ಬಿಐಇಸಿಯಲ್ಲಿ ಮಾರ್ಚ್ 1 ರಿಂದ 3 ಸ್ಮಾರ್ಟ್ ಲಿಪ್ಟ್ ಅಂಡ್ ಮೊಬಿಲಿಟಿ ವರ್ಲ್ಡ್ ಎಕ್ಸ್ ಪೋ

ಬೆಂಗಳೂರು : ನಗರದ ಬಿಐಇಸಿಯಲ್ಲಿ ರಿಯಲ್ ಎಸ್ಟೇಟ್ ವಲಯದ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸುವ ಸ್ಮಾರ್ಟ್ ಲಿಪ್ಟ್ ಅಂಡ್ ಮೊಬಿಲಿಟಿ ವರ್ಲ್ಡ್ ಎಕ್ಸ್ ಪೋ ಮಾರ್ಚ್ 1 ರಿಂದ 3 ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಎಕ್ಸ್ ಪೋ ಆಯೋಜಕರಾದ  ವಿರುಗೋ ಸಂಸ್ಥೆ ಯ ನಿರ್ದೇಶಕ ಶ್ರೀ ಜಿ. ರಘುನಾಥ್ ಹಾಗೂ ಕರ್ನಾಟಕ ಹೈಡ್ರಾಲಿಕ್ ಮತ್ತು ಎಲಿವೇಟರ್ ತಯಾರಕರ ಒಕ್ಕೂಟದ ಅಧ್ಯಕ್ಷ ಡಾ. ಬಿ. ಎಂ. ಉಮೇಶ್  ಕುಮಾರ್ ತಿಳಿಸಿದರು.

 

ಮಂಗಳವಾರ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆಂದೂ ಕಂಡರಿಯದ ನವ ನವೀನ ತಂತ್ರಜ್ಞಾನವನ್ನು ಪರಿಚಯಿಸಲಿರುವ ಜಾಗತಿಕ ಸಮ್ಮೇಳನದಲ್ಲಿ ದೇಶ, ವಿದೇಶಗಳ 130 ಕ್ಕೂ ಅಧಿಕ ಪ್ರದರ್ಶನಕಾರರು, 60 ಕ್ಕೂ ಹೆಚ್ಚು ಪರಿಣಿತರು, 3000 ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. 

ಎಲಿವೇಟರ್‌ಗಳು, ಮೊಬಿಲಿಟಿ ಪರಿಹಾರಗಳು, ಸುಧಾರಿತ ಪ್ರವೇಶ ನಿಯಂತ್ರಣ ವ್ಯವಸ್ಥೆಗಳು, ನಿರ್ಮಾಣ ಜಗತ್ತಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಅಂತರರಾಷ್ಟ್ರೀಯ ಎಕ್ಸ್‌ಪೋ ಒಳಗೊಂಡಿದೆ. ಈ ಶೃಂಗಸಭೆ, ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಹ ಎಸ್.ಎಲ್.ಡಬ್ಲ್ಯೂ ವರ್ಲ್ಡ್ 2024 ರಲ್ಲಿ ನೀಡಲಾಗುತ್ತಿದೆ. ಜಾಗತಿಕ ಮೊದಲ ಎಲಿವೇಟರ್ ಸುರಕ್ಷತಾ ಓಟ. ಉದ್ಯಮ ವಲಯದ ಪ್ರಮುಖರು  ಭಾಗವಹಿಸುತ್ತಿದ್ದಾರೆ ಎಂದರು.

 

ಮಾರ್ಚ್ 1 ರಂದು ಬೆಳಿಗ್ಗೆ 10 ಗಂಟೆಗೆ ಎಸ್.ಎಲ್.ಡಬ್ಲ್ಯೂ ವರ್ಲ್ಡ್ 2024 ಉದ್ಘಾಟನೆಯಾಗಲಿದೆ. ಮಧ್ಯಾಹ್ನ ರಿಯಲ್ ಎಸ್ಟೇಟ್ ವಲಯದಲ್ಲಿ ಸವಾಲುಗಳು, ಹೊಸ ವಿ.ಎಚ್.ಟಿ ತಂತ್ರಜ್ಞಾನ ಅಳವಡಿಕೆ ಕುರಿತು ಗೋಷ್ಠಿ ಆಯೋಜಿಸಲಾಗಿದೆ. ನಂತರ ವಿನ್ಯಾಸ, ಎಲಿವೇಟೆಡ್ ಸರ್ಫೇಸ್ ಫಿನಿಶ್‌ಗಳೊಂದಿಗೆ ಸುಸ್ಥಿರ ಸ್ಟೇನ್‌ಲೆಸ್ ಸ್ಟೀಲ್ ನಿಂದ ಪರಿಹಾರ, ಉನ್ನತ ಸೌಂದರ್ಯಶಾಸ್ತ್ರ ಮತ್ತು ದೀರ್ಘ ಕಾಲ ಬಾಳಿಕೆ ಬರುವ ತಂತ್ರಜ್ಞಾನದ ಬಗ್ಗೆ ತಜ್ಞರು ಬೆಳಕು ಚೆಲ್ಲಲಿದ್ದಾರೆ.

ಮರು ದಿನ ಬೆಳಿಗ್ಗೆ 6 ರಿಂದ 8.30 ರ ವರೆಗೆ ಎಲಿವೇಟರ್ ಸೇಪ್ಟಿ ರನ್ ಓಟ ಆಯೋಜಿಸಿದ್ದು, ನಂತರ ಕಟ್ಟಡ ನಿರ್ಮಾಣದಲ್ಲಿ ಭವಿಷ್ಯದ ವಿಧಾನಗಳು ಮತ್ತು ನಿರ್ವಹಣೆಸುಸ್ಥಿರ ನೇರ ಬೆಳವಣಿಗೆ, ಕಟ್ಟಡ ನಿರ್ಮಾಣ ಹೆಚ್ಚು ಕೈಗೆಟುವಂತೆ ಮಾಡುವ ಮತ್ತು ತಂತ್ರಜ್ಞಾನ ಒಳಗೊಳ್ಳುವಿಕೆ, ಎಲಿವೇಟರ್ ಗಳಲ್ಲಿ ನೂತನ ಆವಿಷ್ಕಾರಗಳು, ಕಟ್ಟಡದ ನಿಯಂತ್ರಣ ಮತ್ತು ಭದ್ರತೆ ಕುರಿತಂತೆ ವಿಚಾರ ಗೋಷ್ಠಿ ಆಯೋಜಿಸಲಾಗಿದೆ. ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮೂರನೇ ದಿನದಂದು ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ, ಎಲಿವೇಟರ್ ನ ಮೂಲಭೂತ ಅಂಶಗಳು, 4 ನೇ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಗೋಷ್ಠಿ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

 

ಪ್ರಾಜೆಕ್ಟ್ ಮ್ಯಾನೇಜರ್ ಶ್ರೀ ಜಿ. ವಾಸುದೇವ್, ಶ್ರೀ ವಿಶಾಲ್ ಗಾಯಕ್ವಾಡ್, ಶ್ರೀ ಮತಿ ದಿವ್ಯ ಇತರ ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top