ರಾಷ್ಟ್ರೀಯ ಚಿತ್ರಕಲಾ ಒಲಂಪಿಯಾಡ್ ನಲ್ಲಿ ಬಳ್ಳಾರಿಯ ಬಾಲಕಿಗೆ ದ್ವಿತೀಯ ಸ್ಥಾನ

ಬಳ್ಳಾರಿ: ನಗರದ ಜೆನಿಸಿಸ್‍ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಕುಲಕರ್ಣಿ‌ ರಾಷ್ಟ್ರ ಮಟ್ಟದ ಇಂಡಿಯನ್ ಟಾಲೆಂಟ್ ಒಲಂಫಿಯಾಡ್ ನ ಚಿತ್ರಕಲಾ ವಿಭಾಗದ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ.

ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಇಂಡಿಯನ್ ಟಾಲೆಂಟ್ ಒಲಂಫಿಯಾಡ್  ರಾಷ್ಟ್ರೀಯ ಡ್ರಾಯಿಂಗ್ ಒಲಂಪಿಯಾಡ್ ಸ್ಪರ್ಧೆಯಲ್ಲಿ ಬಳ್ಳಾರಿಯ ಖಾಸಗಿ ಚಾನಲ್ ನ ವರದಿಗಾರರಾದ ನರಸಿಂಹಮೂರ್ತಿ ಕುಲಕರ್ಣಿ ಅವರ ಸುಪುತ್ರಿ ಶ್ರೀರಕ್ಷಾ ಕುಲಕರ್ಣಿ‌ ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ  ರಾಜ್ಯಕ್ಕೆ ಎರಡನೇ ಸ್ಥಾನ ಗಿಟ್ಟಿಸಿಕೊಂಡಿರುವುದು ಪ್ರಶಂಸನೀಯವಾಗಿದ್ದು, ಬಳ್ಳಾರಿ ಜಿಲ್ಲೆಗೆ ಹಾಗೂ ರಾಜ್ಯಕ್ಕೂ  ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕಿ ವರ್ಗದವರು ಸೇರಿದಂತೆ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

Facebook
Twitter
LinkedIn
WhatsApp
Telegram

Leave a Comment

Your email address will not be published. Required fields are marked *

Translate »
Scroll to Top