ಜೂನ್ ತಿಂಗಳ ೧೦ರ ವರೆಗೆ ಮಾವು ಮತ್ತು ಹಲಸು ಮೇಳ

ಬೆಂಗಳೂರು: ಮಾವು ಅಭಿವೃದ್ಧಿ ನಿಗಮದ ವತಿಯಿಂದ ಇಂದಿನಿಂದ ಮುಂದಿನ ತಿಂಗಳ ೧೦ರ ವರೆಗೆ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗಿದೆ.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇಳ ನಡೆಯಲಿದೆ. ೭೪ ಮಾವು ಮಳಿಗೆ, ೯ ಹಲಸು, ೧೪ ಇತರೆ ಹಣ್ಣಿನ ಮಳಿಗೆಗಳನ್ನು ತೆರೆಯಲಾಗಿದೆ.

 

ಚಿತ್ರದುರ್ಗ, ತುಮಕೂರಿನಿಂದ ಬಾದಾಮಿ, ರಸಪುರಿ, ಮಲಗೋವಾ ಹಾಗೂ ವೈವಿಧ್ಯಮಯ ಹಲಸಿನ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಾಗಲಿವೆ. ಮೇಳ ಬೆಳಗ್ಗೆ ೭ ರಿಂದ ರಾತ್ರಿ ೭ ಗಂಟೆಯವರೆಗೆ ತೆರದಿರಲಿದೆ ಎಂದು ಮಾವು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top