ಬೆಂಗಳೂರು : “ಇಂದು ಹೋಟೆಲ್ ನಲ್ಲಿ ನಮ್ಮ ಶಾಸಕರಿಗೆ ರಾಜ್ಯಸಭೆ ಚುನಾವಣೆ ಮತದಾನದ ತರಬೇತಿ ಹಾಗೂ ಅಣಕು ಮತದಾನ ಮಾಡಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಿಲ್ಟನ್ ಹೋಟೆಲ್ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.
“ಇಂದು ಅಣಕು ಮತದಾನ ನಡೆಸಿ, ನಾಳೆ ಹೋಟೆಲ್ ನಿಂದ ನೇರವಾಗಿ ವಿಧಾನಸೌಧಕ್ಕೆ ತೆರಳಿ ನಮ್ಮ ಶಾಸಕರು ಮತದಾನ ಮಾಡಲಿದ್ದಾರೆ” ಎಂದು ತಿಳಿಸಿದರು.
ನಾಳೆ ಮತದಾನದ ವೇಳೆ ಅಡ್ಡಮತದಾನ ನಡೆಯಲಿದೆಯೆ ಎಂದು ಕೇಳಿದಾಗ, “ನಮ್ಮ ಕಡೆಯಿಂದ ಯಾವುದೇ ಅಡ್ಡ ಮತದಾನ ನಡೆಯುವುದಿಲ್ಲ” ಎಂದು ತಿಳಿಸಿದರು.
Facebook
Twitter
LinkedIn
WhatsApp
Email
Print
Telegram