ರುಪೇ ಪ್ರೈಮ್ ವಾಲಿಬಾಲ್ ಲೀಗ್: ಬಲಿಷ್ಠ ತಂಡದೊಂದಿಗೆ ಕಪ್ ಗೆಲ್ಲಲು ಬರ್ಜರಿ ತಯಾರಿ ಬೆಂಗಳೂರು ಟ್ರಾಪಿಡೋಸ್  ತಂಡ ಸಜ್ಜು

ಬೆಂಗಳೂರು: Ru-Pay Prime Volleyball League ನ ಮೂರನೇ ಆವೃತ್ತಿ, ಫೆಬ್ರವರಿ 15 ರಿಂದ ಚೆನ್ನೈ ನಲ್ಲಿ  ಆರಂಭವಾಗಲಿದ್ದು, ಪಂಕಜ್ ಶರ್ಮಾ ನಾಯಕತ್ವದ Bengaluru Torpedoes ತಂಡ ಕಪ್ ಗೆಲ್ಲಲು ಸಜ್ಜಾಗಿದೆ.

ಅಮೆರಿಕದ ಖ್ಯಾತ ವಾಲಿಬಾಲ್ ಆಟಗಾರ ಡೇವಿಡ್ ಲೀ ಅವರ ಮಾರ್ಗದರ್ಶನದಲ್ಲಿ ನಗರದ ಯಲಹಂಕದಲ್ಲಿರುವ ಪಡುಕೋಣೆ-ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಬೆಂಗಳೂರು ತಂಡ ಕಳೆದ ಮೂರು ತಿಂಗಳಿಂದ ಸತತ ಅಭ್ಯಾಸ ನಡೆಸಿದೆ.

 

Bengaluru Torpedoes ಸೇರಿದಂತೆ ಒಟ್ಟು 9 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ. ಕಳೆದ ಬಾರಿ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿತ್ತು. ಆದರೆ ಅಹ್ಮದಾಬಾದ್ ವಿರುದ್ಧ ಪರಾಭವಗೊಂಡಿತ್ತು.

ಈ ಬಾರಿ Bengaluru Torpedoes ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 15 ರಂದು ಕೋಲ್ಕತ್ತ ತಂಡ ‘Kolkata ThunderBolts’ ವಿರುದ್ಧ ಆಡುತ್ತಿದೆ.

ಕನ್ನಡಿಗ  ಸರ್ಜ್ಜನ್ ಶೆಟ್ಟಿ, ಬ್ರೆಜ್ಜಿಲ್  ಮತ್ತು ಆಸ್ಟ್ರೇಲಿಯಾದ ಯೂನಿವರ್ಸಲ್ ಆಟಗಾರರು ಈ ಬಾರಿ ತಂಡದಲ್ಲಿ ಇದ್ದಾರೆ  ಎಂದು ಕೋಚ್ ಡೇವಿಡ್ ಲೀ ತಿಳಿಸಿದ್ದಾರೆ.

 

ಹಿಂದಿಗಿಂತಲೂ ತಂಡವನ್ನು ಈಗ ಇನ್ನಷ್ಟು  ಬಲಿಷ್ಠಗೊಳಿಸಲಾಗಿದೆ. ಸರ್ವ್, ಡಿಫೆನ್ಸ್ ಮತ್ತು ಬ್ಲಾಕ್ ನಲ್ಲಿ ತಂಡದ ಸಾಮರ್ಥ್ಯ ಹೆಚ್ಚಿಸಲಾಗಿದೆ. ತಂಡದ ಆಟದ ತಂತ್ರ ಹಿಂದಿನ ವರ್ಷದಂತೆಯೇ ಇರಲಿದೆ. ಆದರೆ ಆಟಗಾರರು ಬದಲಾಗಿದ್ದಾರೆ. ಹೀಗಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾಸ ಇದೆ ಎಂದು ಲೀ ಹೇಳಿದ್ದಾರೆ..

Ru-Pay Prime Volleyball League ನ ಮೂರನೇ ಆವೃತ್ತಿಗೆ Bollywood ನಟ ಹೃತಿಕ್ ರೋಷನ್ ರಾಯಭಾರಿ ಆಗಿದ್ದು ಕ್ರೀಡಾಪಟುಗಳ ಜೋಶ್ ಹೆಚ್ಚಿಸಲಿದ್ದಾರೆ.

Bengaluru Torpedoes ತಂಡ ಪ್ರಸ್ತುತ ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ sport’s excellency, ಯಲಹಂಕ, ಬೆಂಗಳೂರು ಕೇಂದ್ರದಲ್ಲಿ ತರಬೇತಿ ನಡೆಸುತ್ತಿದ್ದಾರೆ.

 

ಈ ಬಾರಿ ಕಪ್ ನಮ್ಮದೇ ಎನ್ನುತ್ತಿರುವ ಬೆಂಗಳೂರು ಟ್ರಾಪಿಡೋಸ್ ತಂಡಕ್ಕೆ ಅಮೇರಿಕಾದ ಪ್ರಸ್ಥಿದ್ದ ಆಟಗಾರ ಡೇವಿಡ್ ಲೀರವರು ತರಬೇತುಗಾರರಾಗಿ ಮತ್ತು ತಂಡದ ನಾಯಕರಾಗಿ ಪಂಕಜ್ ಶರ್ಮ, ಬ್ರೆಜಿಲ್ ನ ಪೌಲೋ ಲೋಮಿನೇರ್, ಆಸ್ಟೇಲಿಯದ ಥಾಮಸ್ haptinstall , ಕರ್ನಾಟಕದ ಆಟಗಾರ ಸರ್ಜ್ಜನ್ ಶೆಟ್ಟಿ ಇದ್ದಾರೆ. ತಂಡದ ನಿರ್ವಹಣೆಯನ್ನು ರಾಕೇಶ್ ಹರಿದಾಸ್ ಮತ್ತು ವಿಶಾಲ್ ಜೈಸನ್ ರವರು ವಹಿಸಿದ್ದಾರೆ.

Facebook
Twitter
LinkedIn
Facebook
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top