ಬೆಂಗಳೂರು: ಕೇಂದ್ರ ಕೇಂದ್ರ ಲೋಕಸೇವಾ ಆಯೋಗದಿಂದ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದು, ಶೇ 50 ರಷ್ಟು ಅಭ್ಯರ್ಥಿಗಳು ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ ಸೇರಿದವರಾಗಿದ್ದಾರೆ.
ರಾಜ್ಯದಿಂದ ಒಟ್ಟು 25 ಮಂದಿ ತೇರ್ಗಡೆಯಾಗಿದ್ದು, ಅದರಲ್ಲಿ 12 ಮಂದಿ ನಗರದ ಚಂದ್ರ ಲೇ ಔಟ್ ನಲ್ಲಿರುವ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಗೆ ಸೇರಿದವರಾಗಿದ್ದಾರೆ.
ಅಕಾಡೆಮಿಯ ನಾಗೇಂದ್ರ ಬಾಬು ಕುಮಾರ್ [160], ಶಶಾಂತ್ ಎನ್.ಎಂ. [459], ಮೇಘನ ಐ.ಎಂ. [589], ಡಾ. ಭಾನು ಪ್ರಕಾಶ್ [600], ಸುಮಾ ಎಚ್.ಕೆ. [635], ಶಾಂತಪ್ಪ ಕುರುಬರ [644], ತೇಜಸ್ ಎನ್ [668], ನವ್ಯ ಕೆ [696], ಮೇಘನ ಕೆ.ಟಿ. [721], ವಿವೇಕ್ ರೆಡ್ಡಿ ಎನ್ [741], ಸೃಷ್ಟಿ ದೀಪ್ [748] ಮತ್ತು ಹಂಸಶ್ರೀ ಎನ್.ಎ. [866] ಅವರು ವ್ಯಕ್ತಿತ್ವ ಪರೀಕ್ಷೆ ಹಾಗೂ ವಿವಿಧ ಹಂತಗಳಲ್ಲಿ ಅಕಾಡೆಮಿಯಿಂದ ಮಾರ್ಗದರ್ಶನ ಪಡೆದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಅಕಾಡೆಮಿಯ ಅಭ್ಯರ್ಥಿಗಳು ಎಲ್ಲಾ ಹಂತಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಏಕಾಗ್ರತೆ, ಛಲಬಿಡದೇ ಅಧ್ಯಯನ ಮಾಡಿದ್ದಾರೆ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.