ಇಬ್ರಾಹಿಂ ರೈಸಿ ನಿಧನ: ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಹೆಲಿಕಾಪ್ಟರ್ ಭಾನುವಾರ ಪತನಗೊಂಡಿದ್ದು, ಇದರಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಸೇರಿದಂತೆ ಎಲ್ಲರೂ ಮೃತಪಟ್ಟಿರುವುದಾಗಿ ಇರಾನ್‌ ಮಾಧ್ಯಮಗಳು ವರದಿ ಮಾಡಿವೆ. ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ ಇರಾನ್ನಲ್ಲಿ ಆಡಳಿತ ಚುಕ್ಕಾಣಿಯನ್ನು ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರು ವಹಿಸಿಕೊಂಡಿದ್ದಾರೆ. ಇರಾನ್ ಸಂವಿಧಾನದ ಪ್ರಕಾರ ಅಧ್ಯಕ್ಷರು ಸಾವನ್ನಪ್ಪಿದರೆ, ಅವರ ನಂತರ ಉಪಧ್ಯಾಕ್ಷರು ಅಲ್ಲಿ ಮುಂದುವರಿಯುತ್ತಾರೆ.

ನಿನ್ನೆ ರಾತ್ರಿ ಇರಾನ್-ಅಜರ‍್ಬೈಜಾನಿ ಗಡಿಯಲ್ಲಿರುವ ಕ್ವಿಜ್ ಖಲಾಸಿ ಅಣೆಕಟ್ಟಿನ ಉದ್ಘಾಟನೆಯ ನಂತರ ಇರಾನಿನ ನಗರವಾದ ತಬ್ರಿಜ್‌ಗೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಅಪಘಾತಗೊಂಡಿದೆ. ಈ ಅಪಘಾತದಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾಹಿಯಾನ್ ಕೂಡ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನು ಇಬ್ರಾಹಿಂ ರೈಸಿ ಸಾವಿನ ನಂತರ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಇರಾನ್ನಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅವರು ಇಬ್ರಾಹಿಂ ರೈಸಿ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದು, ಆಡಳಿತದಲ್ಲಿ ಗಮನರ‍್ಹ ಕೆಲಸವನ್ನು ಮಾಡಿದ್ದಾರೆ. ಹಾಗೂ ರಾಜಕೀಯ ಅನುಭವನ್ನು ಹೊಂದಿದ್ದಾರೆ. ಈ ಹಿಂದೆ ಅವರು ರ‍್ಕಾರಿ ಸ್ವಾಮ್ಯದ ಸೆಟಾಡ್‌ನ ಮುಖ್ಯಸ್ಥರಾಗಿದ್ದರು. ಹಾಗೂ ಅಂತರರಾಷ್ಟ್ರೀಯ ಕಾನೂನು ಮತ್ತು ನರ‍್ವಹಣೆಯಲ್ಲಿ ಉನ್ನತ ಪದವಿಗಳನ್ನು ಪಡೆದಿದ್ದಾರೆ. ಮೊಹಮ್ಮದ್ ಮೊಖ್ಬರ್, ಪರ‍್ಲಿಮೆಂಟರಿ ಸ್ಪೀಕರ್ ಮೊಹಮ್ಮದ್ ಬಾಕರ್ ಖಲಿಬಾಫ್ ಮತ್ತು ನ್ಯಾಯಾಂಗ ಮುಖ್ಯಸ್ಥ ಘೋಲ್ಲಾಮ್‌ಹೊಸ್ಸೇನ್ ಮೊಹ್ಸೇನಿ ಎಝೆಯ್ ಅವರನ್ನು ಒಳಗೊಂಡಿರುವ ಮಂಡಳಿಯು ೫೦ ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಮೊಹಮ್ಮದ್ ಮೊಖ್ಬರ್ ಅವರೇ ಈ ಸ್ಥಾನದಲ್ಲಿ ಮುಂದುವರಿಯಬಹುದು ಎಂದು ಎಲ್ಲ ನಾಯಕರ ವಿಶ್ವಾಸ ಹಾಗೂ ಬೆಂಬಲವನ್ನು ಪಡೆದರೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.

ಮೊಹಮ್ಮದ್ ಮೊಖ್ಬರ್, ಸೆಪ್ಟೆಂಬರ್ ೧, ೧೯೫೫ ರಂದು ಜನಿಸಿದರು. ಇರಾನ್‌ನ ರಾಜಕೀಯ ಮತ್ತು ರ‍್ಥಿಕ ಕ್ಷೇತ್ರಗಳಲ್ಲಿ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದಾರೆ. ೨೦೨೧ರಲ್ಲಿ ಇರಾನ್ ಮೊದಲ ಉಪಾಧ್ಯಕ್ಷರಾಗಿ ನೇಮಕಗೊಂಡರು. ಇದು ಇರಾನ್ ಇತಿಹಾಸಲ್ಲೇ ಮೊದಲು. ೧೯೭೯ ರ ಇಸ್ಲಾಮಿಕ್ ಕ್ರಾಂತಿಯ ನಂತರ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ನರ‍್ವಹಿಸಲು ರಚಿಸಲಾದ ಸೆಟಾಡ್‌ನಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇದರ ಜತೆಗೆ ಅವರ ಮೇಲೆ ಕೆಲವೊಂದು ಅರೋಪ ಹಾಗೂ ವಿವಾದಗಳು ಕೂಡ ಇತ್ತು. ೨೦೧೦ರಲ್ಲಿ, ಯುರೋಪಿಯನ್ ಯೂನಿಯನ್ ಅವರನ್ನು ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ನರ‍್ಬಂಧನೆಯಲ್ಲಿಟ್ಟಿತ್ತು. ಎರಡು ರ‍್ಷಗಳ ನಂತರ ಈ ಪಟ್ಟಿಯಿಂದ ಅವರನ್ನು ತೆಗೆದು ಹಾಕಲಾಗಿತ್ತು.

 

ಇನ್ನು ಉಪಾಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರವು ಕೂಡ ಅವರ ಮೇಲೆ ಅನೇಕ ಆರೋಪಗಳು ಇತ್ತು. ಅವರು ಕೂಡ ಅಧ್ಯಕ್ಷ ಸ್ಥಾನದ ಆಕ್ಷಾಂಕೆ ಕೂಡ ಹೌದು ಎಂದು ಹೇಳಲಾಗಿದೆ. ಇದೀಗ ಆರೋಪದ ನಡುವೆ ಅವರು ಇರಾನ್ ಅಧ್ಯಕ್ಷರಾಗಿ ಮುಂದುವರಿಯುವುದು ಸವಾಲಿನ ಪ್ರಶ್ನೆಯಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top