ಬುಡಕಟ್ಟು ಸಮುದಾಯಕ್ಕೆ ವಿಧಾನಪರಿಷತ್ ಪ್ರಾತಿನಿಧ್ಯೆ, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಅಲೆಮಾರಿ ಘಟಕ ರಚಿಸುವಂತೆ ಆಗ್ರಹ

ಬೆಂಗಳೂರು: ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಪ್ರಾತಿನಿಧ್ಯೆ ನೀಡದೇ ಅನ್ಯಾಯ ಮಾಡಲಾಗಿದ್ದು, ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಸಮುದಾಯದವರನ್ನು ಗುರುತಿಸಿ ನಾಮನರ‍್ದೇಶನ  ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಎಸ್.ಸಿ/ಎಸ್.ಟಿ, ಅಲೆಮಾರಿ ಘಟಕ ರಚಿಸುವಂತೆ ಎಸ್.ಸಿ/ಎಸ್.ಟಿ, ಅಲೆಮಾರಿ, ವಿಮುಕ್ತ ಬುಡಕಟ್ಟು ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆರ‍್ಶ್ ಎಲ್ಲಪ್ಪ, ಅವಕಾಶ ವಂಚಿತ ಅಲೆಮಾರಿ ಜಾತಿಗಳಿಗೆ ರಾಜಕೀಯ ಪಕ್ಷಗಳು ಆದ್ಯತೆ ನೀಡಬೇಕು. ರಾಜ್ಯದಲ್ಲಿ ಅವಕಾಶ ವಂಚಿತ ೫೧-ಎಸ್ಸಿ, ೨೩-ಎಸ್ಟಿ ಅಲೆಮಾರಿ ಜಾತಿಗಳಿದ್ದು, ೨೫ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಈ ಸಮುದಾಯವು ಶೈಕ್ಷಣಿಕ, ಸಾಮಾಜಿಕ ಮತ್ತು ರ‍್ಥಿಕವಾಗಿ ಅತ್ಯಂತ ಹಿಂದುಳಿದಿದೆ ಎಂದರು. ಪಾರಂಪರಿಕ ವೃತ್ತಿ ಅನುಸರಿಸುತ್ತಾ ಅಸಂಘಟಿತ ಸಮುದಾಯವಾಗಿರುವ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ರಾಜ್ಯದಲ್ಲಿ ಯಾವುದೇ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ/ತಾಲ್ಲೂಕು ಪಂಚಾಯತ್ ಅಧ್ಯಕ್ಷರು ಮತ್ತು ಕನಿಷ್ಠ ಪಕ್ಷ ಸದಸ್ಯರಾಗಿಲ್ಲ. ಕೆ.ಪಿ.ಎಸ್ಸಿ ಸದಸ್ಯತ್ವ ಗಗನ ಕುಸುಮವಾಗಿದೆ. ನಮ್ಮಲ್ಲಿ ಸಂಘಟಕರು, ವಿದ್ವಾಂಸರು, ತಜ್ಞರು, ಅನುಭವಿಗಳು ಇದ್ದರೂ ಸಹ, ನೇರವಾಗಿ ಚುನಾವಣೆಯಲ್ಲಿ ಸ್ರ‍್ಧಿಸಿ ಆಯ್ಕೆ ಆಗಲು ಸಾಧ್ಯವಾಗುತ್ತಿಲ್ಲ ಎಂದರು.

ಇತ್ತೀಚೆಗೆ ಎಸ್ಸಿ/ಎಸ್ಟಿ ಅಲೆಮಾರಿ ಅಭಿವೃದ್ದಿ ನಿಗಮ ಸ್ಥಾಪಿಸಲಾಗಿದ್ದರೂ ಸಹ ಸರ‍್ಪಕ ಅನುದಾನ ನೀಡದೇ ವಂಚಿಸಲಾಗುತ್ತಿದೆ. ವಿಧಾನ ಪರಿಷತ್ ಮೂಲಕ ರಾಜಕೀಯ – ಅವಕಾಶ ನೀಡಲು ಇರುವ ಅವಕಾಶವನ್ನು ಮತ್ತೆ ಅಲೆಮಾರಿಗಳ ಹೆಸರಿನಲ್ಲಿ ಅಲೆಮಾರಿಗಳಲ್ಲದ ವ್ಯಕ್ತಿಗಳು ಕಬಳಿಸಲು ಹೊಂಚುಹಾಕುತ್ತಿರುವುದು ಖಂಡನೀಯ ಎಂದು ಆರ‍್ಶ್ ಯಲ್ಲಪ್ಪ ದೂರಿದರು. ಸುದ್ದಿಗೋಷ್ಠಿಯಲ್ಲಿ ಕರ‍್ಯಾಧ್ಯಕ್ಷ ವೆಂಕಟೇಶ್ ದೊರ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top