ಯಶ್ , ರಣಬೀರ್ ಕಪೂರ್,ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸಿನಿಮಾದ ಫಸ್ಟ್ ಗ್ಲಿಂಬ್ಸ್ ರಿಲೀಸ್
ಬಹು ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಸಿಕ್ಕಿದೆ. ಗುರುವಾರ ರಾಮಾಯಣದ ಗ್ಲಿಂಮ್ಸ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 2026 ರ ದೀಪಾವಳಿಗೆ ತೆರೆಗೆ ಬರಲಿದೆ.
ಯಶ್: ಬಹು ನಿರೀಕ್ಷೆಯಿಂದ ಅಭಿಮಾನಿಗಳು ಕಾಯುತ್ತಿದ್ದ ರಾಮಾಯಣ ಚಿತ್ರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಸಿಕ್ಕಿದೆ. ಗುರುವಾರ ರಾಮಾಯಣದ ಗ್ಲಿಂಮ್ಸ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ , ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಚಿತ್ರ 2026 ರ ದೀಪಾವಳಿಗೆ ತೆರೆಗೆ ಬರಲಿದೆ. ಇಂದು ಚಿತ್ರದ ಗ್ಲಿಂಮ್ಸ್ ಬಿಡುಗಡೆ ಮಾಡಲಾಗಿದೆ. ಮುಂಬೈ, ದೆಹಲಿ, ಚೆನ್ನೈ, ಅಹಮದಾಬಾದ್, ಕೋಲ್ಕತ್ತಾ, ಪುಣೆ, ಕೊಚ್ಚಿ ಮತ್ತು ಬೆಂಗಳೂರಿನಲ್ಲಿ ಅನಾವರಣ ಕಾರ್ಯಕ್ರಮ ನಡೆದಿದೆ. . ಮಹಾಕಾವ್ಯದ ಪ್ರೋಮೋದ 3 ನಿಮಿಷಗಳ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಚಿತ್ರವು ನವೆಂಬರ್ 2026 ರಲ್ಲಿ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ನಟ ಯಶ್ ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಹತ್ತು ವರ್ಷಗಳ ಆಕಾಂಕ್ಷೆ. ಸಾರ್ವಕಾಲಿಕ ಶ್ರೇಷ್ಠ ಮಹಾಕಾವ್ಯವನ್ನು ಜಗತ್ತಿಗೆ ತರುವ ನಿರಂತರ ದೃಢಸಂಕಲ್ಪ. ರಾಮಾಯಣವನ್ನು ಅತ್ಯಂತ ಗೌರವ ಮತ್ತು ಗೌರವದಿಂದ ಪ್ರಸ್ತುತಪಡಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವದ ಕೆಲವು ಶ್ರೇಷ್ಠರ ಸಹಯೋಗದ ಮೂಲಕ ಫಲಿತಾಂಶ. ಆರಂಭಕ್ಕೆ ಸ್ವಾಗತ. ರಾಮ v/s ರಾವಣ (sic) ನ ಅಮರ ಕಥೆಯನ್ನು ಆಚರಿಸೋಣ” ಎಂದು ಚಿತ್ರತಂಡ ಪೋಸ್ಟ್‌ನಲ್ಲಿ ತಿಳಿಸಿದೆ.ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಹನುಮಾನ್ ಆಗಿ ಸನ್ನಿ ಡಿಯೋಲ್ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಲಕ್ಷ್ಮಣನಾಗಿ ರವಿ ದುಬೆ ಪಾತ್ರ ನಿರ್ವಹಿಸಿದ್ದಾರೆ. ಮಂಡೋದರಿ ಪಾತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ಕೂಡ ಇದ್ದಾರೆ.
ಅಭಿಮಾನಿಗಳು ಫಿದಾ!
ಗುರುವಾರ ರಾಮಾಯಣದ ಗ್ಲಿಂಮ್ಸ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ರಾಮನಾಗಿ ಕಾಣಿಸಿಕೊಂಡ ರಣಬೀರ್ ಕಪೂರ್ ಅವರ ಫಿಟ್‌ನೆಸ್ ಅನ್ನು ಅಭಿಮಾನಿಗಳು ಹೊಗಳಿದ್ದಾರೆ. ಅದೇ ರೀತಿ ರಾವಣನ ಪಾತ್ರದಲ್ಲಿರುವ ಯಶ್ ನಟನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ರಾಮಾಯಣ’ ಚಿತ್ರವು ‘ಕಲ್ಕಿ 2898 AD’ (ರೂ. 600 ಕೋಟಿ), ‘RRR’ ಮತ್ತು ‘ಆದಿಪುರುಷ’ (ರೂ. 550 ಕೋಟಿ) ಚಿತ್ರಗಳ ನಿರ್ಮಾಣ ವೆಚ್ಚವನ್ನು ಮೀರಿಸಿದೆ. ಈ ಚಿತ್ರವನ್ನು ಸುಮಾರು 835 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ.