ಬಳ್ಳಾರಿ: ಅತಿಯಾದ ವೇಗ, ತಪ್ಪಿದ ನಿಯಂತ್ರಣ: ಹಳ್ಳಕ್ಕೆ ಉರುಳಿದ ಕಾರು!

Kannada Nadu
ಬಳ್ಳಾರಿ: ಅತಿಯಾದ ವೇಗ, ತಪ್ಪಿದ ನಿಯಂತ್ರಣ: ಹಳ್ಳಕ್ಕೆ ಉರುಳಿದ ಕಾರು!

ಬಳ್ಳಾರಿ: ಬಳ್ಳಾರಿ ನಗರದ ಅಂದ್ರಳ್ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಕಾರು ಅಪಘಾತವೊಂದು ಸಂಭವಿಸಿದೆ. ಕಣೆಕಲ್ಲು ಬಸ್ ನಿಲ್ದಾಣದ ಕಡೆಯಿಂದ ಅಂದ್ರಳ್ ಕಡೆಗೆ ಅತೀ ವೇಗವಾಗಿ ನುಗ್ಗಿ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿರುವ ಘಟನೆ ನಡೆದಿದೆ.

ಮಂಗಳವಾರ ಬೆಳಿಗ್ಗೆ ಸುಮಾರು 8:30ರ ಸಮಯದಲ್ಲಿ ಈ ಘಟನೆ ನಡೆದಿದೆ. ಕಣೆಕಲ್ ಮಾರ್ಗವಾಗಿ ರಾಣಿತೋಟದ ಮೂಲಕ ಚಲಿಸುತ್ತಿದ್ದ ಈ ಕಾರು, ಅಂದ್ರಳ್ ಸಮೀಪಿಸುತ್ತಿದ್ದಂತೆ ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಹಳ್ಳಕ್ಕೆ ಹಾರಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕಾರಿನಲ್ಲಿ ಚಾಲಕ ಒಬ್ಬನೇ ಇದ್ದ ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸುತ್ತಿದ್ದAತೆಯೇ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ, ಹಳ್ಳಕ್ಕೆ ಬಿದ್ದಿದ್ದ ಕಾರಿನಲ್ಲಿದ್ದವರನ್ನು ರಕ್ಷಿಸಲು ತಕ್ಷಣವೇ ಸಹಾಯ ಕಾರ್ಯಕ್ಕೆ ಮುಂದಾಗಿದ್ದಾರೆ.

ಸದ್ಯಕ್ಕೆ ಚಾಲಕನ ಸ್ಥಿತಿ ಮತ್ತು ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";