ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದ ಹಿನ್ನೆಲೆಯಲ್ಲಿ ತೃತೀಯಲಿಂಗಿಯ ಕತ್ತು ಹಿಸುಕಿ ಕೊಂದ ೫೧ ರ‍್ಷದ ಮಹಿಳೆಯನ್ನು ಜೀವನ್ ಬೀಮಾ ನಗರ ಪೊಲೀಸರು ಬಂಧಿಸಿದ್ದಾರೆ.
ಹಳೆ ವಿಮಾನ ನಿಲ್ದಾಣ ರಸ್ತೆಯ ಮುರುಗೇಶಪಾಳ್ಯದಲ್ಲಿ ಮೇ ಮೊದಲ ವಾರದಲ್ಲಿ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಪ್ರೇಮಾ ಮುರುಗೇಶಪಾಳ್ಯದಲ್ಲಿ ವಾಸಿಸುತ್ತಿದ್ದರು. ಪ್ರೇಮಾ ಮನೆಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಮುರುಗೇಶಪಾಳ್ಯ ನಿವಾಸಿ ಮಂಗಿ ನಾಯ್ಕ ಅಲಿಯಾಸ್ ಮಂಗಿ ಭಾಯಿ (೪೨) ಕೊಲೆಯಾದ ಮಹಿಳೆ.
ಪ್ರೇಮಾ ೨೦ ರ‍್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಮಂಗಿಯೊಂದಿಗೆ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೇ ೧ ಮತ್ತು ೩ ರ ನಡುವೆ ಪ್ರೇಮಾ ಮತ್ತು ಮಂಗಿನಡುವೆ ತೀವ್ರ ಜಗಳ ನಡೆದಿತ್ತು, ಈ ವೇಳೆ ಪ್ರೇಮಾಳನ್ನು ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಮಂಗಿಯನ್ನು ಪ್ರೇಮಾ ಟವೆಲ್‌ನಿಂದ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದಳು ಎನ್ನಲಾಗಿದೆ.
ಮಂಗಿ ಕರೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆಕೆಯ ಸಹಚರರು ಅನುಮಾನಗೊಂಡಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ. ಮೇ ೩ ರಂದು ಮನೆಯಲ್ಲಿ ಆಕೆಯ ಕೊಳೆತ ಶವ ಪತ್ತೆಯಾಗಿದೆ.
ಆರಂಭದಲ್ಲಿ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಕತ್ತಿನ ಮೂಳೆಯಲ್ಲಿ ಹೆಚ್ಚಿನ ಒತ್ತಡದಿಂದ ಮಂಗಿ ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಪೊಲೀಸರು ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದ್ದು, ಪ್ರೇಮಾಳನ್ನು ಶಂಕಿಸಿದ್ದಾರೆ. ಮೇ ೮ ರಂದು ಪೊಲೀಸರು ಪ್ರೇಮಾಳನ್ನು ಕೊಲೆಯ ಆರೋಪದ ಮೇಲೆ ಆಕೆಯ ಗ್ರಾಮದಿಂದ ಬಂಧಿಸಿ ಕರೆತಂದಿದ್ದಾರೆ.