ವಿಶ್ವಕರ್ಮರನ್ನು ಸ್ತುತಿಸುವ ಭಕ್ತಿ ಗೀತ ಗಾಯನ ಮತ್ತು ನೃತ್ಯ ಸ್ಪರ್ಧೆ ಆಯೋಜನೆ; ಸೆ. 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ
ಬೆಂಗಳೂರು : ವಿಶ್ವ ಕರ್ಮ ಸೇವಾ ಪ್ರತಿನಿಷ್ಠಾನದಿಂದ ಸೆ. 30 ರಂದು “ಶ್ರೀ ವಿರಾಟ್ ವಿಶ್ವಕರ್ಮ ಮಹೋತ್ಸವ” ಅಂಗವಾಗಿ ಭಗವಾನ್ ವಿಶ್ವಕರ್ಮರ ಕುರಿತಾದ ಭಕ್ತಿ ಗೀತ ಗಾಯನ ಮತ್ತು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಶ್ರೀ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷ ಡಾ.ಬಿ.ಎಂ.ಉಮೇಶ್ ಕುಮಾರ್ ಈ ವಿಷಯ ತಿಳಿಸಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಗವಾನ್ ವಿಶ್ವಕರ್ಮರನ್ನು ಸ್ತುತಿಸುವ ಈ ಸ್ಪರ್ಧೆಗಳಿಗೆ ವಿಡಿಯೋ ಆಡಿಶನ್ ಮೂಲಕ ಸ್ಪರ್ಧಾಳುಗಳನ್ನು ಆಯ್ಕೆ ಮಾಡಿ, ಅಂತಿಮ ಸ್ಪರ್ಧೆಯನ್ನು 30 ಸೆ. ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಯಿಂದ ನಡೆಸಲಾಗುವುದು ಎಂದರು.
ಸ್ಪರ್ಧೆಗೆ ಎಲ್ಲಾ ವಯೋಮಾನ, ಎಲ್ಲಾ ಸಮುದಾಯದವರಿಗೆ ಅವಕಾಶವಿದ್ದು, ಏಕ ವ್ಯಕ್ತಿ ಇಲ್ಲವೆ ಸಮೂಹ ಗಾಯನ ಹಾಗೂ ನೃತ್ಯ ಪ್ರದರ್ಶನ ಮಾಡಬಹುದಾಗಿದೆ. ಬಹುಮಾನಗಳು 15 ಸಾವಿರ, 10 ಸಾವಿರ, 5 ಸಾವಿರ ರೂಪಾಯಿ. ಆಸಕ್ತರು 9739665171 ಸಂಖ್ಯೆಗೆ ವಾಟ್ಸ್ ಅಪ್ ಮೂಲಕ ವಿಡಿಯೋ ಕಳುಹಿಸಿ ಆಡಿಷನ್ ನಲ್ಲಿ ಪಾಲ್ಗೊಳ್ಳುವಂತೆ ಅವರು ಕೋರಿದ್ದಾರೆ ಅಡಿಷನ್ ವಿಡಿಯೋ ಕಳಿಸಲು ಕೊನೆದಿನ 25 ಸೆಪ್ಟೆಂಬರ್