ಬೆಂಗಳೂರು: ರೇಣುಕಾ ಸ್ವಾಮಿ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ‘ಅನ್ನು ಪೊಲೀಸರು ಬಂಧಿಸಿದ್ದಾರೆ. ರ‍್ಶನ್ ವಿಚಾರಣೆ ನಡೆಯುತ್ತಿದ್ದು ಇಂದೇ ರ‍್ಶನ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆ ಇದೆ. ರ‍್ಶನ್ ಮೇಲೆ ಯಾವ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂಬುದರ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಸೆಕ್ಷನ್ ೩೦೨ (ಕೊಲೆ), ೩೬೯ (ಅಪಹರಣ) ಇನ್ನೂ ಕೆಲವು ಸೆಕ್ಷನ್ಗಳನ್ನು ಹೇರುವುದು ಖಾಯಂ ಎನ್ನಲಾಗುತ್ತಿದೆ.
ಇದರ ನಡುವೆ ನಟಿ ರಮ್ಯಾ, ದರ್ಶನ್ ‘ಗೆ ಯಾವ ರೀತಿಯ ಶಿಕ್ಷೆ ಆಗಲಿದೆ ಎಂಬ ಬಗ್ಗೆ ಮಾಡಲಾಗಿರುವ ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿದ್ದಾರೆ . ಕರ್ನಾಟಕ ಬಾಕ್ಸ್ ಆಫೀಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ‘ದರ್ಶನ್ ‘ಗೆ ಸೆಕ್ಷನ್ ೩೦೨ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಒಂದೊಮ್ಮೆ ಈ ಪ್ರಕರಣದಲ್ಲಿ ರ‍್ಶನ್ಗೆ ಶಿಕ್ಷೆ ಆಗದಿದ್ದಲ್ಲಿ ಹಣದ ಪ್ರಭಾವ ಕೆಲಸ ಮಾಡಿದೆ ಎಂರ‍್ಥ ಹಾಗೂ ಭಾರತೀಯ ಕಾನೂನು ವ್ಯವಸ್ಥೆ ಎಷ್ಟು ದರ‍್ಬಲವಾಗಿದೆ ಎಂದು ತೋರಿದಂತಾಗುತ್ತದೆ. ಸಂತ್ರಸ್ತರಿಗೆ ಸಿಗಬೇಕಾದ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ’ ಎಂದು ಟ್ವೀಟ್ ಮಾಡಲಾಗಿದೆ. ಈ ಟ್ವೀಟ್ ಅನ್ನು ನಟಿ ರಮ್ಯಾ ರೀಟ್ವೀಟ್ ಮಾಡಿದ್ದಾರೆ.
ನಟಿ ರಮ್ಯಾ ವಿರುದ್ಧ ದರ್ಶನ್ ‘ ಅಭಿಮಾನಿಗಳು ಕೆಲವು ಬಾರಿ ಖ್ಯಾತೆ ತೆರೆದಿದ್ದರು. ರ‍್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ನಡೆದಾಗ ರಮ್ಯಾ, ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಬೇಕು ಎಂದಿದ್ದರು. ಅವರ ಸಂದೇಶ ರ‍್ಶನ್ ಅಭಿಮಾನಿಗಳ ಅತಿರೇಕದ ರ‍್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಂತಿತ್ತು. ಈ ಕಾರಣಕ್ಕೆ ರ‍್ಶನ್ ಅಭಿಮಾನಿಗಳು ರಮ್ಯಾ ವಿರುದ್ಧ ಟ್ರೋಲ್ ಮಾಡಿದ್ದರು.
ರಮ್ಯಾ ಹಾಗೂ ದರ್ಶನ್ ‘ದತ್ತ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ ದರ್ಶನ್ ‘ ಹಾಗೂ ರಮ್ಯಾ ಒಳ್ಳೆಯ ಸ್ನೇಹಿತರೇನೂ ಆಗಿರಲಿಲ್ಲ. ದರ್ಶನ್ ರ ಅಭಿಮಾನಿಗಳ ಅತಿರೇಕದ ರ‍್ತನೆಯನ್ನು, ಆ ಅತಿರೇಕದ ರ‍್ತನೆಗೆ ದರ್ಶನ್ ‘ನೀಡುವ ಬೆಂಬಲವನ್ನು ಪರೋಕ್ಷವಾಗಿ ಟೀಕಿಸಿದ್ದರು ನಟಿ ರಮ್ಯಾ. ಈಗ ರ ದರ್ಶನ್ ‘ ಮೇಲೆ ಕೊಲೆ ಆರೋಪ ಬಂದಿರುವ ಹಿನ್ನೆಲೆಯಲ್ಲಿ ದರ್ಶನ್ ಗೆ ತಪ್ಪಿಗೆ ಶಿಕ್ಷೆಯಾಗಲಿ ಎಂಬ ಸಂದೇಶವನ್ನು ರೀಟ್ವೀಟ್ ಮಾಡಿ, ಸಂತ್ರಸ್ತನ ಕುಟುಂಬದ ಪರವಾಗಿ ನಿಂತಿದ್ದಾರೆ.