ಬಳ್ಳಾರಿ : ಮಹಾನಗರದಲ್ಲಿ ಕೇರಳದ ಕಲ್ಚರಲ್ ಅಸೋಸಿಯೇಷನ್ ಬಂಟ್ಸ್ ಭವನದಲ್ಲಿಕೇರಳ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಓಣಂ ಕಾರ್ಯಕ್ರಮವನ್ನ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೆಂದ್ರ ಉಧ್ಘಾಟಿಸಿ ಮಾತನಾಡಿದರು. ಕಳೆದ 35 ವರ್ಷಗಳಿಂದ ಸಾಂಪ್ರದಾಯಿಕ ಓಣಂ ಹಬ್ಬವನ್ನ ಯಾವುದೇ ಮತ.ಪಂಥಗಳ ಬೇದವಿಲ್ಲದೆ ಅಚ್ಚುಕಟ್ಟಾಗಿ ಆಚರಿಸುತ್ತಾ ಬಂದಿದೆ. ಕಳೆದ ವರ್ಷವೂ ಕೂಡ ಶಾಸಕನಾಗಿದ್ದ ನನ್ನನ್ನ ಪ್ರೀತ್ಯಾದರಗಳಿಂದ ಆಹ್ವಾನಿಸಿ ಸತ್ಕರಿಸಿ ಹಾರೈಸಿದ್ದಿರಿ,ನಿಮ್ಮ ಹಾರೈಕೆಯ ಫಲವಾಗಿ ಇವತ್ತು ಸಚಿವನಾಗಿ ನಿಮ್ಮಗಳ ಜೊತೆ ಓಣಂ ಸಂಭ್ರಮ ಹಂಚಿಕೊಳ್ಳುತ್ತಿರುವುದು ಅತೀವ ಸಂತಸವನ್ನುಂಟು ಮಾಡಿದೆ. ಕರ್ನಾಟಕದ ನಾಡಹಬ್ಬ ದಸರಾ ಹಬ್ಬದಂತೆ ಕೇರಳ ರಾಜ್ಯದಲ್ಲಿ ಓಣಂ ಹಬ್ಬವನ್ನ ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ಹತ್ತು ದಿನಗಳ ಕಾಲ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಚರಣೆ ಜೊತೆಗೆ ಕೇರಳದ ಸಾಂಪ್ರದಾಯಿಕ ಆಚರಣೆಗಳನ್ನ ಇಲ್ಲಿ ಆಚರಿಸುವುದು ವಿಶೇಷವಾಗಿದೆ.
ರಂಜಾನ್.ಓಣಂ.ದಸರಾ.ಕ್ರಿಸ್ಮಸ್ ಗಳಂತ ಹಬ್ಬಗಳನ್ನ ಆಚರಿಸುವ ಮೂಲಕ ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನ ಕಾಣುತ್ತಿದ್ದೇವೆ ಹಾಗಾಗಿ ನಾನು ಶಾಸಕನಾಗಿರುವ ಗ್ರಾಮೀಣ ಕ್ಷೇತ್ರದ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಎನ್ನಿಸುವುದು ಈ ಕಾರಣಕ್ಕೆ ಹಾಗೆ ಇಂತಹ ಕ್ಷೇತ್ರದಲ್ಲಿ ಶಾಸಕನಾಗಿರುವುದು ನನ್ನ ಪುಣ್ಯ ಅಂತ ಭಾವಿಸಿದ್ದೇನೆ. ಅದಲ್ಲದೆ ಇವತ್ತು ನಿಮ್ಮ ಸಮಾಜದ ಒಬ್ಬ ಸಹೋದರನಿಗಿಂತಲು ಹೆಚ್ಚಾಗಿ ಬಾವಿಸಿ ನನ್ನನ್ನ ಅಭಿನಂಧಿಸಿದ್ದೀರಿ ನಾನು ನಿಮಗೆ ಅಭಾರಿಯಾಗಿದ್ದೇನೆ,ಸದಾ ನಿಮ್ಮಗಳ ಜೊತೆ ನಾವಿದ್ದೇವೆ ನಿಮ್ಮಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ಸವಲತ್ತುಗಳ ಜೊತೆ ಕೇರಳಾ ಕಲ್ಚರಲ್ ಅಸೋಸಿಯೇಷನ್ ಗಾಗಿ ಒಂದು ಎಕರೆ ಜಮೀನು ಒದಗಿಸಿ ಅನುದಾನ ನೀಡುವ ಮೂಲಕ ಎರೆಡು ವರ್ಷದಲ್ಲಿ ಸಾಂಸ್ಕ್ರತಿಕ ಭವನ ನಿರ್ಮಾಣ ಮಾಡಿಕೊಡಲಾಗುವುದೆಂದರಲ್ಲದೆ,ನಿಮ್ಮಗಳ ದಶಕಗಳ ಬೇಡಿಕೆಯಾದ ಕೇರಳಕ್ಕೆ ರೈಲ್ವೆ ಲಿಂಕ್ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಅಂತ ಈ ಸುಸಂದರ್ಭದಲ್ಲಿ ತಿಳಿಸುತ್ತೇನೆ ಎಂದರು.
ಕಾರ್ಯಕ್ರಮ ದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ.ಮಹಾನಗರಪಾಲಿಕೆ ಮಹಾಪೌರರಾದ ಡಿ.ತ್ರಿವೇಣಿ.ಉಪ ಮಹಾಪೌರರಾದ ಶ್ರೀಮತಿ ಜಾನಕಿ.ಕೇರಳ ಕಲ್ಚರಲ್ ಅಸೋಸಿಯೇಷನ್ ನ ಗುರುಮ್ಯಾಥೀವ್.ಜಾಕಬ್.ಸೇರಿದಂತೆ ಇತರರು ಹಾಜರಿದ್ದರು.