ಸಂಡೂರು : ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯು ಇತ್ತೀಚಿಗೆ ಬೆಂಗಳೂರಿನ ಗುಂಡೂರಾವ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಿದ,3 ನೇ ಕನ್ನಡ ರಾಜ್ಯೋತ್ಸವ ಕಪ್ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಸಂಡೂರಿನ ಹುಡುಗರು 45 ಪದಕಗಳನ್ನು ಗೆಲ್ಲುವ ಮೂಲಕ ವಿಜೃಂಭಿಸಿದರು. ಶ್ರೀ ಅವಧೂತ ವಿನಯ್ ಗುರೂಜಿ ಮುಖ್ಯ ಅತಿಥಿಯಾಗಿ ಹಾಗೂ ಕರ್ನಾಟಕ ಸರ್ಕಾರದ ಹಿರಿಯ IAS ಅಧಿಕಾರಿ ಹಾಗೂ ಸರ್ಕಾರದ ಅಪರ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹಾಜರಾಗಿ ಪಂದ್ಯಾವಳಿಯ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಆ ಪಂದ್ಯಾವಳಿಯಲ್ಲಿ ಡ್ರ್ಯಾಗನ್ ಶೋಟೋಕನ್ ವರ್ಲ್ಡ್ ಕರಾಟೆ ಡೂ ಅಸೋಸಿಯೇಷನ್ ನ ಮುಖ್ಯ ತರಬೇತಿದಾರರು ಹಾಗೂ ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆಯ ಜಂಟಿ ಕಾರ್ಯದರ್ಶಿ, ಸೆನ್ಸ್ಯಿ ಶಿವಕುಮಾರ್ ಮತ್ತು ಸಹ ತರಬೇತಿದಾರರು ಹಾಗೂ ಡ್ರ್ಯಾಗನ್ ಶೋಟೋಕನ್ ವರ್ಲ್ಡ್ ಕರಾಟೆ ಅಸೋಸಿಯೇಷನ್, ಸಂಡೂರ್ ನ ಕಾರ್ಯದರ್ಶಿ ಅಂಬ್ರೆಷ್. ಹೇಚ್ ಇವರ ವಿದ್ಯಾರ್ಥಿಗಳು ಭಾಗವಹಿಸಿ, ಕತಾ ವಿಭಾಗದಲ್ಲಿ 10-ಚಿನ್ನ, 13-ಬೆಳ್ಳಿ, 10 ಕಂಚು ಹಾಗೂ ಕುಮಿತೆ ವಿಭಾಗದಲ್ಲಿ 4 ಚಿನ್ನ, 5 ಬೆಳ್ಳಿ, 3 ಕಂಚು ಪದಕಗಳು ಹಾಗೂ ಎರಡು ಟೀಮ್ ಚಾಂಪಿಯನ್ ಶಿಪ್ ಯನ್ನು ಗೆದ್ದಿದ್ದಾರೆ.ಪ್ರಪಥಮ ಬಾರಿಗೆ ಸಂಡೂರಿನ ವಿದ್ಯಾರ್ಥಿಗಳು ಒಟ್ಟಾಗಿ 45 ಪದಕಗಳನ್ನು ಗೆಲ್ಲುವ ಮೂಲಕ ಒಂದು ಅದ್ಭುತ ಸಾಧನೆಯನ್ನು ತೋರಿ,ಸಂಡೂರಿನ ಕೀರ್ತಿಯನ್ನು ಹೆಚ್ಚಿಸಿ,ಬೆಂಗಳೂರಿನಲ್ಲಿ ಸಂಡೂರಿನ ಹೆಸರನ್ನು ರಾರಾಜಿಸಿದರು.
ಕತಾ ವಿಭಾಗದಲ್ಲಿ ಪ್ರಥಮ ಸ್ಥಾನ, ಸಿಂಚನ, ವೀರ, ಯಶವಂತ್ ನಾಯಕ್, ತರುಣ್, ಶಾರದಾ, ಕಾಂಚನ ಗಂಗಾ, ಸಂಜಯ್, ಭರತ್, ನವಾಜ್, ಸೋಯಲ್ ಮತ್ತು ಸ್ವರಾಜ್, ದ್ವಿತೀಯ ಸ್ಥಾನ, ವಿನಯ್ ಕುಮಾರ್, ಪ್ರಜ್ವಲ್, ತನ್ಮಯ್, ಮದಿಹಾ, ಸುಮತಿ, ಹರ್ಷಿತ್, ವಿಷ್ಣು, ಪೂಜಾ, ಬಿಂದು ಸರ, ಅರವಿಂದ್, ಶ್ರೇಯಸ್, ನಿತಿನ್, ಮನೋಜ್ ತೃತಿಯ ಸ್ಥಾನ, ಭುವನ್, ಪ್ರಭಾಸ್, ಪ್ರವೀಣ್, ರಾಜು, ರಾಹುಲ್, ಪ್ರೀತಮ್, ಸಹನಾ, ಭವಿಷ್ಯ, ಭೂಮಿಕಾ, ರಾಮಲಿ ನಾಯ್ಕ್ಫೈ ಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ, ಪ್ರಜ್ವಲ್, ಶಾರದಾ, ಹರ್ಷಿತ್, ವಿಷ್ಣು, ದ್ವಿತೀಯ ಸ್ಥಾನ, ನಿತಿನ್, ಸೋಹಲ್, ಕಾಂಚನ ಗಂಗಾ, ರಾಮಲಿ ನಾಯ್ಕ್, ವಿನಯ್ ಕುಮಾರ್ ಹಾಗೂ ತೃತಿಯ ಸ್ಥಾನ ಸುಮತಿ, ಸ್ವರಾಜ್, ಅರವಿಂದ್ಪಂ ದ್ಯಾವಳಿಯಲ್ಲಿ ಮಕ್ಕಳ ಸಾಧನೆಗೆ ಪ್ರೇರಕರಾದ ಸೆನ್ಸ್ಯಿ ಶಿವಕುಮಾರ್ ಅವರಿಗೆ ಪ್ರತ್ಯೇಕವಾಗಿ ಶ್ರೀ ಅವಧೂತ ವಿನಯ್ ಗುರೂಜಿ ಅವರು ಸನ್ಮಾನಿಸಿ ಗೌರವಿಸಿದರು.