ರಾಜ್ಯ, ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದ ಸಹಕಾರಿ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿ, ದಕ್ಷ ನಾಯಕರೆನಿಸಿಕೊಂಡಿದ್ದ, ಹಲವಾರು ಸಹಕಾರ ಸಂಘ ಸಂಸ್ಥೆಗಳ ಆರಂಭಕ್ಕೆ ಬೆಳವಣಿಗೆಗೆ ಕಾರಣಕರ್ತರಾಗಿದ್ದ ಬಿ.ಎಸ್. ವಿಶ್ವನಾಥ್ ನಿಧನರಾಗಿದ್ದಾರೆ.
ತೀರ್ಥಹಳ್ಳಿಯಲ್ಲಿ ಜನಿಸಿದ ಬಿ.ಎಸ್. ವಿಶ್ವನಾಥ್‌ರೈತ ಮುಖಂಡರಾಗಿ, ಸಹಕಾರಿಕಾರ್ಯಕರ್ತರಾಗಿಅಪಾರಜನಮನ್ನಣೆ ಗಳಿಸಿದವರು.
ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾಗಿ, ಹೊಸ ದೆಹಲಿಯ ರಾಷ್ಟ್ರೀಯ ಸಹಕಾರ ಯೂನಿಯನ್ ಅಧ್ಯಕ್ಷರಾಗಿ, ಅಂತರ ರಾಷ್ಟ್ರೀಯ ಸಹಕಾರ ಮೈತ್ರಿ ಸಂಸ್ಥೆ ಸದಸ್ಯರಾಗಿ, ರೋಬೋ ಬ್ಯಾಂಕ್ ನಿರ್ದೇಶಕರಾಗಿ, ೫೦ ವರ್ಷಗಳಿಗೂ ಹೆಚ್ಚು ಕಾಲ ಅನುಪಮ ಸೇವೆ ಸಲ್ಲಿಸಿದವರು. ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿರಾಜಕೀಯದಲ್ಲೂ, ಕೆನರಾ ಬ್ಯಾಂಕ್ ನಿರ್ದೇಶಕರಾಗಿ ಬ್ಯಾಂಕಿAಗ್‌ಕ್ಷೇತ್ರದಲ್ಲೂಅಗಾಧ ಸೇವೆ ಸಲ್ಲಿಸಿದ್ದಾರೆ.
ಬಿ.ಎಸ್. ವಿಶ್ವನಾಥ್‌ಅವರ ಅನುಪಮ ಸೇವೆಯನ್ನು ಸ್ಮರಿಸಿ, ರಾಜಕೀಯಧುರೀಣರು, ಸಹಕಾರಿ ಮುಖಂಡರುಗಳು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.