ಅಹಮಾದಾಬಾದ್ ಡಿಫೆಂಡರ್‍ಸ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಬೆಂಗಳೂರು ಟ್ರೋಫಿಡೋಸ್

ಚೆನ್ನೈ : ಚೆನ್ನೈನ ಜವಾಹರ್‌ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೆ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟ್ರೋಫಿಡೋಸ್ ತಂಡ ಅಹಮಾದಾಬಾದ್ ಡಿಫೆಂಡರ್ಸ್  ವಿರುದ್ಧ ಗೆಲುವು ಸಾಧಿಸಿದೆ.

 

ಅಹಮಾದಾಬಾದ್ ತಂಡವನ್ನು 15-17, 15-13 ಹಾಗೂ 15-13ರ ಅಂತರದಲ್ಲಿ ಬೆಂಗಳೂರು ತಂಡ ಮಣಿಸಿತು. ಕಳೆದ ಸೋಮವಾರ ಅಹಮದಾಬಾದ್ ತಂಡದ ವಿರುದ್ಧ ಪರಾಭವಗೊಂಡಿತ್ತು. ಬೆಂಗಳೂರು ತಂಡ ನೇರ ಸೆಟ್ ಗಳಿಂದ ಗೆಲುವು ಸಾಧಿಸಿತು.

ಬೆಂಗಳೂರು ಟ್ರೋಫಿಡೋಸ್‌ನ ಥಾಮಸ್ ಹೆಪ್ಟಿನ್ ಸ್ಟಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬೆಂಗಳೂರು ತಂಡದ ಮುತ್ತುಸ್ವಾಮಿ ಅವರ ತಂತ್ರ ಫಲ ನೀಡಿತು. ಮುಜೀಬ್ ಅದ್ಭುತ ಬ್ಲ್ಯಾಕ್ ಗಳ ಮೂಲಕ ಗಮನ ಸೆಳೆದರು. ಅಹಮದಾಬಾದ್ ತಂಡದ ಆಟಗಾರರರು ಎಸಗಿದ ಲೋಪ ಬೆಂಗಳೂರಿಗೆ ವರದಾನವಾಯಿತು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top