ಕ್ಷುಲ್ಲಕ ಕಾರಣಕ್ಕೆ ಸೈನಿಕನ ಮೇಲೆ ಹಲ್ಲೆ

ಕೊರಟಗೆರೆ : ಸೈನಿಕ ನೋರ್ವ ರಾಜೆ ನಿಮಿತ್ತ ಊರಿಗೆ ಬಂದ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದು ಹೋಗುವಾಗ  ಕ್ಷುಲ್ಲಕ ಕಾರಣಕ್ಕೆ ದಾರಿ ಬಿಡಿ ಎಂಬುವ  ಮಾತಿಗೆ ಕುಪಿತಗೊಂಡ ಯುವಕರ ದಂಡು ಏಕಾಏಕಿ ಸೈನಿಕನ ಮೇಲೆ ಎರಗಿ ಮಧ್ಯದ ಬಾಟಲ್ ನಲ್ಲಿ ತಲೆಗೆ ಹೊಡೆದು ಮಾರಣಾಂತಕ ಹಲ್ಲೇ ನಡೆಸಿದ ಘಟನೆ‌ಯೂಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್ ನ ಬಳಿ ಈ ಅಹಿತಕರ ಘಟನೆ ಜರುಗಿದ್ದು, ಮಧುಗಿರಿಯ ಕೊಡಗದಾಲದ ಪುನೀತ(32), ಹುಣಸವಾಡಿಯ ಗೌರಿಶಂಕರ(32), ಶಿವಾ(32), ಕೊರಟಗೆರೆಯ ಅರಸಾಪುರದ ಭರತ್(29),ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್(35) ಎಕಬುವ

 5 ಜನ ಯುವಕರ ದಂಡು ದಾರಿ ಬಿಡುವ ಕ್ಷುಲ್ಲಕ  ಕಾರಣಕ್ಕೆ ಜಗಳವಾಗಿ ಏಕಾಏಕಿ ಯುವಕರು ಸೈನಿಕನ ಮೇಲೆ ಎರಗಿ ತಾವು ಕುಡಿಯುತ್ತಿದ್ದ ಮಧ್ಯ ಪಾಟಲುಗಳಲ್ಲೇ ಸೈನಿಕನ ತಲೆಗೆ ಹೊಡೆಯುವ ಮೂಲಕ ಸಿನಿಮಾ ಮಾದರಿಯಲ್ಲಿ ಪೌರುಷ ತೋರಿಸಿ ಮಾರಣಾಂತಕ ಹಲ್ಲೇ ನಡೆಸಿದ್ದಾರೆ ಎನ್ನಲಾಗಿದೆ.

ಬೈರೇನಹಳ್ಳಿ ಕ್ರಾಸ್ ನ ಎನ್ ಟಿ ಆರ್ ಕಂಫರ್ಟ್ಸ್ ಅಂಡ್ ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗ ಪುಂಡಾಡಿಕೆ ನಡೆಸಿಕೊಂಡಿದ್ದ ಯುವಕರ ದಂಡು ತಮ್ಮ ಮನಸ್ಸು ಇಚ್ಛೆ ಕಿರ್ಲಾಡಿಕೊಂಡು ಮಧ್ಯದ ಸೇವನೆಯ ಜೊತೆಗೆ ಮಧ್ಯದ ಬಾಟಲಿಡು ದಾರಿ ಹೋಕರರಿಗೆ ಕಿರಿಕಿರಿ ಹುಂಟು ಮಾಡುತ್ತಿದ್ದದ್ದು ಲ್ಲದೆ, ಕಿಚ್ಚಾಯಿಸುತ್ತಿದ್ದರು ತಿನ್ನಲಾಗಿದ್ದು, ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಬಂದ ಸೈನಿಕ ಗೋವಿಂದರಾಜು ಇದೆ ಅನುಭವವಾಗಿ ಅದನ್ನ ಪ್ರಶ್ನಿಸಿದಕ್ಕೆ ಪುಂಡಾಡಿಕೆ ಯುವಕರ ದಂಡು ಏಕಾಏಕಿ ಸೈನಿಕನ ಮೇಲೆ ಮರಣಾಂತರ ಹಲ್ಲೇ ನಡೆಸಿ ನಾವು ಯಾರು ಗೊತ್ತಾ, ನಮ್ಮ ತಂಟೆಗೆ ಬಂದರೆ ಯಾರನ್ನು ಬಿಡೋದಿಲ್ಲ ಎಂದು ಉದ್ಧಟತನದಿಂದ ತಮ್ಮ ಪೌರುಷ ತೋರಿಸುತಿದ್ದರು ಏನಾಗಿದೆ.

ಸೈನಿಕ ಗೋವಿಂದರಾಜು ಜಮ್ಮು ಕಾಶ್ಮಿರದ ಭಾರತೀಯ ಭೂ ಸೇನೆ ಸಿಪಾಯಿಯಾಗಿ ಜಮ್ಮುಕಾಶ್ಮಿರದ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಯವಾರದ ಯೋಧ ಗೋವಿಂದರಾಜು ರಜೆಯ ಪ್ರಯುಕ್ತ ತನ್ನ ಸ್ವಗ್ರಾಮಕ್ಕೆ ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ಹಲ್ಲೇಗೊಳಗಾಗಿ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪೋಷಕರು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ನಂತರ ಬೆಂಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಸಾಗಿಸಿದ್ದಾರೆ ಎನ್ನಲಾಗಿದೆ.

ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ :

ಸೈನಿಕ ತಲೆಗೆ ಮಧ್ಯದ ಬಾಟಲ್ ಒಡೆದ ಘಟನೆ ಕಂಡ ಸ್ಥಳೀಯ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಇಂಥ ಯುವಕರ ಗುಂಪಿನಿಂದ ನಾವು ಹೇಗೆ ರಕ್ಷಣೆ ಪಡೆಯುವುದು, ಸಣ್ಣಪುಟ್ಟ ವಿಚಾರಗಳಿಗೂ ಮಾರಣಾಂತಕ ಹಲ್ಲೇ ನಡೆದರೆ ನಾಗರೀಕ ಸಮಾಜದಲ್ಲಿ ಹೇಗೆ ಬದುಕುವುದು ಎಂದು ಸ್ಥಳೀಯರು ಘಟನೆಯ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿರುವುದಲ್ಲದೆ, ಈ ಭಾಗದ ಹಲವು ಗ್ರಾಮದ ಗ್ರಾಮಸ್ಥರುಗಳು ಬೈರೇನಹಳ್ಳಿ ಕ್ರಾಸ್ ಕಡೆ ಯುವಕರು ಗುಂಪು ಕಂಡ್ರೆ ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಇಲ್ಲಿನ ನಾಗರೀಕರ ನಿದ್ದೆಗೆಡಿಸಿದೆ.

 

ಈ ಹಿಂದೆ ಬೈರೇನಳ್ಳಿ ಕ್ರಾಸ್ ನಲ್ಲಿ ಅನಾವಶ್ಯಕವಾಗಿ ಯಾವುದೇ ತಪ್ಪು ಮಾಡಿದ ವ್ಯಕ್ತಿಗೆ ಚಾಕು ಹಿರಿಸಲಾಗಿತ್ತು, ಬೈರೇನಹಳ್ಳಿ ಕ್ರಾಸ್ ಅಸು ಪಾಸು ಬಾರ್ ಅಂಡ್ ರೆಸ್ಟೋರೆಂಟ್ ಆಸು ಪಾಸು, ಗೌರಿಬಿದನೂರು -ಮಧುಗಿರಿ ಹಾಗೂ ತುಮಕೂರು ಮಾರ್ಗ ಬೈರೇನಹಳ್ಳಿ ಕ್ರಾಸ್ ಆಸು ಪಾಸು 5-10 ಕಿಲೋಮೀಟರ್ ಪುಂಡರ ಹಾವಳಿ ಹೆಚ್ಚಾಗಿದ್ದು , ಸಾರ್ವಜನಿಕರು ಈ ಭಾಗದಲ್ಲಿ ಓಡಾಡಲು ಭಯಪಡುವಂತಾಗಿದ್ದು, ಸಣ್ಣ ಪುಟ್ಟ ವಿಚಾರಕ್ಕೂ ಯುವಕರ ಗುಂಪು ಸಾರ್ವಜನಿಕರ ಮೇಲೆ ಎರಗುವಂತ ಪ್ರವೃತ್ತಿ ಎಲ್ಲರಿಗೂ ಆತಂಕ ಮುಡಿಸಿದ್ದು, ಇತ್ತೀಚಿಗೆ ಬೈರೇನಹಳ್ಳಿ ಕಲ್ಯಾಣ ಮಂಟಪದಲ್ಲಿ ಪುಂಡರ ಮಧ್ಯಪಾನಕ್ಕೆ ಸೈಡ್ಸ್ ಚಾರ್ಟ್ಸ್ ತಿಂಡಿ ನೀಡುವಂತೆ ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪದಲ್ಲಿ ದಾಂದಲೆ ಸಹ ನಡೆಯಿತು, ವೈನ್ ಸ್ಟೋರ್ ಆಸುಪಾಸಿನಲ್ಲಿ ಯಾರೇ ಮಾತಾಡದ್ರು ಕೆಲವು ಪುಂಡರ ಗುಂಪುಗಳ ಮಾತಿನ ಮುಂದೆ ಯಾರು ಮಾತನಾಡುವಂತಿಲ್ಲ ತಲೆ ತಗ್ಗಿಸಿಕೊಂಡು ಹೋಗುವಂತಹ ವಾತಾವರಣ ಈ ಭಾಗದಲ್ಲಿ ನಿರ್ಮಾಣವಾಗಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ ಎಂದು ಅಲ್ಲಿನ ಸ್ಥಳೀಯರು ದುಗುಡತೆ ವ್ಯಕ್ತಪಡಿಸುತ್ತಿದ್ದಾರೆ.

 

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಮಂಜುನಾಥ್ ಆರೋಪಿಗಳಾದ ದಿಲೀಪ್, ಗೌರೀಶ್ ಅಲಿಯಾಸ್ ಗೌರಿ, ಅರಸಾಪುರದ ಭಾರತ್, ಕೊಂಡವಾಡಿಯ  ಪುನೀತ ಎಂಬುವ 5 ಜನ ಯುವಕರ ಮೇಲೆ ಎಂಬವರ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ  10 ಸೆಕ್ಷನ್‍ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top