ಬಳ್ಳಾರಿ: ಬಳ್ಳಾರಿ ನಗರದ ಇಂದಿರ ನಗರ ಪ್ರದೇಶದಲ್ಲಿ ಇಂದು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನದಡಿ ಪೊಲೀಯೋ ಲಸಿಕೆ ಕುರಿತಾದ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
11ನೇ ಸೆಪ್ಟೆಂಬರ್ ರಿಂದ 16 ಸೆಪ್ಟೆಂಬರ್ ವರೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಬಗ್ಗೆ ವಿವರಿಸಿದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ ಹಾಗೂ ಮೋಕಾ ಕ್ಷೇತ್ರದ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್ ಇವರು ತಾಯಂದಿರಿಗೆ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಉದ್ದೇಶ, ತಪ್ಪಿಹೋದ ಹಾಗೂ ಲಸಿಕೆಯಿಂದ ವಂಚಿರಾದ 0-5 ವಯಸ್ಸಿನ ಮಕ್ಕಳು, ಗರ್ಭಿಣಿಯರಿಗೆ ಹಾಗು ಬಾಕಿ ಇರುವ ಲಸಿಕೆಗಳನ್ನು ನೀಡಲಾಗುತ್ತದೆ ಹಾಗು ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಲಸಿಕೆ ಕೊಡಿಸಿ ಹಾಗು ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಎಂದು ತಾಯಂದಿರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಯಶೋದ ಹಾಗು ನಿರೀಕ್ಷಣಾ ಅಧಿಕಾರಿಗಳಾದ ಎರ್ರಿಸ್ವಾಮಿ ಮತ್ತು ಆಶಾ ಕಾರ್ಯಕರ್ತೆಯರು ಮತ್ತು ತಾಯಂದಿರು ಭಾಗವಹಿಸಿದ್ದರು.