ರಾಜ್ಯ ಉಪಾಧ್ಯಕ್ಷರಾಗಿ ಬಾಲಕೃಷ್ಣ ಆಯ್ಕೆ

ದೇವನಹಳ್ಳಿ,ಜ,7 : ತಾಲ್ಲೂಕು ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ ಹೆಚ್.ಬಾಲಕೃಷ್ಣ ರವರನ್ನು ಇದೇ ಮೊದಲ ಬಾರಿಗೆ ರಾಜ್ಯ ಸಂಘದ ಉಪಾಧ್ಯಕ್ಷರಾಗಿ ಅಧಿಕಾರ ನೀಡುತ್ತಿದ್ದು ಇವರ ಸೇವೆ ತಾಲ್ಲೂಕಿಗೆ ಸೀಮಿತವಾಗಬಾರದೆಂದು ರಾಜ್ಯ ಮಟ್ಟದಲ್ಲೂ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕೆನ್ನುವ ದೃಷ್ಟಿಯಿಂದ ಅಧಿಕಾರ ನೀಡಿದ್ದು ಇವರ ನೇತೃತ್ವದಲ್ಲಿ ಕ್ರೀಡಾಕೂಟ, ಕ್ಯಾಲೆಂಡರ್ ಬಿಡುಗಡೆ, ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ನಿವಾರಿಸಲು ಕಾಳಜಿ ಹೊಂದಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದೇವನಹಳ್ಳಿ ತಾಲ್ಲೂಕು ಶಾಖಾ ವತಿಯಿಂದ ಅಂಗಡಿ ಮಳಿಗೆಗಳ ಮೇಲಂತಸ್ಥಿನ ಎರಡು ಅಂಗಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗೂ ನೂತನ ರಾಜ್ಯ ಸಂಘದ ಉಪಧ್ಯಕ್ಷರಾಗಿ ಹೆಚ್.ಬಾಲಕೃಷ್ಣ ರವರಿಗೆ ಅಧಿಕಾರ ನೀಡಲು ದೇವನಹಳ್ಳಿ ತಾಲ್ಲೂಕು ಮಿನಿವಿಧಾನಸೌಧ ಕಚೇರಿ ಪಕ್ಕದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಮಾತನಾಡಿ, ತಹಸೀಲ್ದಾರ್ ಹುದ್ದೆಯಲ್ಲಿದ್ದರೂ ಸಂಘಟನೆ ವಿಚಾರವಾಗಿ ಕಾಳಜಿ ವಹಿಸುತ್ತಾರೆ ಸರ್ಕಾರಿ ನೌಕರರ ಹಲವು ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದಾರೆ. ಮುಖ್ಯ ಎರಡು ಬೇಡಿಕೆಗಳಾದ ಕೇಂದ್ರ ಸರ್ಕಾರದ ಪೇ ಕಮಿಷನ್ ನೀಡಬೇಕು ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಬೇಕು ಇನ್ನು ಹತ್ತು ಹಲವು ಬೇಡಿಕೆಗಳನ್ನು ಮುಂಬರುವ ದಿನಗಳಲ್ಲಿ ಸಾಕಾರಗೊಳಿಸಬೇಕೆನ್ನುವ ಮಹದಾಸೆ ಹೊತ್ತಿ ರಾಜ್ಯ ಸಂಘದ ಪದಾಧಿಕಾರಿಗಳು ಮುಂದಾಗಿದ್ದಾರೆ.ಇದರ ಜೊತೆ ಕೋವಿಡ್ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಿರುವುದು ಸರ್ಕಾರಿ ನೌಕರರ ಸಂಘ ಇದೇ ರೀತಿ ಸರ್ಕಾರದ ಒಡನಾಡಿಯಾಗಿ ಕೆಲಸ ಮಾಡುವಾಗ ನಮ್ಮ ಸಮಸ್ಯೆಗಳನ್ನು ಆದಷ್ಟು ಬೇಗ ಅರಿತು ಸ್ಪಂದಿಸುತ್ತದೆ ಎನ್ನುವ ಆಶಾಭಾವನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರಪ್ಪ, ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಅಭಿನಂದನೆ ಮಾಡಿದರು.

Leave a Comment

Your email address will not be published. Required fields are marked *

Translate »
Scroll to Top