ಬೆಂಗಳೂರು: ಊರು ಬಿಟ್ಟು ಉದ್ಯೋಗ ಅರಸಿ ನಗರಕ್ಕೆ ಬಂದವರಿಗೆ ಕಿರುಕುಳ ನೀಡಿದ ಆಟೋ ಚಾಲಕನ ಮೇಲೆ ಯುವಕ ಹಲ್ಲೆ ಮಾಡಿ ಪಾರಾಗಿರುವ ಘಟನೆ ಕೋಣನಕುಂಟೆಯ ಬಳಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಆಟೋ ಚಾಲಕ ಮಚ್ಚಿನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಆತನ ಮೇಲೆ ಯುವಕ ಮಹಮ್ಮದ್ ಅನ್ಸರ್ ಹಲ್ಲೆ ಮಾಡಿದ್ದಾನೆ.
ಊರು ಬಿಟ್ಟು ಉದ್ಯೋಗ ಅರಸಿ ಬಂದ ಯುವಕ-ಯುವತಿಯ ಪಾಲಿಗೆ ಆಟೋ ಚಾಲಕ ಯಮನಾಗಿದ್ದು, ಆತನ ಕೈಯಿಂದ ಅವರಿಬ್ಬರು ತಪ್ಪಿಸಿಕೊಂಡಿದ್ದೆ ರೋಚಕವಾಗಿದೆ.
ಚಿಕ್ಕಮಗಳೂರು ಮೂಲದ ಯುವತಿ ತ್ರಿಷಾ, ಕೇರಳ ಮೂಲದ ಯುವಕ ಮಹಮ್ಮದ್ ಅನ್ಸರ್ ಕೆಲಸ ಅರಸಿ ಮೇ ೪ ರಂದು ನಗರಕ್ಕೆ ಬಂದಿದ್ದಾರೆ. ಮಹಮದ್ ಅನ್ಸರ್ ಮತ್ತು ತ್ರಿಷಾ ತಮ್ಮ ಸ್ನೇಹಿತ ಚೇತನ್ ನನ್ನು ಭೇಟಿ ಮಾಡಲು ರಾತ್ರಿ ಜಯನಗರ ಮೆಟ್ರೋ ಸ್ಟೇಷನ್ ಬಳಿ ಬಂದು ಕಾಯ್ದಿದ್ದರು.
ಆದರೆ ಚೇತನ್ ಇವರನ್ನು ಭೇಟಿಯಾಗಲು ಬರುವುದಿಲ್ಲ. ಆಗ ತ್ರಿಷಾ ಮತ್ತು ಮಹಮದ್ ಆನ್ಸರ್ ಇಬ್ಬರೇ ಇರುವುದನ್ನು ನೋಡಿದ ಓರ್ವ ಆಟೋ ಚಾಲಕ ರಾತ್ರಿ ೧೦:೩೦ ಸುಮಾರಿಗೆ ಇವರ ಬಳಿ ಬಂದು ನೀವು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ.
ರೂಂ ಬೇಕಾ ಎಂದ:
ಆಗ ತ್ರಿಷಾ ಮತ್ತು ಮಹಮದ್ ಅನ್ಸರ್ ರೈಲ್ವೆ ನಿಲ್ದಾಣಕ್ಕೆ ಹೋಗಬೇಕು ಎಂದಾಗ ಆಟೋ ಚಾಲಕ ಬನ್ನಿ ಕರೆದೊಯುವೆ ಎಂದಿದ್ದಾನೆ. ಸರಿ ಅಂತ ಯುವಕ ಮತ್ತು ಯುವತಿ ಆಟೋ ಹತ್ತಿದ್ದಾರೆ. ಸ್ವಲ್ಪ ದೂರ ಹೋದ ಬಳಿಕ ಆಟೋ ಚಾಲಕ, ತ್ರಿಷಾ ಮತ್ತು ಮಹಮದ್ ಅನ್ಸಾರಿ?ಗೆ ತಮಗೆ ರೂಂ ಬೇಕಾ ಎಂದು ಕೇಳಿದ್ದಾನೆ. ಆಗ ತ್ರಿಷಾ ಮತ್ತು ಮಹಮದ್ ಅನ್ಸಾರಿ ರೈಲ್ವೆ ಸ್ಟೇಷನ್?ಗೆ ಬಿಟ್ಟರೆ ಸಾಕು ಎಂದು ಹೇಳಿದ್ದಾರೆ.
ಆಗ ಆಟೋ ಚಾಲಕ “ನನ್ನದೇ ಒಂದು ಮನೆ ಪಿಳ್ಳೆಗಾನಹಳ್ಳಿಯಲ್ಲಿದ್ದು, ಅದು ಖಾಲಿಯಿದೆ ಅದನ್ನು ನೀವು ನೋಡಿ ನಿಮಗೆ ಇಷ್ಟವಾದರೆ ಬಾಡಿಗೆಗೆ ಇರಿ” ಎಂದು ಹೇಳಿ ಕರೆದುಕೊಂಡು ಹೋಗುವಾಗ, ಆಟೋ ಚಾಲಕ ಮಧ್ಯ ದಾರಿಯಲ್ಲಿ ಆಟೋ ನಿಲ್ಲಿಸಿದ್ದಾನೆ.
ಅಲ್ಲಿಂದ ಹತ್ತಿರದಲ್ಲಿ ಮದ್ಯ ಖರೀದಿಸಿ ಪಿಳ್ಳಗಾನಹಳ್ಳಿಯಲ್ಲಿಯ ಮನೆಯೊಂದರ ಮುಂದೆ ಆಟೋ ನಿಲ್ಲಿಸಿ, ಆ ಮನೆಯೊಳಗೆ ತ್ರಿಷಾ ಮತ್ತು ಮಹಮದ್ ಅನ್ಸಾರಿನನ್ನು ಕರೆದುಕೊಂಡು ಹೋಗಿದ್ದಾನೆ. ಇಷ್ಟೊತ್ತಿಗಾಗಲೆ ಸಮಯ ಮಧ್ಯರಾತ್ರಿ ೧೨:೩೦ ಮೀರಿದೆ. ಆಗ ಆಟೋ ಚಾಲಕ ನಿಮಗೆ ಈಗಾಗಲೇ ತಡವಾಗಿದೆ ಇವತ್ತು ಇಲ್ಲಿಯೇ ಇದ್ದು ಬೆಳಿಗ್ಗೆ, ಎದ್ದು ಹೋಗಿ ಎಂದು ಹೇಳಿ ಅವರ ಮುಂದೆಯೇ ಮದ್ಯ ಕುಡಿದಿದ್ದಾನೆ.
ಅಲ್ಲದೆ ಮಹಮದ್ ಅನ್ಸರ್‌ಗೂ ಸಹ ಬಲವಂತವಾಗಿ ಮದ್ಯ ಕುಡಿಸಿದ್ದಾನೆ. ನಂತರ ಆ ಆಟೋ ಚಾಲಕ ತ್ರಿಷಾರನ್ನು ಕರೆದು ಆತನ ಪಕ್ಕದಲ್ಲಿ, ಮಲಗು ಬಾ ಎಂದು ಹೇಳಿದ್ದಾನೆ. ಆಗ ತ್ರಿಷಾ ಭಯವಾಗಿ ಏನ್ ಅಂಕಲ್ ನೀವು ನನ್ನ ತಂದೆಯಂತೆ ಇದ್ದೀರಿ, ಎಂದು ಹೇಳಿದ್ದಾಳೆ. ಆಗ ಆಟೋ ಚಾಲಕ ಅಲ್ಲಿಯೇ ಇದ್ದ ಒಂದು ಮಚ್ಚು ತೋರಿಸಿ ಬೆದರಿಸಿ ನೀನು ನನ್ನ ಜೊತೆಯಲಿ ಮಲಗಿ ಜೊತೆಯಲಿ ಸಹಕರಿಸದಿದ್ದರೆ ನಿಮ್ಮಿಬ್ಬರನ್ನು ಇಲ್ಲಿಯೇ ಮುಗಿಸಿ, ಎಲ್ಲಿಯಾದರೂ ಬಿಸಾಡುತ್ತೇನೆಂದು ಹೆದರಿಸಿದ್ದಾನೆ.
ಆಗ ತ್ರಿಷಾ ಹೆದರಿ ಆತನ ಹತ್ತಿರ ಹೋದಾಗ, ಆಟೋ ಚಾಲಕ ಮಚ್ಚನ್ನು ಪಕ್ಕದಲ್ಲಿ ಇಟ್ಟು ತ್ರಿಷಾ ಕೈಯನ್ನು ಗಟ್ಟಿಯಾಗಿ ನೋವಾಗುವಂತೆ ಹಿಡಿದು ತಿರುಗಿಸಿ, ಮುತ್ತಿಕ್ಕಲು ಬಂದು ಸೊಂಟಕ್ಕೆ, ಎದೆಯ ಭಾಗಕ್ಕೆ ಕೈ ಹಾಕಿದ್ದಾನೆ. ಆಗ ತ್ರಿಷಾ ಕಿರುಚಿಕೊಂಡಿದ್ದಾರೆ.
ಆತನು ಬಿಡದಿದ್ದಾಗ ಮಹಮದ್ ಅನ್ಸರ್, ತ್ರಿಷಾರನ್ನು ಬಿಡಿಸಲು ಬಂದು ಅಲ್ಲಿಯೇ ಆಟೋ ಚಾಲಕ ಇಟ್ಟಿದ್ದ ಮಚ್ಚನ್ನು ತೆಗೆದುಕೊಂಡು ಆತನಿಗೆ ೨-೩ ಬಾರಿ ಬಲವಾಗಿ ಹೊಡೆದಿದ್ದಾನೆ.
ಆಗ ಆಟೋ ಚಾಲಕ ರಕ್ತದ ಮಡುವಿನಲ್ಲಿ ನರಳಾಡಲು ಆರಂಭಿಸಿದ್ದಾನೆ. ಬಳಿಕ ತ್ರಿಷಾ ಮತ್ತು ಮಹಮದ್ ಅನ್ಸಾರಿ ಹೊರಗೆ ಬಂದು ಫೋನ್‌ನಲ್ಲಿ ಗೂಗಲ್ ಮ್ಯಾಪ್ ಹಾಕಿಕೊಂಡು ಮುಖ್ಯರಸ್ತೆಗೆ ನಡೆದುಕೊಂಡು ಬಂದು ಅಲ್ಲಲ್ಲಿ ಡ್ರಾಪ್ ಕೇಳಿಕೊಂಡು ಮೆಜೆಸ್ಟಿಕ್ ಹೋಗಿದ್ದಾರೆ.
ಈ ಸಂಬಂಧಿಸಿದಂತೆ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.