ವಿಶ್ವ ಕ್ಯಾನ್ಸರ್ ದಿನ ಪ್ರಯುಕ್ತ 12ಸಾವಿರ ಜನರಿಂದ ಬೃಹತ್ ವಾಕಥಾನ್

ಕ್ಯಾನ್ಸರ್ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಬೃಹತ್ ಜಾಗೃತಿ ಜಾಥ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಸರ್ಜಿಕಲ್ ಸೊಸೈಟಿ ಆಫ್ ಇಂಡಿಯಾ, ಸಂಕಲ್ಪ ಚೇಸ್ ಕ್ಯಾನ್ಸರ್ ಫೌಂಡೇಷನ್ ರೀಸರ್ಚ್ ಟ್ರಸ್ಟ್, ನವೋದಯ ಇನ್ ಬೆಂಗಳೂರು, ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ 5ಕಿಲೋ ಮೀಟರ್ ವಾಕಥಾನ್(ನಡಿಗೆ ಜಾಥ) ಆಯೋಜಿಸಲಾಗಿತ್ತು.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸರ್ಜಿಕಲ್ ಸೊಸೈಟ್ ಆಫ್ ಬೆಂಗಳೂರು ಅಧ್ಯಕ್ಷ ಡಾ||ರಾಜಶೇಖರ ಸಿ.ಜಾಕ, ಗುಪ್ತಚರ ಇಲಾಖೆ ಐ.ಪಿ.ಎಸ್.ಲಾಭೂರಾಮ್,  ಚಲನಚಿತ್ರ ನಟ ಪ್ರೇಮ್, ವಿನಯ್ ರಾಜ್ ಕುಮಾರ್, ಗಿರಿರಾಜ್, ನಟಿ ಕಾರುಣ್ಯ ರಾಮ್ ರವರು ವಾಕಥಾನ್  ಗೆ ಚಾಲನೆ ನೀಡಿದರು.

12ಸಾವಿರ ಜನ 5 ಕಿಲೋಮೀಟರ್ ವಾಕಥಾನ್ ನಲ್ಲಿ ಭಾಗಿಯಾದರು. ಕಂಠೀರವ ಕ್ರೀಡಾಂಗಣದ ಮೂಲಕ ಹಡ್ಸನ್ ಸರ್ಕನ್ ವಿಧಾನಸೌಧ, ಅಂಚೆ ಕಚೇರಿ ಮೂಲಕ ಇನ್ ಫೆಂಟ್ರಿ ರಸ್ತೆ ಕಂಠೀರವ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಆಹಾರ ಪದ್ದತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ವ್ಯಾಯಾಮವಿಲ್ಲದ ಕಾರಣದಿಂದ ಕ್ಯಾನ್ಸರ್ ರೋಗ ಬರುತ್ತದೆ.

ಪ್ರಪಂಚದಲ್ಲಿ ಅತ್ಯಂತ ಹಾನಿಕಾರಕವಾಗಿರುವ ಕಾಯಿಲೆಗಳಲ್ಲಿ ಕ್ಯಾನ್ಸರ್ ರೋಗ ಒಂದಾಗಿದೆ.

ಕ್ಯಾನ್ಸರ್ ರೋಗದ ಆರಂಭಿಕ ಪತ್ತೆಯಿಂದ ಜೀವಗಳನ್ನು ಉಳಿಸುತ್ತದೆ ಎಂದರು.

 

ಪ್ರತಿಯೊಬ್ಬರು ಪ್ರತಿದಿನ ಒಂದು ಅವರ ಜೀವನಕ್ಕಾಗಿ ಮೀಸಲು ಇಡಬೇಕು, ಯೋಗ, ವಾಕಿಂಗ್, ವ್ಯಾಯಾಮ ಮಾಡುವುದರಿಂದ ಆರೋಗ್ಯವಂತರಾಗಿ ಇರಬಹುದು. ವಿಶ್ವ ಕ್ಯಾನ್ಸರ್ ದಿನದಂದು ಕ್ಯಾನ್ಸರ್ ಮುಕ್ತ ಸಮಾಜ ರಾಜ್ಯನಮ್ಮದಾಗಲಿ ಎಂದು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ಹೇಳಿದರು.

ಸರ್ಜಿಕಲ್ ಸೊಸೈಟಿ  ಬೆಂಗಳೂರು ಅದ್ಯಕ್ಷರು, ರಾಜಶೇಖರ್ ಸಿ.ಜಾಕ ಮಾತನಾಡಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕ್ಯಾನ್ಸರ್ ಕುರಿತು ಜನಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ.ಆರೋಗ್ಯವಂತರಾಗಿ ಇರಬೇಕು ಎಂದರೆ ಪ್ರತಿಯೊಬ್ಬರು 1ಗಂಟೆ ವಾಕಿಂಗ್ ಮಾಡಬೇಕು .

ಕ್ಯಾನ್ಸರ್ ಮೊದಲನೇಯ ಹಂತದಲ್ಲಿ ಪತ್ತೆ ಮಾಡಿದರೆ, ಬೇಗನೆ ಚಿಕಿತ್ಯೆ ನೀಡಿ ಜನರ ಜೀವನ ಉಳಿಸಬಹುದು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತಿದೆ ಅದ್ದರಿಂದ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸಲು ನಾನು ಪುಸ್ತಕ ಹೊರತಂದ್ದೀನೆ ಕನ್ನಡ, ಮರಾಠಿ,ಗುಜರಾತ್, ಬೆಂಗಾಲಿ, ತಮಿಳು,ತೆಲುಗು 9ಭಾಷೆಯಲ್ಲಿ ಮುದ್ರಣಗೊಂಡಿದೆ.

 

ಅತಂಕಪಡಬೇಡಿ ಕ್ಯಾನ್ಸರ್ ಗುಣಪಡಿಸಬಹುದು ಸೂಕ್ತ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡಿಕೊಂಡು ವೈದ್ಯರ ಸಲಹೆಯಿಂದ ಕ್ಯಾನ್ಸರ್ ರೋಗ ಮುಕ್ತ ಮಾಡಬಹುದು ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top