ಕುಟುಂಬ ಸಮೇತ  ಮತದಾನ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ

ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ 2ನೇ ಹಂತದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತವಾರಿ ಸಚಿವ ನಾಗೇಂದ್ರಅವರು ನಗರದ ಬಸವೇಶ್ವರ ನಗರದಲ್ಲಿ ರುವ ಮತಗಟ್ಟೆಗೆ ಕುಟುಂಬ ಸಮೇತ ಬಂದು ಮತದಾನ ಮಾಡಿದರು.

ಮತದಾನದ ಬಳಿಕ ಮಾತನಾಡಿದ ಸಚಿವ ನಾಗೇಂದ್ರ ಕಾಂಗ್ರೆಸ್ ಪಕ್ಷಕ್ಕೆ ನಾವು ಕೊಟ್ಟ ಗ್ಯಾರಂಟಿ ಸಾಕು, ಜನರು ನಮ್ಮ ಕೈ ಹಿಡಿಯುತ್ತಾರೆ,ನಮ್ಮ ಅಭ್ಯರ್ಥಿ, ತುಕಾರಾಂ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಅಷ್ಟೇ ಅಲ್ಲದೇ ಪ್ರಜ್ವಲ್ ರೇವಣ್ಣಾ ಪೆನ್ ಡ್ರೈವ್ ಪ್ರಕರಣದಲ್ಲಿ  ಆರ್ ಅಶೋಕ ವಿರುದ್ಧ ವಾಗ್ಧಾಳಿನಡೆಸಿದರು.

ಆರ್ ಅಶೋಕ ಹಿರಿಯ ನಾಯಕರು, ಅವರು ಒಮ್ಮೆ ಆರೋಪ ಮಾಡುವಾಗ ವಿಚಾರ ಮಾಡಬೇಕುನಮ್ಮ ಡಿ ಸಿ ಎಂ ಮೇಲೆ ವಿನಾಕಾರಣ ಆರೋಪ ಮಡುತಿದ್ದಾರೆ

ಬಿಜೆಪಿ ಯವರು ಇದರಲ್ಲಿ ರಾಜಕೀಯ ಮಾಡುತಿದ್ದಾರೆ, ಹೊಂದಾಣಿಕೆ ಮಾಟಿಕೊಂಡು ಸೋಲಿನ ಹತಾಶೆ ಅವರಿಗೆ ಕಾಡುತ್ತಿದೆ‌‌

ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ, ಅವರ ಬಳಿ ಏನು ಇಲ್ಲಾ ಹೀಗಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತಿದ್ದಾರೆ…

 

ಇದರ ಹಿಂದೆ ಯಾರ ಕೈವಾಡ ಇಲ್ಲಾ ಅವರು ಮಾಡಿದ ತಪ್ಪಿನಿಂದ  ತಪ್ಪಿಸಿಕೊಳ್ಳಲು ಈ ಆರೋಪ ಮಾಡುತ್ತಾರೆ. ಮಹಾನ್ ನಾಯಕ್ ಯಾರು ಅವರೇನು ಬಿಜೆಪಿಯಲ್ಲಿ ಇದ್ದಾರಾ ಜೆಡಿ ಎಸ್ ನಲ್ಲಿ ಇದ್ದಾರಾ.ಡಿಸಿ ಎಂ ಅವರ ಮೇಲೆ ಕಪ್ಪು ಚುಕ್ಕಿ ತರುತಿದ್ದಾರೆ, ಅವರ ಮೇಲೆ ವಿನಾಕಾರಣ ಆರೋಪ ಮಾಡುತಿದ್ದಾರೆ ಮೈತ್ರಿ ಪಕ್ಷಕ್ಕೆ ಪೆನ್ ಡ್ರೈವ್ ನಿಂದ ಚುನಾವಣೆಯಲ್ಲಿ ಭಾರಿ ನಷ್ಟ ಆಗಲಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top