ಶೈಕ್ಷಣಿಕ ವಲಯದಲ್ಲಿ  ಸುನ್ನಿ ಸ್ಟೂಡೆಂಟ್ಸ್  ಸೇವೆ ಶ್ಲಾಘನೀಯ -ಜಮೀರ್ ಅಹಮದ್

ಬೆಂಗಳೂರು : ಶೈಕ್ಷಣಿಕ ವಲಯದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಸೇವೆ ಶ್ಲಾಘನೀಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.

          ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಐವತ್ತು ವರ್ಷ ಗಳಿಂದ ಐವತ್ತು ವರ್ಷ ಗಳಿಂದ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿರುವ ಈ ಸಂಸ್ಥೆ ಇಡೀ ವಿಶ್ವಕ್ಕೆ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.

          ಅಲ್ಪಸಂಖ್ಯಾತರ ಸಮುದಾಯ ಶಿಕ್ಷಣ ದಲ್ಲಿ ಹಿಂದೆ ಇದೆ. ಶಿಕ್ಷಣ ಇದ್ದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಅಂತಹ ಕೆಲಸ ಸುನ್ನಿ ಸ್ಟೂಡೆಂಟ್ಸ್ ಸಂಸ್ಥೆಯಿಂದ ಆಗುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದವರು ಐ ಎ ಎಸ್, ಐ ಪಿಸ್ ಅಧಿಕಾರಿಗಳಾಗಿದ್ದಾರೆ ಎಂದು ಹೇಳಿದರು.

 

          ಈ ಫೆಡರೇಷನ್ ನ ಮೂಲ ಪುರುಷರು ಹಾಗೂ ಧರ್ಮ ಗುರುಗಳಾದ ಅಬೂಬಕರ್ ಅಹಮದ್ ಅವರು ಒಂದು ದೊಡ್ಡ ಶಕ್ತಿ ಆಗಿದ್ದಾರೆ. ಇಂತಹ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದು ನನ್ನ ಪುಣ್ಯ ಎಂದು ಹೇಳಿದರು.

          ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಶಿಕ್ಷಣ ವಿಚಾರದಲ್ಲಿ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ನಿಲ್ಲಿಸಿದ್ದ ವಿದ್ಯಾರ್ಥಿ ವೇತನ ಮತ್ತೆ ಆರಂಭಿಸಲಾಗಿದೆ ಎಂದು ಹೇಳಿದರು.

          ಅಲ್ಪಸಂಖ್ಯಾತರ ಸಮುದಾಯದ ಮಕ್ಕಳು ಶಿಕ್ಷಣ ಅದರಲ್ಲೂ ಉನ್ನತ ಶಿಕ್ಷಣ ದಿಂದ ವಂಚಿತ ರಾಗಬಾರದು. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

          ಕೇರಳದಲ್ಲಿ ಮದರಸ ಶಿಕ್ಷಣ ಎಲ್ಲರಿಗೂ ಮಾದರಿ. ನಮ್ಮ ರಾಜ್ಯದಲ್ಲೂ ಮದರಸ ಗಳಲ್ಲಿ ಕನ್ನಡ ಕಲಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲೂ ಮದರಸ ಬೋರ್ಡ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಜಮೀರ್ ಹೆಮ್ಮೆಯ ನಾಯಕ

 

          ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯಾಧ್ಯಕ್ಷ ಸೂಫಿಯಾನ್ ಶಕಾಫಿ ಮಾತನಾಡಿ, ರಾಜ್ಯದ ವಸತಿ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಸಚಿವರಾಗಿರುವ ಜಮೀರ್ ಅಹಮದ್ ಖಾನ್ ಉತ್ತಮ ವಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಅವರು ನಮೆಲ್ಲರ ಹೆಮ್ಮೆಯ ನಾಯಕ ಎಂದು ಹೇಳಿದರು.

ಜಮೀರ್ ಅಹಮದ್ ಅವರು ಸಂಕಷ್ಟ ಎಂದು ಬಂದ ಎಲ್ಲರಿಗೂ ನೆರವು ನೀಡುವ ಕೊಡುಗೈ ದಾನಿ ಆಗಿದ್ದಾರೆ. ಇಂದು ಈ ಕಾರ್ಯಕ್ರಮ ದಲ್ಲಿ ಅವರು ಪಾಲ್ಗೊಂಡಿರುವುದು ಸಂತೋಷ ತಂದಿದೆ ಎಂದರು.

          ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಸಾವಿರಾರು ಮದರಸ ನಡೆಸುತ್ತಿದ್ದು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ನಮ್ಮ ಸದಸ್ಯರು  ಸಮಾಜಕ್ಕೆ ಮಾರಕ ಆಗುವ ಯಾವುದೇ ಚಟುವಟಿಕೆ ಗಳಲ್ಲಿ ಪಾಲ್ಗೊಂಡ ಉದಾಹರಣೆ ಇಲ್ಲ ಎಂದು ಹೇಳಿದರು.

 

           ಕೇರಳ ಮುಸ್ಲಿಂ ಜಮಾತೆ ಪ್ರಧಾನ ಕಾರ್ಯದರ್ಶಿ ಸೈಯದ್ ಖಲೀಲುಲ್ ಬುಕಾರಿ ತಂಗಲ್, ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಸೂಫಿಯಾನ್ ಶಾಕಾಫಿ, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಮಾಜಿ ಅಧ್ಯಕ್ಷ ಶಾಫಿ ಸಾದಿ, ಮುಫ್ತಿ ಅಬೂಬಕರ್,  ನಸೀರ್ ಲಕ್ಕಿ ಸ್ಟಾರ್ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Print
Email

Leave a Comment

Your email address will not be published. Required fields are marked *

Translate »
Scroll to Top