ಕೃಷಿ ಪದವೀಧರರು ನಾಡಿನ ಸರ್ವತೋಮುಖ ಏಳಿಗೆಗೆ ಶ್ರಮಿಸಬೇಕು: ಎನ್ ಚಲುವರಾಯಸ್ವಾಮಿ

ಧಾರವಾಡ ಜೂ27: ಕೃಷಿ ಪದವೀಧರರು ತಮ್ಮ ತಾಂತ್ರಿಕ ಜ್ಞಾನ ಬಳಸಿ    ನಾಡಿನ  ಸರ್ವತೋಮುಖ  ಏಳಿಗೆಗೆ ಶ್ರಮಿಸಬೇಕು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ  ಅವರು ಕರೆ ನೀಡಿದ್ದಾರೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ 37 ನೇ ಘಟಿಕೋತ್ಸವದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು ಕೃಷಿ ಪದವೀಧರರು ಉದ್ಯೋಗ ಅರಸುವ ಬದಲು ಕೆಲಸ ನೀಡುವವರಾಗಿ ಬೆಳೆಯಬೇಕು ಎಂದರು.

 

ಕೃಷಿ ಕ್ಷೇತ್ರದಲ್ಲಿ  ಮೂಲ್ಯವರ್ಧನೆ ಹಾಗೂ ಅಭಿವೃದ್ಧಿಗೆ ವ್ಯಾಪಕ ಅವಕಾಶ ಇದೆ . ಕೃಷಿ ಪದವಿಧರರು ತಮ್ಮ ಕೌಶಲ್ಯವನ್ನು  ಈ ಕ್ಷೇತ್ರದ ವಿಕಾಸಕ್ಕೆ ಬಳಸಬೇಕು ಸಲಹೆ  ನೀಡಿದರು.

ಧಾರವಾಡದ ಕೃಷಿ ವಿ.ವಿ ಯ 37ನೇ ಘಟಿಕೊತ್ಸವದಲ್ಲಿ 69 ಪಿ.ಹೆಚ್.ಡಿ, 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿ ಸೇರಿದಂತೆ 933  ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗಿದೆ . 57 ಚಿನ್ನದ ಪದಕ ಹಾಗೂ 9 ನಗದು ಬಹುಮಾನ ನೀಡಲಾಗಿದೆ ಈ ಗೌರವಕ್ಕೆ ಪಾತ್ರವಾಗಿರುವ  ಎಲ್ಲರಿಗೂ ಅಭಿನಂದನೆಗಳು.

ಅಲ್ಲದೆ ಈ ವರ್ಷದ ಧಾರವಾಡ ಕೃಷಿ ವಿವಿ ವಿದ್ಯಾರ್ಥಿನಿ ಕುಮಾರಿ ಸೌಭಾಗ್ಯ ಬೀಳಗಿ‌ಮಠ  ಯು.ಪಿ‌.ಎಸ್.ಸಿ ಪರೀಕ್ಷೆಯಲ್ಲಿ 101 ನೇ ರಾಂಕ್  ಗಳಿಸಿರುವುದು  ರಾಜ್ಯಕ್ಕೆ ಹೆಮ್ಮೆ ತಂದಿದೆ ಎಂದು  ಕೃಷಿ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

 

ಧಾರವಾಡ ಕೃಷಿ ವಿ.ವಿ ದೇಶದ ಶ್ರೇಷ್ಠ ವಿಶ್ವವಿದ್ಯಾಲಗಳಲ್ಲಿ ಒಂದಾಗಿದ್ದು ಹೊಸ ಹೊಸ ಸಂಶೋಧನೆಗಳ ಮೂಲಕ ಕೃಷಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವುದು ಪ್ರಶಂಸನೀಯ ಎಂದು ಚಲುವರಾಯಸ್ವಾಮಿ ಹೇಳಿದರು.

ವಿಶ್ವವಿದ್ಯಾಲಯಗಳು ರೈತರಿಗೆ ಆತ್ಮವಿಶ್ವಾಸ ತುಂಬುವ ಜೊತೆಗೆ ವೈಜ್ಞಾನಿಕ ,ತಾಂತ್ರಿಕ ನೆರವು ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು.  ರಾಜ್ಯ ಸರ್ಕಾರ ಸದಾ ರೈತ ಪರವಾಗಿದೆ. ಕೃಷಿ ಕ್ಷೇತ್ರದ ಶ್ರೇಯೋಭಿವೃದ್ದಿಗೆ ಅನೇಕ‌ ಪರಿಣಾಮಕಾರಿ ಯೋಜನೆ  ಜಾರಿ ತಂದಿದೆ ಎಂದು ಅವರು ವಿವರಿಸಿದರು.

 

ಸಿರಿ ಧಾನ್ಯಗಳ ಪ್ರೋತ್ಸಾಹ ಕಾರ್ಯಕ್ರಮಳಿಂದ ದೊಡ್ಡ ಯಶಸ್ಸು ಕಾಣುತ್ತಿದೆ .ನೂರಾರು ಹೊಸ ಉದ್ಯಮ ಪ್ರಾರಂಭವಾಗಿ ಹೀಗೆ ಎಲ್ಲಾ ಕೃಷಿ ಉತ್ಪನ್ನಗಳಲ್ಲಿ ಹೊಸ ಆವಿಷ್ಕಾರ ಮತ್ತು  ಬ್ರಾಂಡಿಗ್ ಅಗಬೇಕಿದೆ ಎಂದು ಅವರು ಹೇಳಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top