ವಿಜಯನಗರ ವಿವಿಯಲ್ಲಿ “ಸಾಂಸ್ಕøತಿಕ ವೈಭವ 2022”-ಅಂತರ್ ವಿಭಾಗೀಯ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮ

ವಿದ್ಯಾರ್ಥಿಗಳ ಸೃಜನಶೀಲತೆ ಅನಾವರಣಕ್ಕೆ ಸಾಂಸ್ಕøತಿಕ ಚಟುಟಿಕೆಗಳು ಸಹಕಾರಿ:ಶಶಿಧರ ನರೇಂದ್ರ
ಬಳ್ಳಾರಿ: ಕಲಾವಿದನಾದವನು ಮಾತ್ರ ಪರಿಪೂರ್ಣವಾದ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಕಲಾವಿದ ಪ್ರಕೃತಿ ಮತ್ತು ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಜೀವನೊತ್ಸಾಹ ಮತ್ತು ಸೃಜನಶೀಲತೆ ರೂಪಿಸುತ್ತದೆ ಎಂದು ಧಾರವಾಡದ ನಾಟಕಕಾರರು, ನಿರ್ದೇಶಕರು, ನಟರು, ಆಕಾಶವಾಣಿ ಕೇಂದ್ರದ ಡಾ. ಶಶಿಧರ ನರೇಂದ್ರ ಹೇಳಿದರು.
ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ “ಸಾಂಸ್ಕøತಿಕ ವೈಭವ 2022” ಅಂತರ್ ವಿಭಾಗೀಯ ಸಾಂಸ್ಕøತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೆ ಅವರದೆ ಆದಂತಹ ಕಲೆಯಿರುತ್ತದೆ. ಕಲಾವಿದನಿಗೆ ವಯಸ್ಸಿನ ನಿರ್ಬಂಧವಿಲ್ಲ. ಅದನ್ನು ಸೂಕ್ತವಾದ ಸಮಯದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಸಾಂಸ್ಕøತಿಕ ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ಅವರ ಸೃಜನಶೀಲತೆ, ಪ್ರತಿಭೆ ಮತ್ತು ಉತ್ಸಾಹವನ್ನು ಬಿಂಬಿಸಲು ಇಂತಹ ವೇದಿಕೆಗಳು ಪ್ರಮುಖ ಪಾತ್ರವಹಿಸುತ್ತವೆ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಶಂಕರಗೌಡ ಸಿ.ಪಾಟೀಲ್ ಅವರು ಮಾತನಾಡಿ, ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದರು.
ಕಲೆ ಮನರಂಜನೆಯಾಗಿರದೆ ಮನುಷ್ಯನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಲೆ ನಶಿಸಿ ಹೋಗುತ್ತಿದೆ. ಆದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಇಂತಹ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯದ ವಿತ್ತಾಧಿಕಾರಿಗಳಾದ ಡಾ. ಕೆ ಸಿ ಪ್ರಶಾಂತ್ ಹೇಳಿದರು.
ವಿದ್ಯಾರ್ಥಿಕಲ್ಯಾಣ ಅಧಿಕಾರಿಗಳಾದ ಪ್ರೊ.ಜಿ.ಪಿ.ದಿನೇಶ್ ಅವರು ಮಾತನಾಡಿ, ಫೆಬ್ರವರಿ 25 ಮತ್ತು 26 ಎರಡು ದಿನಗಳಲ್ಲಿ ನಡೆಯುವ “ಸಾಂಸ್ಕøತಿಕ ವೈಭವ 2022” ಅಂತರ್ ವಿಭಾಗೀಯ ಸಾಂಸ್ಕøತಿಕ ಸ್ಪರ್ಧೆಗಳ ಈ ಕಾರ್ಯಕ್ರಮಕ್ಕೆ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಿಂದ 200 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಿಶ್ವವಿದ್ಯಾಲಯದ 16 ವಿಭಾಗಗಳು, 26ಕ್ಕೂ ಹೆಚ್ಚು ಸ್ಪರ್ಧೆಗಳು ಮತ್ತು ಒಟ್ಟಾರೆಯಾಗಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top