ಬಳ್ಳಾರಿ ಮೇಯರ್ ಆಗಿ ಮುಲ್ಲಂಗಿ ನಂದೀಶ್, ಉಪಮೇಯರ್ ಆಗಿ ಡಿ.ಸುಕುಂ

ಬಳ್ಳಾರಿ: ಇಂದು ಬಳ್ಳಾರಿ ನಗರ ಪಾಲಿಕೆಯ ನೂತನ ಮೇಯರ್ – ಉಪಮೇಯರ್ ಸೇರಿದಂತೆ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರುಗಳ ಆಯ್ಕೆಗೆ ಚುನಾವಣೆ ನಡೆದಿದ್ದು, ಮೇಯರ್ ಆಗಿ ಮುಲ್ಲಂಗಿ ನಂದೀಶ್ ಉಪಮೇಯರ್ ಆಗಿ ಡಿ.ಸುಕುಂ ಅವರು ಆಯ್ಕೆ ಆಗಿದ್ದಾರೆ.

 

ಬಳ್ಳಾರಿ ನಗರ ಪಾಲಿಕೆಯ 39 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದ 21 ಹಾಗೂ ಪಕ್ಷೇತರರಾಗಿ ಆರಿಸಿ ಬಂದು ಕಾಂಗ್ರೆಸ್ ಬೆಂಬಲಿಸಿರುವ 5 ಜನ ಸದಸ್ಯರು ಸೇರಿದಂತೆ 26 ಜನರ ಬಲವಿದ್ದು, ಬಿಜೆಪಿಯವರು 13 ಸದಸ್ಯರ ಬಲ ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷ ನಿಚ್ಛಳ ಬಹುಮತ ಹೊಂದಿರುವುದರಿಂದ ಅಧಿಕಾರ ಸೂತ್ರ ಹಿಡಿಯಲಿದೆ .

ಮೇಯರ್ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಸಹಜವಾಗಿಯೇ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಮುಖ್ಯವಾಗಿ ಮುಲ್ಲಂಗಿ ನಂದೀಶ್, ಮುಂಡ್ಲೂರು ಪ್ರಭಂಜನ್ ಕುಮಾರ್, ಹಿರಿಯ ಸದಸ್ಯ ಪಿ.ಗಾದೆಪ್ಪನವರು ತಮಗೆ ಅವಕಾಶ ಕಲ್ಪಿಸುವಂತೆ ಕೋರಿದ್ದರು.

ಕಳೆದ ಎರಡು ಬಾರಿ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣೆ ನಿಗದಿ ಮಾಡಿ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು. ಅಂತೆಯೇ ಇಂದು ಚುನಾವಣೆ ನಡೆದಿದ್ದು, ಮೇಯರ್ ಆಗಿ ಮುಲ್ಲಂಗಿ ನಂದೀಶ್ ಹಾಗೂ ಉಪಮೇಯರ್ ಆಗಿ ಡಿ.ಸುಕುಂ ಅವರು ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಸಭೆ ನಡೆಸಿ, ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ತೀರ್ಮಾನ ಮಾಡಲಾಯಿತು. ಆ ಪ್ರಕಾರ ಮೇಯರ್ ಆಗಿ ಮುಲ್ಲಂಗಿ ನಂದೀಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ಉಪಮೇಯರ್ ಆಗಿ ಡಿ.ಸುಕುಂ ಅವರು ಆಯ್ಕೆಯಾಗಿದ್ದಾರೆ.

 

ಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಬೆಳಗ್ಗೆಯಿಂದಲೇ ಆರಂಭಗೊಂಡ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಯಾರನ್ನೂ ಪಾಲಿಕೆ ಕಚೇರಿಯೊಳಗೆ ಬಿಟ್ಟಿರಲಿಲ್ಲ. 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top