಡಲಿ. ಉತ್ತಮ ಮಳೆ, ಬೆಳೆಯಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top