ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಗರದ ಬಸವೇಶ್ವರ ನಗರದಲ್ಲಿ ರುವ ಮತಗಟ್ಟೆಗೆ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು.
ಈ ವೇಳೆ ಮಾತನಾಡಿದ ಅವರು ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷದ ಗೆಲುವು ಖಂಡಿತ ನಾವು ಈಗಾಗಲೇ ಗೆದ್ದಿದ್ದೇವೆ, ಕೇವಲ ಸಂಭ್ರಮಾಚರಣೆ ಅಷ್ಟೇ ಬಾಕಿ ಇದೆ, ಜನ ಬದಲಾವಣೆ ಬಯಸುತ್ತಿದ್ದಾರೆ, ಬಿಜೆಪಿಯವರ ಸುಳ್ಳು ಭರವಸೆಗಳಿಂದ ಹಾಗೂ ಮಾತಿಗೆ ತಪ್ಪುವ ನೀತಿಯಿಂದಾಗಿ ಜನ ಈ ಬಾರಿ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದರು.
ದೇಶದ ಉಳಿವಿಗಾಗಿ ಹಾಗೂ ಸಂವಿಧಾನದ ಉಳಿವಿಗಾಗಿ ಮತದಾರರು ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಪ್ರಜ್ವಲ್ ರೇವಣ್ಣಾ ಪೆನ್ ಡ್ರೈವ್ ಪ್ರಕರಣದ ಕುರಿತು ಮಾತನಾಡಿದ ನಾರಾಭರತ್ ರೆಡ್ಡಿ ಇಂತಹ ಪ್ರಕರಣಗಳಲ್ಲಿ ಯಾರೂ ಸಹ ಪ್ರೋತ್ಸಾಹ ಮಾಡುವುದಿಲ್ಲ, ಇದರಲ್ಲಿ ಹೊರಗಿನವರ ಪ್ರೊತ್ಸಾವಿಲ್ಲ, ಇದು ವ್ಯಕ್ತಿಯ ಕೆಲಸವಾಗಿದೆ, ಬಿಜೆಪಿಯವರು ಜೆಡಿಎಸ್ ನವರ ಜೊತೆ ಮದುವೆ ಮಾಡಿಕೊಂಡಿದ್ದಾರೆ, ಇದು ಅದನ್ನ ಬಿಡಿಸಿಕೊಳ್ಳಲಾಗದೆ ಕಷ್ಟ ಪಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರ ಆರೋಪವನ್ನ ತಳ್ಳಿಹಾಕಿದ ಭರತ್ ರೆಡ್ಡಿ ಬಿಜೆಪಿಯವರು ಮೊದಲು ಆಗಿರುವ ಘಟನೆ ಕುರಿತು ವಿವರಿಸಲಿ, ಆರೋಪಿಯನ್ನ ಕರೆತಂದು ಈ ವಿಷಯದಿಂದ ನಿರ್ದೋಷಿ ಎಂದು ಸಾಬೀತು ಪಡಿಸಲಿ ಎಂದರು. ಪ್ರತಿ ಬಾರಿ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡುವುದನ್ನು ಬಿಡಲಿ ಎಂದರಲ್ಲದೇ, ಜನರಿಗೆ ಎಲ್ಲವೂ ತಿಳಿದಿದೆ , ಜನ ಿವರ ಮಾತಿಗೆ ಮರುಳಾಗುವುದಿಲ್ಲ ಎಂದರು.