ಬೆಂಗಳೂರು: ನಮ್ಮ ಸರ್ಕಾರವು ಪ್ರಸ್ತುತ “ಯುವನಿಧಿ” ಯೋಜನೆಯನ್ನು ರಾಜ್ಯದ ಯುವಕ/ ಯುವತಿಯರಿಗೆ ಸಮರ್ಪಿಸುತ್ತಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧೀನದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.
ಯುವನಿಧಿ ಯೋಜನೆಗೆ ಕರ್ನಾಟಕ ರಾಜ್ಯಾದ್ಯಂತ ಒಟ್ಟು 5,29,153 ಫಲಾನುಭವಿಗಳು ಇರುವುದಾಗಿ ಅಂದಾಜಿಸಲಾಗಿದೆ. ಅವರಲ್ಲಿ ಪದವೀಧರರು 4,81,000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರು 48,153 ಆಗಿರುತ್ತಾರೆ. ಪ್ರಸಕ್ತ 2023-24ನೇ ಸಾಲಿಗೆ ನಿರುದ್ಯೋಗ ಭತ್ಯೆ ನೀಡಲು ರೂ 250 ಕೋಟಿಯ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಈ ಯೋಜನೆಯಡಿಯಲ್ಲಿ ರಾಜ್ಯದ ಪದವೀಧರರು / ಸ್ನಾತಕೋತ್ತರ ಪದವೀಧರರು/ ಡಿಪ್ಲೋಮಾ ತೇರ್ಗಡೆಯಾದವರು ನಿರುದ್ಯೋಗ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಪದವೀಧರರಿಗೆ ಮಾಸಿಕವಾಗಿ ರೂ. 3000/- ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ. 1500/-ಗಳನ್ನು ನಿರುದ್ಯೋಗ ಭತ್ಯೆಯನ್ನಾಗಿ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನೀಡಲು ತೀರ್ಮಾನಿಸಲಾಗಿದೆ. ಪದವಿ/ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆ ಹೊಂದಿರಬೇಕು. ಅಭ್ಯರ್ಥಿಗಳು ಕನಿಷ್ಠ 6 ವರ್ಷಗಳ ಕಾಲ ಕರ್ನಾಟಕದಲ್ಲಿ ರಹವಾಸಿಯಾಗಿ ವ್ಯಾಸಂಗ ಮಾಡಿರಬೇಕು.
ಅರ್ಹತೆಗಳು:
1) ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ ಪದವಿ/ ಡಿಪ್ಲೋಮಾ 2023ರಲ್ಲಿ ತೇರ್ಗಡೆಯಾಗಿರಬೇಕು.
2) ಕರ್ನಾಟಕದಲ್ಲಿ ಕನಿಷ್ಟ 6 ವರ್ಷದವರೆಗೆ ಪದವಿ/ ಡಿಪ್ಲೋಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕ ರಹವಾಸಿಯಾಗಿರಬೇಕು.
ಅನರ್ಹತೆಗಳು:
1) ಸರ್ಕಾರಿ/ ಸರ್ಕಾರಿ ಅನುದಾನಿತ ಸಂಸ್ಧೆ/ ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು.
2) ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು.
3) ವಿದ್ಯಾಭ್ಯಾಸವನ್ನು ಮುಂದುವರೆಸುವ ಅಭ್ಯರ್ಥಿಗಳು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರತಿ ಹಂತದ ಪ್ರಕ್ರಿಯೆಗಳು:
ಆಸಕ್ತ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಜಾಲತಾಣದ ವಿಳಾಸವಾದ https://sevasindhugs.karnataka.gov.in/ ರಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ ಪದವಿ/ ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರಗಳನ್ನು NAD ಪೋರ್ಟಲ್‌ನಲ್ಲಿ ಸಂಬಂಧಿಸಿದ ವಿಶ್ವವಿದ್ಯಾನಿಲಯಗಳು / ಶೈಕ್ಷಣಿಕ ಸಂಸ್ಧೆಗಳು / ಮಂಡಳಿಗಳು ಇಂಧೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು https://nad.karnataka.gov.in/#/YuvaNidhi ಜಾಲತಾಣದಲ್ಲಿ ಲಾಗಿನ್ ಆಗಿ ತಮ್ಮ ಪದವಿ/ ಡಿಪ್ಲೋಮಾ ಪ್ರಮಾಣ ಪತ್ರದಲ್ಲಿ ನೀಡಿರುವ ನೊಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಸೇವಾಸಿಂಧು ಮುಖಪುಟದಲ್ಲಿ ಲಿಂಕ್ ನೀಡಲಾಗಿದೆ.
1) ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು (1) ಕರ್ನಾಟಕ-ಓನ್, (2) ಬಾಪೂಜಿ ಸೇವಾ ಕೇಂದ್ರಗಳು, (3) ಗ್ರಾಮ-ಓನ್ ಕೇಂದ್ರಗಳನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಸೇವಾಸಿಂಧು ಜಾಲತಾಣದ ವಿಳಾಸವಾದ https://sevasindhugs.karnataka.gov.in/ ಇಲ್ಲಿ ಲಾಗ-ಆನ್ ಮಾಡಿಕೊಂಡು ಯುವನಿಧಿ ಯೋಜನೆಯ ಸೇವೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.
2) ಮುಖಪುಟದಲ್ಲಿ ಲಾಗ-ಆನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಂಡು ಮೊದಲಿಗೆ ಅಭ್ಯರ್ಥಿಗಳು ನಿಬಂಧನೆಗಳನ್ನು ಓದಿಕೊಂಡು ಮೊದಲ ಘೋಷಣೆಯನ್ನು ನೀಡಬೇಕು.
3) ಆಧಾರ್ ಸಂಖ್ಯೆಯನ್ನು ನಮೂದಿಸಿ O.T.P ಪಡೆದು KYC ಮಾಹಿತಿಯನ್ನು ಪಡೆದುಕೊಳ್ಳತಕ್ಕದ್ದು.
4) ಅಭ್ಯರ್ಥಿಗಳು ತಮ್ಮ ಜಿಲ್ಲೆ ಮತ್ತು ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು.
5) ವಿದ್ಯಾರ್ಹತೆಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಗಳು ಪ್ರಮಾಣ ಪತ್ರದಲ್ಲಿರುವ ನೊಂದಣಿ ಸಂಖ್ಯೆಯನ್ನು ನಮೂದಿಸಿದ ತಕ್ಷಣದಲ್ಲಿ ಸ್ವಯಂ-ಚಾಲಿತವಾಗಿ ಓಂಆ ಪೋರ್ಟಲ್‌ನಿಂದ ಸಕ್ರಿಯಗೊಳಿಸುತ್ತದೆ.
6) ಅಭ್ಯರ್ಥಿಗಳು 6 ವರ್ಷ ಕರ್ನಾಟಕ ರಹವಾಸಿ ಎಂದು ನಿರೂಪಿಸಲು ಈ ಕೆಳಗಿನ 4 ಮಾನದಂಡಗಳನ್ನು ಉಪಯೋಗಿಸಿಕೊಳ್ಳಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ರಹವಾಸಿ ಎಂದು ನಿರೂಪಿಸಲು
|
||
ಕ್ರ.ಸಂ |
ಪದವೀಧರರು |
ಡಿಪ್ಲೋಮಾ ಅಭ್ಯರ್ಥಿಗಳು |
01 |
ಎಸ್.ಎಸ್.ಎಲ್.ಸಿ |
8
ಮತ್ತು 9ನೇ ತರಗತಿ ಅಂಕಪಟ್ಟಿ (ಎಸ್.ಎಸ್.ಎಲ್.ಸಿ ಮೂಲದಿಂದ ಡಿಪ್ಲೋಮಾ ಮಾಡಿದ್ದಲ್ಲಿ)
|
02 |
ಪಿ.ಯು.ಸಿ
ಅಥವಾ |
ಎಸ್.ಎಸ್.ಎಲ್.ಸಿ
|
03 |
ಸಿ.ಇ.ಟಿ
ಸಂಖ್ಯೆ ಅಥವಾ |
ಪಿ.ಯು.ಸಿ
ಅಥವಾ |
04 |
ರೇಷನ್
ಕಾರ್ಡ್ ಸಂಖ್ಯೆ |
ರೇಷನ್
ಕಾರ್ಡ್ ಸಂಖ್ಯೆ |
ಅರ್ಜಿ ಸಲ್ಲಿಸಲು ಅಗತ್ಯವಿರುವ ವಿದ್ಯಾರ್ಹತೆ ದಾಖಲಾತಿಗಳು
|
||
01 |
ಎಸ್.ಎಸ್.ಎಲ್.ಸಿ
ಅಂಕಪಟ್ಟಿ |
ಎಸ್.ಎಸ್.ಎಲ್.ಸಿ
ಅಂಕಪಟ್ಟಿ
|
02 |
ಪಿ.ಯು.ಸಿ
ಅಂಕಪಟ್ಟಿ |
ಪಿ.ಯು.ಸಿ
ಅಂಕಪಟ್ಟಿ
|
03 |
ಪದವಿ
ಪ್ರಮಾಣ ಪತ್ರ ಅಥವಾ |
ಡಿಪ್ಲೋಮಾ
ಪ್ರಮಾಣ ಪತ್ರ ಅಥವಾ
|
04 |
ತಾತ್ಕಾಲಿಕ
ಪ್ರಮಾಣ ಪತ್ರ (PDC) |
ತಾತ್ಕಾಲಿಕ
ಪ್ರಮಾಣ ಪತ್ರ (PDC) |
1) ಅಭ್ಯರ್ಥಿಗಳು ತಮ್ಮ ಜಾತಿ ಪ್ರವರ್ಗಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
2) ಅಭ್ಯರ್ಥಿಗಳು ಸಕ್ರಿಯವಾಗಿರುವ ಮೋಬೈಲ್ ಸಂಖ್ಯೆಯನ್ನು ನೀಡಿ, O.T.P ಪಡೆಯುವುದು ಹಾಗೂ ಇ-ಮೇಲ್ ವಿಳಾಸ ದಾಖಲಿಸಿ O.T.P ಪಡೆದು ಮತ್ತೊಮ್ಮೆ ದಾಖಲಿಸುವುದು.
3) ತದನಂತರ ಅಂತಿಮವಾಗಿ ಮತ್ತೊಮ್ಮೆ ಸ್ವಯಂ ಘೋಷಣೆಯನ್ನು ಮಾಡಿದ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಬೇಕು.
4) ಅರ್ಜಿ ಸಮರ್ಪಕವಾಗಿ ಸಲ್ಲಿಸಿದ ನಂತರ ಅಭ್ಯರ್ಥಿಯ ಮೋಬೈಲ್ ಸಂಖ್ಯೆಗೆ ನಿಮ್ಮ ಅರ್ಜಿಯು ಯಶಸ್ವಿಯಾಗಿ ಸ್ವೀಕೃತವಾಗಿರುವುದರ ಬಗ್ಗೆ ಸಂದೇಶ ಬರುತ್ತದೆ.
5) ಅಭ್ಯರ್ಥಿಯು ಅರ್ಜಿಯನ್ನು ಸಮರ್ಪಕವಾಗಿ ಸಲ್ಲಿಸಿದ ನಂತರ ಸ್ವೀಕೃತಿಯು ಸೃಜಿಸಲ್ಪಡುತ್ತದೆ. ಅಭ್ಯರ್ಥಿಗಳು ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು.
6) ಅಭ್ಯರ್ಥಿಗಳ ಫಲಿತಾಂಶ ಪ್ರಕಟವಾದ 180 ದಿನಗಳ ಪೂರ್ಣಗೊಂಡ ನಂತರವೂ ನಿರುದ್ಯೋಗಿಯಾಗಿರುವ ಪದವೀಧರ ಅಭ್ಯರ್ಥಿಗೆ ಮಾಹೆವಾರು ರೂ. 3000/- ಮತ್ತು ಡಿಪ್ಲೋಮಾ ತೇರ್ಗಡೆಯಾದ ಅಭ್ಯರ್ಥಿಗೆ ಮಾಹೆವಾರು ರೂ.1500/- ನಿರುದ್ಯೋಗ ಭತ್ಯೆಯನ್ನು 2 ವರ್ಷದವರೆಗೆ ಅಥವಾ ಉದ್ಯೋಗ ದೊರಕುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ನೀಡಲಾಗುವುದು.
7) ಅಭ್ಯರ್ಥಿಯು ಸೇವಾಸಿಂಧು ಪೋರ್ಟಲ್‌ನಲ್ಲಿ ನಿರುದ್ಯೋಗಿ ಸ್ಧಿತಿಯ ಬಗ್ಗೆ ಪ್ರತಿ ತಿಂಗಳ 25ನೇ ತಾರೀಖು ಅಥವಾ ಅದಕ್ಕಿಂತ ಮುಂಚಿತವಾಗಿ ಆಧಾರ್ O.T.P ಮೂಲಕ ಸ್ವಯಂ-ಘೋಷಣೆ ಮಾಡತಕ್ಕದ್ದು.
8) ಅಂತಿಮವಾಗಿ ಅರ್ಹ ಅಭ್ಯರ್ಥಿಗಳ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು.
9) ಯುವನಿಧಿ ಯೋಜನೆಯಲ್ಲಿ ಯಶಸ್ವಿಯಾಗಿ ಅರ್ಜಿಸಲ್ಲಿಸಿದ ದತ್ತಾಂಶವನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮಕ್ಕೆ ಸ್ವಯಂ ಚಾಲಿತವಾಗಿ ಹಂಚಿಕೊಳ್ಳಲಾಗುವುದು. https://skillconnect.kaushalkar.com/ ಇದಕ್ಕೆ ಪೂರಕವಾಗಿ ಅಭ್ಯರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ನಿಗಮವು ಉಚಿತವಾಗಿ ಕೌಶಲ್ಯ ತರಬೇತಿಗಳನ್ನು ಆಯೋಜಿಸುತ್ತದೆ.
ಆದುದರಿಂದ ಕರ್ನಾಟಕದ ಯುವ ಜನತೆಯು ಉದ್ಯೋಗ ಸಂದರ್ಶನ ಎದುರಿಸಲು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಭರಿಸಬೇಕಾದ ಶುಲ್ಕ, ಸ್ಪರ್ಧಾತ್ಮಕ ಪರೀಕ್ಷೆಗೆ ಪುಸ್ತಕಗಳನ್ನು ಕೊಂಡುಕೊಳ್ಳಲು, ಆರ್ಥಿಕ ಸ್ವಾವಲಂಭಿಗಳಾಗಿ ಸ್ವಾಭಿಮಾನದಿಂದ ವೃತ್ತಿ ಜೀವನ ರೂಪಿಸಿಕೊಳ್ಳಲು ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆಯು ಸಹಕಾರಿಯಾಗಲಿದೆ ಹಾಗೂ ತಂದೆ ತಾಯಿಗಳಿಗೆ ಹೊರೆಯನ್ನು ತಗ್ಗಿಸಿದಂತಾಗುತ್ತದೆ ಎಂಬ ಆಶಾ ಭಾವನೆಯೊಂದಿಗೆ ನಮ್ಮ ಸರ್ಕಾರವು ನಿರುದ್ಯೋಗ ಯುವಕರ ಬೆಂಬಲಕ್ಕೆ ನಿಂತಿದೆ.