ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅನಿಲ್ ಕುಮಾರ್ ಮೋಕಾ ಆಯ್ಕೆ

ಬಳ್ಳಾರಿ : ಇತ್ತೀಚೆಗಷ್ಟೇ ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷರ ಬದಲಾವಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಅದರಂತೆ ಬಿಜೆಪಿ ಹಿರಿಯ ಮುಖಂಡರು ಇದೀಗ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಆದೇಶ ಪ್ರತಿ ಬಿಡುಗಡೆ ಮಾಡಿದ್ದು, ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಅನಿಲ್ ಕುಮಾರ್ ಮೋಕಾ ಅವರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಮುರಹರಗೌಡ ಅವರು ಸೇವೆ ಸಲ್ಲಿಸಿದ್ದರು. ಇದೀಗ ಅವರ  ಸ್ಥಾನಕ್ಕೆ ಅನಿಲ್ ಕುಮಾರ್ ಮೋಕಾ ಇವರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಬಿ.ವೈ.ವಿಜಯೇಂದ್ರ ಆದೇಶ ನೀಡಿದ್ದಾರೆ.

 

ಅಂತೆಯೇ ಇಡೀ ರಾಜ್ಯದಾಂದ್ಯತ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದ್ದು, ವಿಜಯನಗರ ಜಿಲ್ಲೆಯಲ್ಲಿ ಚನ್ನಬಸವನಗೌಡ ಪಾಟೀಲ್ ಅವರನ್ನೇ ಮುಂದುವರೆಸಿದ್ದಾರೆ. ಕೊಪ್ಪಳದಲ್ಲಿ ನವೀನ್ ಗುಳಗಣ್ಣನವರ್, ರಾಯಚೂರು ಶಿವರಾಜ್ ಪಾಟೀಲ್, ದಾವಣಗೆರೆ ರಾಜಶೇಖರ್‍, ಚಿತ್ರದುರ್ಗ ಎ.ಮುರಳಿ, ತುಮಕೂರು ಹೆಬ್ಬಾಕ ರವಿ, ಮಧುಗಿರಿ ಬಿ.ಸಿ.ಹನುಮಂತೇಗೌಡ, ಶಿವಮೊಗ್ಗ ಟಿ.ಡಿ.ಮೇಘರಾಜ್‍ ಮತ್ತಿತರರ ಪಟ್ಟಿ ಈ ಕೆಳಗಿನಂತಿದೆ. 

Facebook
Twitter
LinkedIn
Telegram
Pocket
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top