ಭಾರತೀಯ ಸನಾತನ ಸಂಸ್ಕೃತಿ ವಿಶ್ವ ಶೇಷ್ಠ, ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಮಹತ್ವ : ಸುಭುದೇಂದ್ರ ತೀರ್ಥ ಸ್ವಾಮೀಜಿ
ಜಯನಗರ: ರಕ್ಷಾ ಫೌಂಡೇಷನ್ 13ನೇ ವರ್ಷದ ವಾರ್ಷಿಕೋತ್ಸವದಲ್ಲಿ ಸುಮಂಗಲಿಯರಿಂದ ಶ್ರೀ ಲಲಿತಾ ಸಹಸ್ರನಾಮ ಪೂಜೆ ಕಾರ್ಯಕ್ರಮ ಮತ್ತು ಧರ್ಮಗುರುಗಳಿಂದ ಆಶೀರ್ವಚನ ಏರ್ಪಡಿಸಲಾಗಿತ್ತು.
ಚಂದ್ರಗುಪ್ತಮೌರ್ಯ(ಶಾಲಿನಿ)ಆಟದ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂತ್ರಾಲಯ ಮಠದ ಸುಭುದೇಂದ್ರ ತೀರ್ಥ ಸ್ವಾಮೀಜಿ, ಸುಪ್ರಿಂಕೋರ್ಟ್ ನ್ಯಾಯಧೀಶರಾದ ಅರವಿಂದ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಶಾಸಕರು ರಕ್ಷಾ ಫೌಂಡೇಸನ್ ಸಂಸ್ಥಾಪಕರಾದ ಸಿ.ಕೆ.ರಾಮಮೂರ್ತಿ, ಶಾಸಕರಾದ ಸತೀಶ್ ರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯರಾದ ನಾಗರತ್ನರಾಮಮೂರ್ತಿ ಚಾಲನೆ ನೀಡಿದರು.
ಸುಭುದೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪ್ರತಿವರ್ಷ ಶ್ರೀ ಲಲಿತಾ ಸಹಸ್ರನಾಮ ಕಾರ್ಯಕ್ರಮವನ್ನು ಯಶ್ವಸಿಯಾಗಿ ಅಚರಿಸಿಕೊಂಡು ಬರುತ್ತಿದ್ದು, ಇದು ಶ್ರೇಷ್ಠವಾದ ಕಾರ್ಯ. ಶ್ರೀ ಲಲಿತಾ ತಾಯಿಯಿಂದ ಎಲ್ಲರಿಗೂ ಆಶೀರ್ವಾದ, ಕೃಪೆ ಎಲ್ಲರಿಗೂ ಸಿಗಬೇಕು. ಭಾರತೀಯ ಸನಾತನ ಸಂಸ್ಕೃತಿ ವಿಶ್ವ ಶೇಷ್ಠವಾದದ್ದು. ನಮ್ಮ ಧರ್ಮದಲ್ಲಿ ಮಹಿಳೆಯರಿಗೆ ವಿಶೇಷ ಮಾನ್ಯತೆ ನೀಡಲಾಗಿದೆ. ಸನಾತನ ಹಿಂದೂ ಪರಂಪರೆಯಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶ, ಪೂಜೆ ಮಾಡುವ ಹಕ್ಕು ನೀಡಲಾಗಿದೆ ಎಂದರು.
ವೇದಗಳಲ್ಲಿ ಶ್ರೀಲಲಿತಾ ಸಹಸ್ರನಾಮ ವಿಶೇಷತೆ, ಮಹಿಮೆ, ಉಪಾಸನೆ ಕುರಿತು ತಿಳಿಸಲಾಗಿದೆ. ಲಲಿತಾ ಎಂದರೆ ಸರಳ, ಮಕ್ಕಳಿಗೆ ತಾಯಿಯ ಅನುಗ್ರಹ, ತನ್ಮೂಲಕ ಸಮಸ್ತ ಲೋಕಕ್ಕೆ ಮಾತೃಸ್ವರೂಪಿಣಿಯಾದ ಶ್ರೀ ಲಲಿತಾದೇವಿಯ ಸಹಸ್ರನಾಮದಿಂದ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂದು ಹೇಳಿದರು.
ನ್ಯಾಯಧೀಶರಾದ ಅರವಿಂದ್ ಕುಮಾರ್ ಮಾತನಾಡಿ, ರಕ್ಷಾ ಫೌಂಡೇಷನ್ ಶಿಸ್ತುಬದ್ದ ಸಂಘಟನೆಯ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಲಲಿತಾ ಸಹಸ್ರನಾಮ ಲಲಿತಾಂಬೆ ಪೂಜೆ ಮಾಡುವುದರಿಂದ ಸಂಕಷ್ಟಗಳು ನಿವಾರಣೆ ಯಾಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖವಿದೆ ಎಂದು ಹೇಳಿದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ರೈತ ಮತ್ತು ಸೈನಿಕ ದೇಶಕ್ಕೆ ಎರಡು ಕಣ್ಣುಗಳು ಇದ್ದಂತೆ. ದೇಶ, ರಾಜ್ಯ ಸುಭೀಕ್ಷೆಯಾಗಿರಬೇಕು ಮತ್ತು ನಾಡಿನ ಸಮಸ್ತ ಜನರು ಸುಖ, ಶಾಂತಿ ನೆಮ್ಮದ್ದಿಯಿಂದ ಬಾಳಬೇಕು ಎಂಬ ಸದಾಶಯದಿಂದ ಶ್ರೀ ಲಲಿತಾ ಸಹಸ್ರನಾಮ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನಲ್ಲಿ ಉತ್ತಮ ಮಳೆ, ಬೇಳೆಯಾಗಲಿ. ಬಂದ ಸಂಕಷ್ಟಗಳು ನಿವಾರಣೆಯಾಗಲಿ, ಎಲ್ಲರ ಬಾಳಿನಲ್ಲಿ ಬೆಳಕು ಮೂಡಲಿ ಎಂದು ಹೇಳಿದರು.
ಚಲನಚಿತ್ರ ನಟಿ ಮಾಳವಿಕ ಅವಿನಾಶ್, ತಿರುಪತಿ ದೇವಸ್ಥಾನದ ಸದಸ್ಯರಾದ ನರೇಶ್, ಮಾಜಿ ಪಾಲಿಕೆ ಸದಸ್ಯರುಗಳಾದ ಸೋಮಶೇಖರ್, ಮಾಲತಿ ಸೋಮಶೇಖರ್,ಜಲ್ಲಿ ರಮೇಶ್ ,ಧನರಾಜ್, ಗೋವಿಂದನಾಯ್ಡು, ಚಂದ್ರಶೇಖರರಾಜು, ದೀಪಿಕಾ ಮಂಜುನಾಥ್ ರೆಡ್ಡಿ, ಚನ್ನಗಿರಿಯಪ್ಪ ಮತ್ತಿತರರು ಭಾಗವಹಿಸಿದ್ದರು.