ಮಾ. 01 ರಿಂದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

Kannada Nadu
ಮಾ. 01 ರಿಂದ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಾರ್ಚ್ 01 ರಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಚಲನಚಿತ್ರರಂಗದ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಚಿತ್ರೋತ್ಸವ ಕೋರ್ ಸಮಿತಿಯ ಅಧ್ಯಕ್ಷರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ  ಬಿ.ಬಿ. ಕಾವೇರಿ ಅವರು ತಿಳಿಸಿದರು.

ಇಂದು  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಚಿತ್ರೋತ್ಸವದ ಸಿದ್ದತೆ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ರಾಜಾಜಿನಗರದಲ್ಲಿರುವ ಪಿವಿಆರ್ ಸಿನಿಮಾಸ್ ಒರಾಯನ್ ಮಾಲ್ನಲ್ಲಿರುವ 11 ಸ್ಕ್ರೀನ್ಗಳಲ್ಲಿ ಮಾರ್ಚ್ 02 ರಿಂದ ಚಲನಚಿತ್ರಗಳ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ಚಿತ್ರೋತ್ಸವದಲ್ಲಿ 60 ದೇಶಗಳ ಸುಮಾರು 200 ಅತ್ಯುತ್ತಮ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಆಯಾ ದೇಶದ ಸಂಸ್ಕøತಿಯನ್ನು ಬಿಂಬಿಸಲಿವೆ. ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿದ್ದ ಆತ್ಯುತ್ತಮ ಚಲನಚಿತ್ರಗಳು ಭಾಗವಹಿಸುತ್ತವೆ. ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಕೊರಿಯಾ, ಪೆÇೀಲೆಂಡ್, ಬೆಜಿಲ್, ಜಾರ್ಜಿಯಾ, ಬೆಲ್ಜಿಯಂ, ನೆದರ್ಲೆಂಡ್, ಫಿನ್ಲೆಂಡ್, ಇರಾನ್, ಅರ್ಜೆಂಟೈನಾ, ಕೆನಡಾ, ಡೆನ್ಮಾರ್ಕ್, ಗ್ರೀಸ್, ರμÁ್ಯ, ಫಿಲಿಫೈನ್ಸ್, ರೊಮೇನಿಯಾ, ಜಪಾನ್, ಸ್ಪೇನ್, ಇಂಡೋನೇಷಿಯಾ, ಇಟಲಿ ಮೊದಲಾದ ದೇಶಗಳ ಅತ್ಯುತ್ತಮ ಚಲನಚಿತ್ರಗಳು ಸಮಕಾಲೀನ ವಿಶ್ವ ಸಿನಿಮಾ ವಿಭಾಗದ ಮೂಲಕ “ಬೆಂಗಳೂರಿನಲ್ಲಿ ಜಗತ್ತು’ ಎನ್ನುವ ಶೀರ್ಷಿಕೆಯಡಿ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.

ಈ ಬಾರಿಯ ಚಲನಚಿತ್ರೋತ್ಸವವನ್ನು ಮುಖ್ಯಮಂತ್ರಿಗಳ ಆಶಯದಂತೆ “ಸರ್ವ ಜನಾಂಗದ ಶಾಂತಿಯ ತೋಟ” ಎನ್ನುವ ಕವಿನುಡಿಯ ಘೋಷವಾಕ್ಯದೊಡನೆ ಆಚರಿಸಲಾಗುತ್ತದೆ. ಇಡೀ ವಿಶ್ವ ಇಂದು ಸಮಸ್ಯೆಗಳ ನಡುವೆ, ಬಿಕ್ಕಟ್ಟುಗಳ ನಡುವೆ ತೊಳಲಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈಗ ನಮಗೆ ಬೇಕಾಗಿರುವುದು ಸರ್ವ ಧರ್ಮ ಸಮನ್ವಯ. ಅಂತಹ ನೀತಿಯನ್ನು ಪ್ರತಿಪಾದಿಸುವ, ಪ್ರೀತಿ, ವಿಶ್ವಾಸ, ಭಾತೃತ್ವಕ್ಕಾಗಿ ತುಡಿಯುವ ಮಾನವ ಧರ್ಮ ಪ್ರತಿಪಾದಿಸುವ ಸಿನಿಮಾಗಳ ಮೆರವಣಿಗೆ ಈ ಚಿತ್ರೋತ್ಸವದಲ್ಲಿ ಕಾಣ ಸಿಗಲಿದೆ.

ಚಲನಚಿತ್ರೋತ್ಸವ ನಡೆಯುವ ದಿನಗಳಲ್ಲಿ ಪ್ರತಿ ದಿನ ಚಲನಚಿತ್ರ ಮಾಧ್ಯಮ, ತಂತ್ರಜ್ಞಾನ ಮತ್ತು ಉದ್ಯಮಕ್ಕೆ ಸಂಬಂಧಪಟ್ಟಂತೆ ತಜ್ಞರೊಂದಿಗೆ ಸಂವಾದ, ಉಪನ್ಯಾಸ, ಮಾಸ್ಟರ್ಕ್ಲಾಸ್ ಮೊದಲಾದ ಸಿನಿಮಾ ಶೈಕ್ಷಣಿಕ ಕಾರ್ಯಕ್ರಮಗಳಿರುತ್ತವೆ ಎಂದರು.

ಕನ್ನಡದ ಮೊದಲ ವಾಕ್ ಚಿತ್ರವಾದ ‘ಸತಿ ಸುಲೋಚನ’ 1934 ಮಾರ್ಚ್ 3 ರಂದು ಬಿಡಗಡೆಯಾಗಿದ್ದು, ಈ ದಿನವನ್ನು  ಸಿನಿಮಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಕನ್ನಡ ಚಿತ್ರರಂಗ 91 ವರ್ಷಗಳ ನಡೆದು ಬಂದ ದಾರಿಯನ್ನು ಈ ಮೂಲಕ ಮೆಲುಕು ಹಾಕುವ ವಿಚಾರಸಂಕಿರಣ, ಸಂವಾದ ಸಹ ನಡೆಯಲಿದೆ. ಚಲನಚಿತ್ರ ನಿರ್ಮಾಣದಲ್ಲಿ ವಿವಿಧ ಕೃತಕ ಬುದ್ಧಿಮತ್ತೆ (ಎಐ)ಯ ಬಳಕೆ ಕುರಿತಂತೆ ಇಡೀ ದಿನ ಕಾರ್ಯಾಗಾರ ಸಂಯೋಜನೆಯನ್ನು ವಿದ್ಯಾಸಾಗರ್ ಮಾಡಲಿದ್ದಾರೆ.

ಪ್ರಾದೇಶಿಕ ಸಿನಿಮಾ ಪ್ರದರ್ಶಕ ಸಮಸ್ಯೆಗಳ ಬಗ್ಗೆ ಚರ್ಚೆ ಕುರಿತು ಮುಖೇಶ್ ಮೆಹ್ತಾ ಮಾತನಾಡುವರು. ಫಿಲಂ ಲ್ಯಾಬ್ ಮತ್ತು ಫಿಲಂ ಪ್ರೊಡಕ್ಷನ್ ಕಾರ್ಯವಿಧಾನಗಳ ಬಗ್ಗೆ ಥೈಲ್ಯಾಂಡಿನ ಸಿನಿಮಾ ನಿರ್ಮಾಪಕ ರೇಮಂಡ್ ಫಠಾಣ್ ವಿರಂಗೂನ್ ಅವರು ಉಪನ್ಯಾಸ ನೀಡಲಿದ್ದಾರೆ. ಶ್ರೀಮತಿ ಶಮಂತ ಡಿ.ಎಸ್. ಅವರು ಸಿನಿಮಿಯ ಪ್ರತಿಪಾದಕತೆ ಮತ್ತು ಪ್ರೇಕ್ಷಕರ ಮೇಲೆ ಅದರ ಪ್ರಭಾವ ಕುರಿತಂತೆ ವಿಚಾರ ಸಂಕಿರಣ ಸಂಯೋಜನೆ ಮಾಡಲಿದ್ದಾರೆ ಎಂದರು.

ಶತಮಾನೋತ್ಸವ ಸ್ಮರಣೆ ಅಂಗವಾಗಿ ಜನಪ್ರಿಯ ನಟ, ನಿರ್ದೇಶಕ ರಾಜ್ ಕಪೂರ್, ನಿರ್ದೇಶಕ, ನಟ ಗುರುದತ್, ಹೊಸ ಅಲೆ ಸಿನಿಮಾಕ್ಕೆ ಗಟ್ಟಿನೆಲೆ ಒದಗಿಸಿದ ನಿರ್ದೇಶಕ ರಿತ್ವಿಕ್ ಘಟಕ್ ಮತ್ತು ಕನ್ನಡದ ಖ್ಯಾತ ನಟ ಕೆ.ಎಸ್. ಅಶ್ವತ್, ಅವರ ಸಾಧನೆ ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.

ಇತ್ತೀಚೆಗೆ ನಿಧನರಾದ ನಿರ್ದೇಶಕ ಶ್ಯಾಮ್ ಬೆನಗಲ್, ಕುಮಾರ್ ಸಹಾನಿ, ಡಾ. ರಾಜೀವ್ ತಾರಾನಾಥ್, ದ್ವಾರಕೀಶ್, ಸದಾನಂದ ಸುವರ್ಣ, ಎಂ.ಟಿ. ವಾಸುದೇವ ನಾಯರ್ ಅವರ ಸಂಸ್ಮರಣೆ ಮಾಡಲಾಗುವುದು. ಜೊತೆಗೆ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲಂ ಕ್ರಿಟಿಕ್ಸ್ (ಫಿಪ್ ರೆಸ್ಕಿ) ಸಂಸ್ಥೆಯವರಿಂದ ಆರ್. ವಿ. ವಿಶ್ವವಿದ್ಯಾಲಯದ ಸಹಯೋಗದಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಹೆಸರಾಂತ ಚಲನಚಿತ್ರ ಛಾಯಾಗ್ರಾಹಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕøತ ವಿ.ಕೆ. ಮೂರ್ತಿ ನೆನಪಿನ ವಿಶೇಷ ಉಪನ್ಯಾಸ. ಸಂಗೀತ ಮತ್ತು ಸಿನಿಮಾ ಕುರಿತು ವಿಶೇಷ ಉಪನ್ಯಾಸ. ಕ್ಲಾಸಿಕ್ ಸಿನಿಮಾಗಳ ಸಂರಕ್ಷಣೆ, ಸಂಗ್ರಹ, ಡಿಜಿಟಲೀಕರಣ ಪ್ರಕ್ರಿಯೆ ಜೊತೆಗೆ ಮರೆಯಲಾಗದ ಸಿನಿಮಾಗಳು ಕುರಿತಂತೆ ಚರ್ಚೆ ನಡೆಸಲಾಗುವುದು ಹಾಗೂ ಈ ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧೆ ವಿಭಾಗವಿದ್ದು,  ಈ ಮೂರು ವಿಭಾಗಗಳಲ್ಲಿ ತಲಾ ಮೂರು ಅತ್ಯುತ್ತಮ ಚಲನಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದರು.

ಚಿತ್ರೋತ್ಸವದಲ್ಲಿ ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗ, ಚಿತ್ರ ಭಾರತಿ-ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗ, ಕನ್ನಡ ಸಿನಿಮಾ ಸ್ಪರ್ಧಾ ವಿಭಾಗ. ಸಮಕಾಲೀನ ವಿಶ್ವ ಸಿನಿಮಾ. ಕನ್ನಡ ಜನಪ್ರಿಯ ಸಿನಿಮಾ. ವಿಮರ್ಶಕರ ವಾದ,. ಜೀವನಾಧಾರಿತ ಚಿತ್ರಗಳು, ದೇಶ ಕೇಂದ್ರಿತ ವಿಶೇಷ ಜಾರ್ಜಿಯಾ ಮತ್ತು ಬ್ರೆಜಿಲ್ ದೇಶದ ಚಲನಚಿತ್ರಗಳು, ಭಾರತೀಯ ಉಪಭಾμÁ ಚಲನಚಿತ್ರಗಳು.

ಜರ್ಮನಿಯ ಖ್ಯಾತ ನಿರ್ದೇಶಕ ವಿಮ್ ವೆಂಡರ್ಸ್ ಮತ್ತು ಪೆÇೀಲೆಂಡ್ನ ಕ್ರಿಸ್ತಾಫ್ ಕಿಸ್ಲಾವ್ಸ್ಕಿ ಮತ್ತು ಭಾರತದ ಹೆಸರಾಂತ ನಿರ್ದೇಶಕರಾದ ಶ್ಯಾಮ್ ಬೆನಗಲ್ ಅವರ ಪುನರಾವಲೋಕನ, ಸಂರಕ್ಷಿಸಲ್ಪಟ್ಟ ಮಹತ್ವದ ಚಲನಚಿತ್ರಗಳು ಈ ವಿಭಾಗದಲ್ಲಿ ಕನ್ನಡದ ಘಟಶ್ರಾದ್ಧ, ಪಲ್ಲವಿ, ಮತ್ತು ಇತರ ಭಾರತೀಯ ಭಾμÉಗಳ ಚಿತ್ರಗಳ ಪ್ರದರ್ಶನವಿದೆ. ಶತಮಾನೋತ್ಸವ ಸ್ಮರಣೆ, ಶ್ರದ್ಧಾಂಜಲಿ ಮತ್ತು ನೆನಪು, ಚಿತ್ರೋತ್ಸವದ ವಸ್ತು ಕೇಂದ್ರಿತ ಸಿನಿಮಾಗಳು ‘ಸರ್ವ ಜನಾಂಗದ ಶಾಂತಿಯ ತೋಟ’ ಕುರಿತ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು

ಮಾರ್ಚ್ 8ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಗೌರವಾನ್ವಿತ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸುವರು. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯವನ್ನು ಫೆಬ್ರವರಿ 12 ರಿಂದ ಆರಂಭಿಸಲಾಗುವುದು. ಆಸಕ್ತರು ಚಿತ್ರೋತ್ಸವದ ಜಾಲತಾಣ www.biffes.org ನಲ್ಲಿ ನೀತಿ ನಿಯಮಗಳನ್ನು ಅನುಸರಿಸಿ ಪ್ರತಿನಿಧಿ ನೋಂದಣಿ ಶುಲ್ಕ ಪಾವತಿಸಿ ನೊಂದಾಯಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟವರು ಪ್ರತಿನಿಧಿಗಳಾಗಲು ಅರ್ಹರಾಗಿರುತ್ತಾರೆ.

ಸಾರ್ವಜನಿಕರಿಗೆ ರೂ. 800/-, ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರ ಸಮಾಜಗಳ ಸದಸ್ಯರಿಗೆ ಮತ್ತು ಹಿರಿಯ ನಾಗರಿಕರಿಗೆ ರೂ. 400/-ಗಳು ಚಿತ್ರೋತ್ಸವದ ಪ್ರತಿನಿಧಿ ನೋಂದಣಿ ಶುಲ್ಕವಾಗಿರುತ್ತದೆ. ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ಪ್ರತಿನಿಧಿಗಳು ಫೆಬ್ರವರಿ 18 ರಿಂದ ಕರ್ನಾಟಕ ಚಲನಚಿತ್ರ ಅಕಾಡೆಮಿ, ನಂದಿನಿ ಲೇಔಟ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಶಿವಾನಂದ ಸರ್ಕಲ್, ಗಾಂಧಿ ನಗರ ಇಲ್ಲಿ ಪ್ರವೇಶ ಕಾರ್ಡ್ಗಳನ್ನು ಪಡೆಯಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಹಾಗೂ ಚಿತ್ರೋತ್ಸವ ಸಮಿತಿಯ ಉಪಾಧ್ಯಕ್ಷರಾದ ಹೇಮಂತ ಎಂ.ನಿಂಬಾಳ್ಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟಾರ್ ಹಾಗೂ ಚಿತ್ರೋತ್ಸವ ಕೋರ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಿಮಂತರಾಜು.ಜಿ ಅವರು  ಉಪಸ್ಥಿತರಿದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";