ಸಿಎಸ್ ಆರ್ ಅನುದಾನ ಅಡಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರ‍್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿರುವ ಟಾಪರ್‌ಗಳನ್ನು ಬೆಂಗಳೂರಿನಲ್ಲಿ ನಿನ್ನೆ ಮಂಗಳವಾರ ಸನ್ಮಾನಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ ಅನುದಾನವನ್ನು ಅವಲಂಬಿಸದೆ ರ‍್ಕಾರಿ ಶಾಲೆಗಳನ್ನು ಸಿಎಸ್‌ಆರ್ ಅಡಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ ಟಾಪರ್‌ಗಳಾದ ಪ್ರಥಮ ರ‍್ಯಾಂಕ್ ಪಡೆದ ಅಂಕಿತಾ ಮತ್ತು ತೃತೀಯ ರ‍್ಯಾಂಕ್ ಪಡೆದ ನವನೀತ್ ಅವರಿಗೆ ಕ್ರಮವಾಗಿ ೫ ಲಕ್ಷ ಮತ್ತು ೨ ಲಕ್ಷ ರೂಪಾಯಿಗಳನ್ನು ನೀಡಿ ಸನ್ಮಾನಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ೨೦ ರ‍್ಕಾರಿ ಶಾಲೆಗಳ ಕಾಮಗಾರಿ ಆರಂಭವಾಗಿದೆ. ಸಿಎಸ್ಆರ್ ನೆರವಿನ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಶಾಲೆಗಳ ಮೂಲಕ ಗ್ರಾಮೀಣ ಪ್ರದೇಶದ ವಿದ್ಯರ‍್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ರ‍್ಕಾರ ಹೊಂದಿದೆ ಎಂದರು.

ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಹಿಂಪಡೆದ ಬಳಿಕ ಸರಕಾರಿ ಶಾಲೆಗಳ ಅಭಿವೃದ್ಧಿ ಕುರಿತು ಸಭೆ ಕರೆಯಲಾಗುವುದು ಎಂದರು.

“ನನ್ನ ಆಸಕ್ತಿ ರಾಜಕೀಯ, ಆದರೆ ನನ್ನ ಆಯ್ಕೆ ಶಿಕ್ಷಣ ಎಂದು ನಾನು ಯಾವಾಗಲೂ ಹೇಳುತ್ತೇನೆ”. ಗ್ರಾಮೀಣ ಪ್ರದೇಶದ ರ‍್ಕಾರಿ ಶಾಲೆಗಳನ್ನು ವಿಶ್ವರ‍್ಜೆಯ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸುವುದು ನನ್ನ ಗುರಿಯಾಗಿದೆ ಎಂದು ಹೇಳಿದರು.

ಆಹ್ವಾನದ ಮೇರೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಂಕಿತಾ ಹಾಗೂ ಮಂಡ್ಯದಿಂದ ನವನೀತ್ ಅವರು ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ನಿವಾಸಕ್ಕೆ ತಮ್ಮ ಪಾಲಕರು ಹಾಗೂ ಶಾಲೆಯ ಪ್ರತಿನಿಧಿಗಳೊಂದಿಗೆ ಆಗಮಿಸಿದ್ದರು.

 ಟಾಪರ್‌ಗಳ ಶಾಲೆಗಳಿಗೆ ಸಿಎಂ ೧.೫ ಕೋಟಿ ರೂ ಘೋಷಣೆ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆಯ ಮುಧೋಳದ ಅಂಕಿತಾ ಬಸಪ್ಪ ಕೊಣ್ಣೂರ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಮಂಡ್ಯ ಜಿಲ್ಲೆಯ ನವನೀತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿ ಅಂಕಿತಾ ಓದಿದ ಮುಧೋಳ ತಾಲೂಕಿನ ಮಲ್ಲಿಗೆರೆಯ ಮೊರರ‍್ಜಿ ದೇಸಾಯಿ ವಸತಿ ಶಾಲೆಯ ಅಭಿವೃದ್ಧಿಗೆ ೧ ಕೋಟಿ ರೂಪಾಯಿ, ನವನೀತ್ ಓದಿದ ಮಂಡ್ಯ ಜಿಲ್ಲೆಯ ತುಂಬಕೆರೆಯ ಮೊರರ‍್ಜಿ ದೇಸಾಯಿ ವಸತಿ ಶಾಲೆಗೆ ೫೦ ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದರು. ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾ ಅವರಿಗೆ ೫ ಲಕ್ಷ ಹಾಗೂ ನವನೀತ್‌ ಅವರಿಗೆ ೩ ಲಕ್ಷ ರೂಪಾಯಿಗಳ ಚೆಕ್‌ ನೀಡಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top