ನವದೆಹಲಿ: ಭಾರತದ ಚುನಾವಣಾ ಆಯೋಗವು ವಿಶ್ವದ ಅತಿದೊಡ್ಡ ಚುನಾವಣೆ ವೀಕ್ಷಿಸಲು ೨೩ ದೇಶಗಳ ಚುನಾವಣಾ ನರ‍್ವಹಣಾ ಸಂಸ್ಥೆಗಳಿಂದ (ಇಎಂಬಿ) ೭೫ ಅಂತರರಾಷ್ಟ್ರೀಯ ಸಂರ‍್ಶಕರನ್ನು ಆಹ್ವಾನಿಸಿದೆ.
ಆಸ್ಟ್ರೇಲಿಯಾ, ರಷ್ಯಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ದೇಶ ಸೇರಿದಂತೆ ೨೩ ದೇಶಗಳ ಚುನಾವಣಾ ನರ‍್ವಹಣಾ ಸಂಸ್ಥೆಗಳ ಪ್ರತಿನಿಧಿಗಳು ಲೋಕಸಭಾ ಚುನಾವಣಾ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಭಾರತಕ್ಕೆ ಬಂದಿದ್ದಾರೆ. ಒಟ್ಟು ೭೫ ಪ್ರತಿನಿಧಿಗಳು ಸಣ್ಣ ಗುಂಪುಗಳಲ್ಲಿ ಆರು ರಾಜ್ಯಗಳಿಗೆ ಭೇಟಿ ನೀಡಲಿದ್ದು, ವಿವಿಧ ಲೋಕಸಭಾ ಕ್ಷೇತ್ರಗಳ ಚುನಾವಣಾ ಸಿದ್ಧತೆಯನ್ನು ಅವಲೋಕಿಸಲಿದ್ದಾರೆ.
ಚುನಾವಣಾ ಪ್ರಕ್ರಿಯೆಯ ವೀಕ್ಷಣೆಗೆ ವಿದೇಶಿ ಪ್ರತಿನಿಧಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರುವುದು ಇದೇ ಮೊದಲು ಎಂದು ಚುನಾವಣಾ ಆಯೋಗವು ಹೇಳಿದೆ. ಶನಿವಾರ ಆರಂಭವಾಗಿರುವ ಪ್ರವಾಸ ಕರ‍್ಯಕ್ರಮದಲ್ಲಿ ಭಾರತೀಯ ಚುನಾವಣಾ ವ್ಯವಸ್ಥೆಯ ಸೂಕ್ಷ್ಮತೆಗಳು ಮತ್ತು ಅಳವಡಿಸಿಕೊಂಡಿರುವ ಉತ್ತಮ ಪದ್ಧತಿಗಳನ್ನು ಪರಿಚಯಿಸಲಾಗುತ್ತದೆ. ವಿದೇಶಿ ಪ್ರತಿನಿಧಿಗಳು ಮಹಾರಾಷ್ಟ್ರ, ಗೋವಾ, ಗುಜರಾತ್, ರ‍್ನಾಟಕ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಭೂತಾನ್, ಮಂಗೋಲಿಯಾ, ಆಸ್ಟ್ರೇಲಿಯಾ, ಮಡಗಾಸ್ಕರ್, ಫಿಜಿ, ಕರ‍್ಗಿಜ್ ರಿಪಬ್ಲಿಕ್, ರಷ್ಯಾ, ಮೊಲ್ಡೊವಾ, ಟುನೀಶಿಯಾ, ಸೆಶೆಲ್ಸ್, ಕಾಂಬೋಡಿಯಾ, ನೇಪಾಳ, ಫಿಲಿಪೈನ್ಸ್, ಶ್ರೀಲಂಕಾ, ಜಿಂಬಾಬ್ವೆ, ಬಾಂಗ್ಲಾದೇಶ, ಕಝಾಕಿಸ್ತಾನ್, ಜರ‍್ಜಿಯಾ ಚಿಲಿ, ಉಜ್ಬೇಕಿಸ್ತಾನ್, ಮಾಲ್ಡೀವ್ಸ್, ಪಪುವಾ ನ್ಯೂ ಗಿನಿಯಾ ಮತ್ತು ನಮೀಬಿಯಾ ದೇಶಗಳಿಂದ ಒಟ್ಟಿ ೭೫ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಡಾ. ಸುಖಬೀರ್ ಸಿಂಗ್ ಸಂಧು ಅವರು ಮೇ ೫ ರಂದು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ,
ಭಾರತೀಯ ಚುನಾವಣಾ ಆಯೋಗವು ೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಸಂರ‍್ಶಕರ ಕರ‍್ಯಕ್ರಮವನ್ನುಆಯೋಜಿಸುವ ಮೂಲಕ ಅಂತರರಾಷ್ಟ್ರೀಯ ಸಹಕಾರ ಉತ್ತೇಜಿಸುವುದನ್ನು ಮುಂದುವರೆಸಿದೆ ಎಂದು ಇಅI ಹೇಳಿಕೆಯಲ್ಲಿ ತಿಳಿಸಿದೆ.