ಮರಿಯಮ್ಮನಹಳ್ಳಿ: ಶ್ರೀ ರಾಮ ಭಕ್ತ ಶ್ರೀ ಹನುಮನಂತೆ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತೃಭೂಮಿ ಸ್ವರ್ಗ ಸುಖ ವಾಗುವುದು ಎಂದು ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷ ಸಿಎ.ಗಾಳೆಪ್ಪ ಹೇಳಿದರು. ಅವರು ಶನಿವಾರ ಸಂಜೆ ಪಟ್ಟಣ ಸಮೀಪದ ಗಾಳೆಮ್ಮನ ಗುಡಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಹನುಮನಿಗೆ ದೀಪ ಬೆಳಗಿಸಿ ಮಾತನಾಡಿದರು.
ದೇವಾಲಯಗಳು ಸಮಸ್ತ ಹಿಂದೂಗಳ ಶಕ್ತಿಯಲ್ಲದೆ ಅಲ್ಲಿ ನಾವು ಧ್ಯಾನ, ಮೌನ, ಪ್ರಾರ್ಥನೆಗಳನ್ನು ಸಲ್ಲಿಸುವದರಿಂದ ಮಹಾ ಮಾನವತೆ ಗುಣಗಳನ್ನು ಸಂಪಾದಿಸಿ ಸಂಸ್ಕಾರವಂತರಾಗುತ್ತೇವೆ ಎಂದರು. ನಂತರ ಊರಿನ ನೂರಾರು ಮಹಿಳೆಯರು, ಮಕ್ಕಳು, ಯುವಕರು, ಆರಾಧ್ಯ ದೈವ, ಆಂಜನೇಯ ಸ್ವಾಮಿಗೆ ಹಣತೆಗಳನ್ನು ಬೆಳಗಿಸಿ, ಭಕ್ತರು ಭಕ್ತಿ ಲೋಕದಲ್ಲಿ ಮುಳುಗಿದ್ದರು. ಈ ಸಂಧರ್ಭದಲ್ಲಿ ಸಿಎ.ವೆಂಕಟೇಶ, ಸಿಎ.ನಾಗರಾಜ, ನರಸಿಂಹ, ಮಂಜುನಾಥ ಡಾಬಾ, ಪರಶುರಾಮ, ಶ್ರೀನಿವಾಸ್, ಜಕ್ಕಪ್ಪ, ಬಾಬು, ಚಂದ್ರು, ಹನುಮಂತ, ಓಂಕಾರಿ, ಮಹೇಶ್, ಡಿ.ಎಂ.ಕೆಂಚ ಇತರರಿದ್ದರು.