ಹೆಣ್ಣು ಸದಾ ಒಂದು ಮಿತಿಯಲ್ಲೇ ಇರಬೇಕು ಅಂತ ಸಮಾಜ ಅವಳನ್ನು ಕೂಡಿಟ್ಟಿದೆ … ಅವಳೆಷ್ಟೇ ಸಾಧನೆಗೈದರೂ, ಮನೆ-ಸಮಾಜ ಏನ್ನನ್ನೇ ಸಮರ್ಥವಾಗಿ ಸಂಭಾಳಿಸಿದರೂ, ಕೊನೆ ಮಾತು ಮಾತ್ರ -“ಅವಳು ಹೆಣ್ಣು”..
ರಾಣಿಯರ ಕಾಲದಿಂದಲೂ, ಸ್ಟ್ರೀಟ್ ಬರಿ ಭೋಗದ ವಸ್ತು… ಭೂಮಿಯೊಂದಿಗೆ ಹೆಣ್ಣನ್ನು ಗೆಲ್ಲುವುದು ಗಂಡಿನ ದಾರ್ಷ್ಟ್ಯದ ಉತ್ತುಂಗ…
ಚರಿತ್ರೆ ಅದೆಷ್ಟೋ ಮಹಿಳೆಯರ ಸಾಧನೆಗಳನ್ನು ಮರೆಮಾಚಿದೆ… ಎಷ್ಟೇ ಎತ್ತರಕ್ಕೇರಿದರೂ, ಅಡುಗೆಮನೆಗೆ ಹೆಣ್ಣನ್ನು ಸೀಮಿತಗೊಳಿಸುವ ಆಪ್ಯಾಯ ಓಲೈಕೆ ಸಮಾಜದ್ದು…
ತನ್ನವರನ್ನು ಸದಾ ಓಲೈಸುಲೆ ಬದುಕುವ ದೌರ್ಭಗ್ಯ ಹೆಣ್ಣಿನದ್ದು…
ಪ್ರಜಾಪ್ರಭುತ್ವದಲ್ಲೂ ಮಹಿಳಾ ಸಚಿವೆಯರಿಗೆಷ್ಟು ಸ್ಥಾನವಿದೆ!? ಸಮಾನತೆಯ ಕಾಲ ಅಕ್ಕನ ಚಳುವಳಿಯ ನಂತರವೂ ಯಾಕಿನ್ನೂ ಕಾವು ಪಡೆದುಕೊಂಡಿಲ್ಲ? ಈ ಎಲ್ಲಾ ಸ್ತ್ರೀ ಪರ ವಿಚಾರಧಾರೆಗಳನ್ನು ಜನರ ಮುಂದಿಟ್ಟು, ಅವರಲ್ಲೊಂದು ಜಾಗೃತಿಯ ಪ್ರಶ್ನೆ ಮೂಡಿಸುವುದು, ಅಧಿನಾಯಕಿ ಏಕ ವ್ಯಕ್ತಿ ಪ್ರಯೋಗದ ಉದ್ದೇಶ. ಕಿಟಕಿಗಳಲ್ಲೇ ಹೆಣ್ಣು ಕಂಡ ಜಗತ್ತನ್ನು, ನಿರ್ದೇಶಕ ಡಾ. ಬೇಲೂರು ರಘುನಂದನ್ ಬಹಳ ಸುಂದರವಾಗಿ ಕಟ್ಟುಕೊಟ್ಟಿದಾರೆ. ಭೂತ-ವರ್ತಮಾನಗಳೊಂದಿಗೆ ತೂಗುಯ್ಯಾಲೆ ಆಡುವ ಕಥಾವಸ್ತು, ಕಥೆಗಳ ಮೂಲಕವೇ ಅರಿವಿಗೆ ಓರೇ ಹಚ್ಚುತ್ತದೆ.