ಬಳ್ಳಾರಿ: ನಗರದ ಕೌಲ್ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿಹಟ್ಟಿ ಪ್ರದೇಶದಲ್ಲಿ ‘ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಬಂಡಿಹಟ್ಟಿಯಲ್ಲಿನ, ಕೇಂದ್ರೀಯ ವಿದ್ಯಾಲಯದ ಹಿಂಭಾಗದ ಪ್ರದೇಶದಲ್ಲಿ ವಾಸಿಸುತ್ತಿದ್ದ ದಂಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೌಲ್ಬಜಾರ್ ಪೊಲೀಸರು ಹೇಳಿದ್ದಾರೆ. ಮೃತ ದಂಪತಿಯನ್ನು ವೀರಣ್ಣ (28) ಹಾಗೂ ದುರುಗಮ್ಮ (25) ಎಂದು ಹೇಳಲಾಗಿದ್ದು, ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು ಎಂಬುದು ತಿಳಿದುಬಂದಿಲ್ಲ.

ಈ ದಂಪತಿಗಳಿಗೆ ಓರ್ವ ಗಂಡು ಮಗು ಹಾಗೂ ಓರ್ವ ಹೆಣ್ಣು ಮಗು ಇದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Facebook
Twitter
LinkedIn
WhatsApp
Email
Print
Telegram