ಬಳ್ಳಾರಿ: ಸೈಕಲಿಸ್ಟ್ ಅಂಡ್ ರನ್ರ‍್ಸ್ ಫೌಂಡೇಷನ್ ಮೂರನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಆಗಸ್ಟ್ ೪ರಂದು ಸ್ಟೀಲ್ ಸಿಟಿ ರನ್ ಆವೃತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮುಖ್ಯಸ್ಥ ರವಿಶಂಕರ್ ತಿಳಿಸಿದ್ದಾರೆ.
ಬಳ್ಳಾರಿ ನಗರದ ಖಾಸಗೀ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ಸೈಕಲಿಸ್ಟ್ ಅಂಡ್ ರನ್ರ‍್ಸ್ ಫೌಂಡೇಷನ್‌ನ ಅಧ್ಯಕ್ಷ ರವಿಶಂಕರ್ ಅವರು, ಆರೋಗ್ಯ ಮತ್ತು ಕ್ಷೇಮಕ್ಕಾಗಿ ಸೈಕ್ಲಿಸ್ಟ್ ಫೌಂಡೇಶನ್ ಪ್ರವರ್ತಕ ಶಕ್ತಿಯಾಗಿದ್ದು, ಈ ಸಂಸ್ಥೆ ಪ್ರಾರಂಭಗೊಂಡು ಮೂರು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಮೂರನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಆಗಸ್ಟ್ ತಿಂಗಳ ೪ರಂದು ಸ್ಟೀಲ್ ಸಿಟಿ ರನ್ ಎಂಬ ಸೈಕ್ಲಿಂಗ್ ಸ್ಪರ್ಧೆಯನ್ನು ನಡೆಸಲಾಗುತ್ತಿದೆ
ಎಂದರಲ್ಲದೆ ಸ್ಪರ್ಧೆಯ ಬಗೆಗಿನ ಇನ್ನಷ್ಟು ಮಾಹಿತಿಯನ್ನು ನೀಡಿದರು.
Facebook
Twitter
LinkedIn
Telegram
WhatsApp
Email
Print