ಬೆಂಗಳೂರು : ಎಐಸಿಸಿಯ ನವ ಸಂಕಲ್ಪ ಶಿಬಿರದಲ್ಲಿ ಭಾಗವಹಿಸಲು ಉದಯಪುರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗಳಾದ ಸುಶಿಲ್ ಕುಮಾರ್ ಶಿಂಧೆ, ವೀರಪ್ಪ ಮೊಯಿಲಿ, ಕೇಂದ್ರದ ಮಾಜಿ ಸಚಿವರಾದ ಮಾರ್ಗರೆಟ್ ಆಳ್ಚ ಅವರೊಂದಿಗೆ ಮಾತುಕತೆ ನಡೆಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವ ಕೃಷ್ಣ ಬೈರೇಗೌಡ ಹಾಜರಿದ್ದರು. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ಶಾಸಕರಾದ ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ಭೀಮಾ ನಾಯಕ, ಮಾಜಿ ಶಾಸಕರಾದ ತರೀಕೆರೆ ಶ್ರೀನಿವಾಸ್, ಅಶೋಕ್ ಪಟ್ಟಣ ಸಹ ಇದ್ದರು.

