ದೇಶದಲ್ಲೇ  ಮೊದಲ ಪ್ರಯೋಗ : ಪ್ರಾಣಿ – ಪಕ್ಷಿ ಹಾಗು ಜೀವ ವೈವಿಧ್ಯ ಸಂರಕ್ಷಣೆಗೆ ಡಿಜಿಟಲ್ ತಂತ್ರಜ್ಞಾನ

ಬೆಂಗಳೂರು: ಜೀವವೈವಿಧ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿರೀಕ್ಷೆ ಇರುವ ಡಿಜಿಟಲ್ ತಂತ್ರಜ್ಞಾನದ ಮೂಲಕ ಜೀವ ವೈವಿಧ್ಯ ಸಂರಕ್ಷಣೆಗಾಗಿ ರೂಪಿಸಲಾಗಿರುವ ಜಾಗತಿಕ ಮುಕ್ತ ವೇದಿಕೆಯ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನ ನಗರದಲ್ಲಿ ಶನಿವಾರ ನಡೆಯಲಿದೆ. ನಗರದ ರಾಡಿಸನ್ ಬ್ಲೂ ಏಟ್ರಿಯಾನಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಏಟ್ರಿಯಾ ವಿಶ್ವವಿದ್ಯಾಲಯದ ಉತ್ಕೃಷ್ಟತೆಯ ಕೇಂದ್ರ ಮತ್ತು ಸ್ವಿಸ್ನೆಕ್ಸ್ SWISSNEX [Swissnex is the Swiss global network connecting Switzerland and the world in education, research & innovation] ಸಹಯೋಗದೊಂದಿಗೆ ಆಯೋಜಿಸುತ್ತಿದೆ. ಈ ಸಮ್ಮೇಳನ, ಡಿಜಿಟಲ್ ತಂತ್ರಜ್ಞಾನ ಮೂಲಕ ನಮ್ಮ ಜೀವ ವೈವಿಧ್ಯತೆ ರಕ್ಷಣೆಯ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ಚರ್ಚಿಸಲಿದೆ.

ರಾಜ್ಯದ ಐಟಿ ಬಿಟಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ, ಅರಣ್ಯ ಮತ್ತು ಪರಿಸರ ಸಚಿವ ಶ್ರೀ ಈಶ್ವರ್ ಖಂಡ್ರೆ, ಕೇರಳದ ಅರಣ್ಯ ಮತ್ತು ಪರಿಸರ ಸಚಿವ ಶ್ರೀ ಎ.ಕೆ. ಸಸಿಂದ್ರನ್, ಗೋವಾದ ಅರಣ್ಯ ಮತ್ತು ಪರಿಸರ ಸಚಿವ ವಿಶ್ವಜಿತ್ ರಾಣೆ ಹಾಗು ಇಂಟೆರ್ ಸ್ಪೀಸೀಸ್ ಮನಿ ಗ್ರೂಪ್ನ ಜೊನಾಥನ್ ಲೆಡ್ಗರ್ಡ್ ಹಾಗು ಈ ಕ್ಷೇತ್ರದ ಪರಿಣಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿ 20 ದೇಶಗಳ ಪ್ರತಿನಿಧಿಗಳು, ನಾನಾ ವಿಶ್ವದ ಅತ್ಯಂತ ಸೂಕ್ಷ್ಮ ಜೀವ ವೈವಿಧ್ಯ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ರಾಜ್ಯಧಾನಿ ಏಷ್ಯಾದ ಸಿಲಿಕಾನ್ ಸಿಟಿ ಎಂದೇ ಪ್ರಸಿದ್ದವಾಗಿರುವ ಬೆಂಗಳೂರಿನಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಈ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ. 

 ಮನುಕುಲದ ಎದುರಿಗಿರುವ ಅತಿ ದೊಡ್ಡ ಸವಾಲು ಹವಾಮಾನ ಬದಲಾವಣೆ. ಇದರಿಂದಾಗಿ  ಜೀವವೈವಿಧ್ಯ ವ್ಯವಸ್ಥೆಯು ನಾಶವಾಗುವ ಸವಾಲು ಎದುರಾಗಿದೆ. ಈ ಹಿನ್ನಲೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಜಿ20 ರಾಷ್ಟ್ರಗಳು ಮತ್ತು ದಕ್ಷಿಣ ಜಗತ್ತಿಯ ದೇಶಗಳನ್ನು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನ ಇದಾಗಿದೆ.

 ಈ ವೇದಿಕೆಯು ನಾನಾ ರಾಷ್ಟ್ರಗಳ ನಡುವೆ ಸಹಕಾರವನ್ನು ಬೆಳೆಸಲು ಮತ್ತು ಜೀವವೈವಿಧ್ಯ ಸಂರಕ್ಷಣೆಯ ನಿರ್ಣಾಯಕ ಸಮಸ್ಯೆಯನ್ನು ನಿಭಾಯಿಸಲು ಅನನ್ಯ ಅವಕಾಶವನ್ನು ಪ್ರತಿನಿಧಿಸುತ್ತದೆ. ಎಲ್ಲರಿಗೂ ಮುಕ್ತವಾಗಿರುವ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಈ ವೇದಿಕೆಯು ಜೀವ ವೈವಿಧ್ಯ  ರಕ್ಷಣೆಯನ್ನು ಸುಲಭಗೊಳಿಸಲು, ಹವಾಮಾನ ಬದಲಾವಣೆ ತಗ್ಗಿಸುವಿಕೆಗೆ ಕೊಡುಗೆ ನೀಡಲು ಮತ್ತು ಮಾನವ ಮತ್ತು ಮಾನವೇತರ ಜೀವಿಗಳ ನಡುವೆ ಸಂಘರ್ಷವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

 ನೀತಿ ಸಂಸ್ಥೆಗಳು, ಪರಿಸರ ತಜ್ಞರು, ಹೆಸರಾಂತ ವಿಜ್ಞಾನಿಗಳು ಮತ್ತು ಗೌರವಾನ್ವಿತ ರಾಜತಾಂತ್ರಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿಷ್ಠಿತ ವ್ಯಕ್ತಿಗಳು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿ ಈ ಅಂತಾರಾಷ್ಟ್ರೀಯ ಮಹತ್ವದ ವಿಷಯದ ಬಗ್ಗೆ ಚರ್ಚಿಸಲಿದ್ದಾರೆ.

Facebook
Twitter
LinkedIn
WhatsApp
Print
Email
Telegram
Digg

Leave a Comment

Your email address will not be published. Required fields are marked *

Translate »
Scroll to Top