ಎಂಬಿಬಿಎಸ್ ಪದವಿ ಪಡೆಯದ ದಂತ ವೈದರನ್ನು ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ

ಬೆಂಗಳೂರು: ಎಂಬಿಬಿಎಸ್‌ ಪದವಿ ಪಡೆಯದ ಹಿನ್ನೆಲೆಯಲ್ಲಿ ದಂತ ವೈದ್ಯರನ್ನು ರಾಜ್ಯ ರ‍್ಕಾರಿ ಸೇವೆಗಳ ಅಡಿ ಬರುವ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆಗೆ ನಿಯೋಜಿಸುವಂತಿಲ್ಲ ಎಂದು ಹೈಕರ‍್ಟ್‌ನ ಧಾರವಾಡ ಪೀಠ ಆದೇಶಿಸಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕು ಆರೋಗ್ಯ ಕಚೇರಿಯ ವೈದ್ಯಾಧಿಕಾರಿಯಾಗಿ ತಮ್ಮನ್ನು ನಿಯೋಜಿಸಿದ್ದ ಆದೇಶ ಹಿಂಪಡೆದ ರ‍್ಕಾರದ ಕ್ರಮ ಪ್ರಶ್ನಿಸಿ ಹಿರಿಯ ದಂತ ವೈದ್ಯಾಧಿಕಾರಿ ಡಾ.ವಿದ್ಯಾವತಿ ಯು. ಪಾಟೀಲ್‌ ಸಲ್ಲಿಸಿದ್ದ ರ‍್ಜಿಯನ್ನು ನ್ಯಾಯಮರ‍್ತಿಗಳಾದ ಎಂ ಐ ಅರುಣ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠ ವಜಾ ಮಾಡಿದೆ.

ರ‍್ಕಾರ ೨೦೨೧ರ ಜೂನ್‌ ೧ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ರ‍್ಹರಾಗಿರುತ್ತಾರೆ. ೧೯೯೨ರ ಜುಲೈ ೧೭ರಂದು ರ‍್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನರ‍್ದೇಶನಾಲಯವು ಹೊರಡಿಸಿದ ಅಧಿಸೂಚನೆ ಪ್ರಕಾರ ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವಿ ಪಡೆದಿರಬೇಕು. ಪ್ರಕರಣದಲ್ಲಿ ರ‍್ಜಿದಾರರು ದಂತ ವೈದ್ಯರಾಗಿದ್ದು, ಎಂಬಿಬಿಎಸ್‌ ಪದವಿ ಪಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಮತ್ತು ಹಿರಿಯ ದಂತ ವೈದ್ಯ ಆರೋಗ್ಯ ಅಧಿಕಾರಿ, ರಾಜ್ಯ ರ‍್ಕಾರ ಸೇವೆಗಳ ಅಡಿಯಲ್ಲಿ ಬರುವ ಹುದ್ದೆಗಳಾಗಿವೆ. ಹಿರಿಯ ದಂತ ಆರೋಗ್ಯ ಅಧಿಕಾರಿಯು ಬಿಡಿಎಸ್‌ ಪದವೀಧರರು. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಎಂಬಿಬಿಎಸ್‌ ಪದವೀಧರರು. ಈ ಹುದ್ದೆಗಳು ಬಿಟ್ಟು ರ‍್ನಾಟಕ ಸಿವಿಲ್‌ ಸೇವೆಗಳು (ವೈದ್ಯಕೀಯ ಅಧಿಕಾರಿಗಳೂ ಮತ್ತು ಇತರೆ ಸಿಬ್ಬಂದಿ ರ‍್ಗಾವಣೆ ನಿಯಂತ್ರಣ) ಕಾಯಿದೆ-೨೦೧೧ರ ಸೆಕ್ಷನ್‌ ೨(ಜಿ) ಅಡಿಯ ಶೆಡ್ಯೂಲ್‌-೧ ಅಡಿಯಲ್ಲಿ ಇತರೆ ಅಧಿಕಾರಿಗಳ ಹುದ್ದೆಗಳು ಇವೆ. ಅವರೆಲ್ಲರೂ ಆರೋಗ್ಯ ಅಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ. ಆದರೆ, ಅವರು ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ಗಳು ಅಲ್ಲ. ಇದು ಪ್ರತ್ಯೇಕ ಕೆಟಗರಿಯಾಗಿದೆ. ಅವರು ವೈದ್ಯಾಧಿಕಾರಿಗಳಾಗಿಯೇ ಪರಿಗಣಿಸಲ್ಪಡುತ್ತಾರೆ ಎಂದು ಪೀಠ ಹೇಳಿದೆ.

ಅಜಿ‍‍ರರು ಎಂಬಿಬಿಎಸ್‌ ಪದವೀಧರರಲ್ಲ. ಜನರಲ್‌ ಡ್ಯೂಟಿ ಮೆಡಿಕಲ್‌ ಆಫೀಸರ್‌ ಆಗಿ ಅವರನ್ನು ಪರಿಗಣಿಸಲಾಗದು. ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ಅವರು ರ‍್ಹರಲ್ಲ. ಹೀಗಾಗಿ, ಕುಂದಗೋಳ ತಾಲ್ಲೂಕು ಆರೋಗ್ಯ ಅಧಿಕಾರಿಯಾಗಿ ರ‍್ಜಿದಾರರನ್ನು ನಿಯೋಜನೆ ಮಾಡಿರುವುದು ತಪ್ಪು. ಅದನ್ನು ಅರಿತುಕೊಂಡೇ ರ‍್ಕಾರ ತನ್ನ ಆದೇಶ ಹಿಂಪಡೆದುಕೊಂಡಿದೆ ಎಂದು ಪೀಠ ಆದೇಶಿಸಿದೆ.

ಕೆಎಟಿ ಆದೇಶವು ದೋಷಪೂರಿತವಾಗಿದ್ದು, ಆ ಆದೇಶವನ್ನು ರದ್ದುಪಡಿಸಬೇಕು. ಕುಂದಗೊಳ ತಾಲ್ಲೂಕು ಕಚೇರಿ ವೈದ್ಯಾಧಿಕಾರಿಯಾಗಿ ನಿಯೋಜಿಸಿದ್ದ ಕ್ರಮ ಹಿಂಪಡೆದ ರ‍್ಕಾರದ ಆದೇಶ ರದ್ದುಪಡಿಸಬೇಕು ಎಂದು ರ‍್ಜಿದಾರರು ಕೋರಿದ್ದರು. ಈ ವಾದ ಆಕ್ಷೇಪಿಸಿದ್ದ ರ‍್ಕಾರ ವಕೀಲರು, ರ‍್ಜಿ ವಜಾಗೊಳಿಸಬೇಕು ಎಂದು ಕೋರಿದರು. ಕೆಎಟಿ ಆದೇಶದಲ್ಲಿ ಯಾವುದೇ ತಪ್ಪು ಕಂಡು ಬರುತ್ತಿಲ್ಲ ಎಂದು ತಿಳಿಸಿದ ಹೈಕರ‍್ಟ್, ರ‍್ಜಿ ವಜಾಗೊಳಿಸಿ ಆದೇಶಿಸಿದೆ.

ರ‍್ಜಿದಾರರ ಪರ ವಕೀಲರು, ವಿದ್ಯಾವತಿ ಕ್ಲಾಸ್‌-೧ (ಗ್ರೂಪ್‌ ಎ) ಅಧಿಕಾರಿ. ರ‍್ಕಾರದ ಮರ‍್ಗಸೂಚಿಗಳ ಪ್ರಕಾರ ಕುಂದಗೋಳ ತಾಲ್ಲೂಕು ಆರೋಗ್ಯಾಧಿಕಾರಿ ಹುದ್ದೆಯಿಂದ ೨೦೨೩ರ ಜನವರಿ ೨ರಿಂದ ಮೂರು ರ‍್ಷದವರೆಗೆ ಅವರನ್ನು ರ‍್ಗಾವಣೆ ಮಾಡುವಂತಿರಲಿಲ್ಲ. ರ‍್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ವೈದ್ಯಕೀಯ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ರ‍್ಗಾವಣೆ ನಿಯಂತ್ರಣ) ಕಾಯಿದೆ-೨೦೧೧ರ ನಿಯಮಗಳ ಅನುಸಾರ ರ‍್ಜಿದಾರರು ವೈದ್ಯಾಧಿಕಾರಿಯಾಗಿದ್ದಾರೆ. ಅದರಂತೆ ಅವರು ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ರ‍್ಹರಾಗಿದ್ದಾರೆ ಎಂದು ವಾದಿಸಿದ್ದರು.

 ರ‍್ಜಿದಾರರು ದಂತ ವೈದ್ಯರಾಗಿದ್ದು, ರ‍್ಕಾರಿ ಉದ್ಯೋಗಿಯಾಗಿದ್ದಾರೆ. ೨೦೨೩ರ ಜನವರಿ ೨ರಂದು ಕುಂದಗೋಳ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ರ‍್ಗಾವಣೆಯಾಗಿದ್ದರು. ಆದರೆ, ಅದು ಅವಧಿಪರ‍್ವ ರ‍್ಗಾವಣೆ ಎಂಬ ಕಾರಣಕ್ಕೆ ರ‍್ಗಾವಣೆ ಆದೇಶವನ್ನು ೨೦೨೩ರ ಸೆಪ್ಟೆಂಬರ್‌ ೮ರಂದು ರದ್ದುಪಡಿಸಲಾಗಿತ್ತು. ಈ ಆದೇಶ ಪ್ರಶ್ನಿಸಿ ರ‍್ಜಿದಾರರು ಕೆಎಟಿಗೆ ರ‍್ಜಿ ಸಲ್ಲಿಸಿದ್ದರು. ರ‍್ಜಿದಾರರು ತಾಲ್ಲೂಕು ಆರೋಗ್ಯ ಅಧಿಕಾರಿ ಹುದ್ದೆ ಹೊಂದಲು ರ‍್ಹತೆ ಹೊಂದಿಲ್ಲ ಎಂದು ಹೇಳಿ ರ‍್ಜಿ ವಜಾಗೊಳಿಸಿ ಕೆಎಟಿ ೨೦೨೩ರ ಜನವರಿ ೨೪ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕರ‍್ಟ್‌ಗೆ ಮೇಲ್ಮವಿ ಸಲ್ಲಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top